VIDEO: ತನಗೆ ಕೊವಿಡ್​-19 ಇದೆ ಎಂದು ಗೊತ್ತಾಗುತ್ತಿದ್ದಂತೆ ತುದಿಗಾಲಿನಲ್ಲಿ ಕುಳಿತು ಹುಚ್ಚಿಯಂತೆ ಕೂಗಾಡಿದ ಯುವತಿ...

Beejing
Published on

ಬೀಜಿಂಗ್​: ಇಡೀ ಜಗತ್ತನ್ನು ಆತಂಕದ ಕೂಪಕ್ಕೆ ತಳ್ಳಿದೆ ಸಾಂಕ್ರಾಮಿಕ ರೋಗ ಕರೊನಾ ವೈರಸ್​. ಕರೊನಾ ಬಂದರೆ ದೇಹದ ಆರೋಗ್ಯ ಹದಗೆಡುವುದರೊಂದಿಗೆ ಮನಸನ್ನೂ ದುರ್ಬಲ ಮಾಡುತ್ತಿದೆ. ಕೆಲವರಂತೂ ವಿಪರೀತ ಕ್ಷೋಭೆಗೆ ಒಳಗಾಗುತ್ತಿದ್ದಾರೆ.
ಲಕ್ಷಾಂತರ ಜನರು ಕೊವಿಡ್​-19ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಒಂದಷ್ಟು ಜನರು ತಮಗೆ ಕರೊನಾ ಬಂದಿದೆ ಎಂಬುದನ್ನು ಅರಗಿಸಿಕೊಳ್ಳಲಾಗದೆ ನೋವು ಪಡುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಪ್ರೀತಿಪಾತ್ರರಿಗೆ ಯಾರಿಗಾದರೂ ಕೊವಿಡ್​-19 ಸೋಂಕು ತಗುಲಿದೆ ಎಂದು ಗೊತ್ತಾದರೆ ಸಾಕು ಅತಿದೊಡ್ಡ ಶಾಕ್​ಗೆ ಒಳಗಾಗುತ್ತಿದ್ದಾರೆ.

ಇದೀಗ ಬೀಜಿಂಗ್​​ನಿಂದ ಒಂದು ವಿಡಿಯೋ ವೈರಲ್​ ಆಗಿದೆ. ಯುವತಿಯೋರ್ವಳಿಗೆ ಒಂದು ಕರೆ ಬರುತ್ತದೆ. ನಿಮಗೆ ಕರೊನಾ ಪಾಸಿಟಿವ್​ ಇದೆ ಎಂದು ಆ ಕಡೆಯಿಂದ ಆಸ್ಪತ್ರೆ ಸಿಬ್ಬಂದಿ ಹೇಳುತ್ತಿದ್ದಂತೆ, ಇತ್ತ ಆಕೆ ಹುಚ್ಚಿಯಂತೆ ಆಡುವುದನ್ನು ವಿಡಿಯೋದಲ್ಲಿ ನೋಡಬಹುದು. ತೀವ್ರ ಆಘಾತಕ್ಕೆ ಒಳಗಾಗಿ, ಅಳುತ್ತ, ತುದಿಗಾಲಿನಲ್ಲಿ ಕುಳಿತು ರಂಪಾಟ ಮಾಡುತ್ತಾರೆ. ತನಗೆ ಕೊವಿಡ್​-19 ಸೋಂಕು ತಗುಲಿದ್ದನ್ನು ಅರಗಿಸಿಕೊಳ್ಳಲಾಗದೆ ಆಕೆ ಹೀಗೆ ಆಡುತ್ತಿರುವುದನ್ನು ನೋಡಿದರೆ ಒಂದು ಕ್ಷಣ ಮನಸಿಗೆ ನೋವಾಗದೆ ಇರದು. ಇದನ್ನೂ ಓದಿ: 2019ರ ಪುಲ್ವಾಮಾ ದಾಳಿಯ ಇನ್ನೋರ್ವ ಆರೋಪಿಯನ್ನು ಬಂಧಿಸಿದ ಎನ್​ಐಎ

ಟ್ವಿಟರ್ ಬಳಕೆದಾರರೋರ್ವರು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಬೀಜಿಂಗ್​ನ ಶಿಜಿಂಗ್​ಶಾನ್​ ವಾಂಡಾ ಪ್ಲಾಜಾ (ಅಂಗಡಿ ಮಳಿಗೆಗಳ ಕಟ್ಟಡ) ಕ್ಕೆ ಆಗಮಿಸಿದ್ದ ಸಂದರ್ಭದಲ್ಲೇ ಆಕೆಗೆ ಆಸ್ಪತ್ರೆಯಿಂದ ಕರೆ ಬಂದಿದೆ. ನಿಮಗೆ ಕರೊನಾ ಸೋಂಕು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆ ಸುದ್ದಿ ಕೇಳುತ್ತಿದ್ದಂತೆ ಆಕೆ ದೊಡ್ಡದಾಗಿ ಅತ್ತಿದ್ದಾರೆ. ತುದಿಗಾಲಿನಲ್ಲಿ ಕುಳಿತು ಎದುರಿನ ಗೋಡೆಯನ್ನ ಬಡಿದಿದ್ದಾರೆ. ಆಕೆ ಕೂಗುವುದರಲ್ಲೇ ಎಲ್ಲವನ್ನೂ ಅರ್ಥ ಮಾಡಿಕೊಂಡ ಸುತ್ತಲಿನ ಜನರೂ ಕೂಡ ಆಕೆಯಿಂದ ದೂರವೇ ಓಡುವುದನ್ನು ವಿಡಿಯೋದಲ್ಲಿ ನೋಡಬಹುದು. ಸದ್ಯ ಆ ಪ್ಲಾಜಾದ ಬಾಗಿಲು ಮುಚ್ಚಲಾಗಿದೆ. ಇದನ್ನೂ ಓದಿ: ‘ಈ ವಿಡಿಯೋ ನನ್ನ ಪಾಲಿಗೆ ಅತ್ಯಮೂಲ್ಯವಾದದ್ದು ಚಿರು..❤️’: ಧ್ರುವ ಸರ್ಜಾ ಪತ್ನಿ ಪ್ರೇರಣಾರ ಭಾವುಕ ಪೋಸ್ಟ್​

ಅದಾದ ಬಳಿಕ ಯುವತಿ ಪ್ಲಾಜಾದ ಪ್ರವೇಶ ದ್ವಾರದ ಬಳಿ ಬಂದು ಏಕಾಂಗಿಯಾಗಿ ಕೂರುತ್ತಾಳೆ. ಆ್ಯಂಬುಲೆನ್ಸ್​ನಲ್ಲಿ ಬಂದ ಆರೋಗ್ಯ ಕಾರ್ಯಕರ್ತರು ಆಕೆಯನ್ನು ಕರೆದುಕೊಂಡು ಹೋಗುವ ಇನ್ನೊಂದು ವಿಡಿಯೋವೂ ವೈರಲ್ ಆಗಿದೆ.
ಬೀಜಿಂಗ್​ನಲ್ಲಿ ಜೂನ್​ನಲ್ಲಿ 300 ಕರೊನಾ ಕೇಸ್​ಗಳು ಪತ್ತೆಯಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net