ಕಾಲೇಜಿನಲ್ಲಿ ನಡೆದ ಘಟನೆಯ ಬಗ್ಗೆ ಮಗಳಿಗೆ ಪ್ರಶ್ನೆಸಿದ ತಾಯಿ; ಕೋಪಗೊಂಡ ಮಗಳಿಂದ ತಾಯಿಗೇ 30 ಬಾರಿ ಇರಿತ..!

mk
Published on

ಅಮೆರಿಕ: 23 ವರ್ಷದ ಮಹಿಳೆಯೊಬ್ಬಳು ತನ್ನ ತಾಯಿಯನ್ನು ಕಬ್ಬಿಣದ ಬಾಣಲೆಯಿಂದ ಹೊಡೆದು ಕುತ್ತಿಗೆಗೆ ಸುಮಾರು 30 ಬಾರಿ ಇರಿದು ಕೊಂದ ಘಟನೆ ಅಮೆರಿಕದಲ್ಲಿ ನಡೆದಿದೆ. ಹತ್ಯೆ ಮಾಡಿದ ಮಹಿಳೆಯನ್ನ ಯಾವುದೋ ವಿಚಾರಕ್ಕೆ ಕಾಲೇಜಿನಿಂದ ಹೊರ ಹಾಕಲಾಗಿತ್ತು.


ಮಗಳನ್ನು ಕಾಲೇಜಿನಿಂದ ಹೊರ ಹಾಕಿರುವ ವಿಚಾರ ಹೇಗೋ ತಾಯಿಗೆ ತಿಳಿದು ಬಿಟ್ಟಿದೆ. ಯಾವ ಕಾರಣಕ್ಕೆ ಕಾಲೇಜಿನಿಂದ ನಿನ್ನ ಹೊರ ಹಾಕಿದ್ದಾರೆಂದು ತಾಯಿ ಮಗಳ ಬಳಿ ಪ್ರಶ್ನೆ ಮಾಡಿದ್ದಾರೆ. ಕಾಲೇಜಿನ ರಹಸ್ಯ ತಾಯಿಗೆ ಗೊತ್ತಾಗಿಹೋಯಿತು ಎಂದು ಹೆತ್ತ ತಾಯಿಯನ್ನೇ ಮಗಳು 30 ಬಾರಿ ಚಾಕುವಿನಿಂದ ಇರಿದಿದ್ದಾಳೆ.


2020ರ ಮಾರ್ಚ್​ 3 ರಂದು ಈ ಘಟನೆ ನಡೆದಿತ್ತು. ಇದೀಗ ಸೆಪ್ಟೆಂಬರ್ 28ರಂದು ಸಿಡ್ನಿ ಪೊವೆಲ್ ಶಿಕ್ಷೆಯನ್ನು ಕೋರ್ಟ್​ ಪ್ರಕಟಿಸಲಿದೆ.
ಮೌಂಟ್ ಯೂನಿಯನ್ ಯೂನಿವರ್ಸಿಟಿಯ ಹಳೆಯ ವಿದ್ಯಾರ್ಥಿನಿ ಪೊವೆಲ್​ ಅನ್ನು ತಪ್ಪಿತಸ್ಥೆ ಎಂದು ಕೋರ್ಟ್​ ಘೋಷಿಸಿದೆ.


ಚಾಕು ಇರಿತದ ನಂತರ ಬ್ರೆಂಡಾ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬ್ರೆಂಡಾ ಸಾವನ್ನಪ್ಪಿದ್ದರು.


ಪೊವೆಲ್ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು, ಆಕೆ ತನ್ನ ತಾಯಿಯನ್ನು ಕೊಲೆ ಮಾಡಿದಾಗ, ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎಂದು ವಕೀಲರು ವಾದಿಸಿದ್ದಾರೆ. ಆದರೆ ವಕೀಲರ ವಾದ ಸರಿ ಇಲ್ಲ. ಪೊವೆಲ್​ ತನ್ನ ತಾಯಿಗೆ ಒಂದು ಬಾರಿಯಲ್ಲ 30 ಬಾರಿ ಇರಿದಿದ್ದಾಳೆ. ಆಕೆಯ ಉದ್ದೇಶ ತಾಯಿಯನ್ನು ಕೊಲ್ಲುವುದೇ ಆಗಿತ್ತೆಂದು ನ್ಯಾಯಾಲಯ ತಿಳಿಸಿದೆ.


ಇದೀಗ ಸೆಪ್ಟೆಂಬರ್ 28ರಂದು ಪೊವೆಲ್​​ ಶಿಕ್ಷೆಯನ್ನು ನಿಗದಿಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net