ಸಂಸತ್ತಿನಲ್ಲೇ ಮಹಿಳೆಯನ್ನು ರೇಪ್​ ಮಾಡಲು ಯತ್ನಿಸಿದ ಸಚಿವ! ಕೇಸ್​ ಮುಚ್ಚುವ ಪ್ರಯತ್ನದಲ್ಲಿ ಪೊಲೀಸ್​!

rape
Published on

ಲಂಡನ್​: ಸಚಿವರೊಬ್ಬರು ತನ್ನ ಮೇಲೆ ಸಂಸತ್​ ಭವನದ ಒಳಗೆಯೇ ರೇಪ್​ ಮಾಡಲು ಪ್ರಯತ್ನಿಸಿರುವುದಾಗಿ ಮಹಿಳೆಯೊಬ್ಬಳು ದೂರನ್ನಿತ್ತಿದ್ದಾಳೆ. ಈ ಮಹಿಳೆಯ ದೂರಿನಿಂದಾಗಿ ಪೂರ್ತಿ ಬ್ರಿಟನ್​ ಸರ್ಕಾರದಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಸಚಿವರು ನನ್ನನ್ನು ಅವರ ಕೈನಲ್ಲಿ ಹಿಡಿದು ಎಳೆದುಕೊಂಡರು. ನನ್ನನ್ನು ರೇಪ್​ ಮಾಡಲು ಪ್ರಯತ್ನಿಸಿದರು. ನಾನು ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದೆ ಎಂದು ಲಂಡನ್​ನ ಮಹಿಳೆ ಅಲ್ಲಿನ ಸಚಿವರ ವಿರುದ್ಧ ದೂರನ್ನು ನೀಡಿದ್ದಾಳೆ. ಕನ್ಸರ್ವೇಟಿವ್​ ಪಕ್ಷದ ಸಚಿವರೇ ಈ ಕೆಲಸ ಮಾಡಿದ್ದಾಗಿ ಆಕೆ ಹೆಸರಿಸಿದ್ದಾಳೆ. ಸರ್ಕಾರದ ಉನ್ನತ ಸ್ಥಾನದಲ್ಲಿರುವವರ ಮೇಲೆ ದೂರು ನೀಡುತ್ತಿರುವುದರಿಂದಾಗಿ ಪೊಲೀಸರು ದೂರನ್ನು ತೆಗೆದುಕೊಳ್ಳಲು ಹಿಂಜರಿದಿದ್ದಾಗಿ ಆಕೆ ಆರೋಪಿಸಿದ್ದಾಳೆ.

ಈ ಪ್ರಕರಣವನ್ನು ಪೊಲೀಸರು ಜನವರಿ ತಿಂಗಳಲ್ಲೇ ಮುಚ್ಚಿ ಹಾಕಿದ್ದಾರೆ. ಆದರೆ ಇದೀಗ ಸಂತ್ರಸ್ತ ಮಹಿಳೆ ಮತ್ತೊಮ್ಮೆ ದೂರು ದಾಖಲಿಸಿದ್ದು, ದೇಶಾದ್ಯಂತ ಪ್ರಕರಣದ ಬಗ್ಗೆ ತರೇವಾರು ಸುದ್ದಿ ಹರಿದಾಡಲಾರಂಭಿಸಿದೆ. ನನ್ನ ಹೆಸರನ್ನು ಹಾಳು ಮಾಡಲು ಮಾಡಿರುವ ಕುತಂತ್ರವಿದು, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಚಿವರು ಆರೋಪವನ್ನು ತಳ್ಳಿ ಹಾಕಿದ್ದಾರೆ. ಅತ್ಯಾಚಾರ ಪ್ರಯತ್ನದ ಹಿಂದಿನ ದಿನವೂ ಸಚಿವರ ಕಡೆಯಿಂದ ಮಹಿಳೆಗೆ ಬೆದರಿಕೆ ಬಂದಿತ್ತು ಎಂದು ಸಂತ್ರಸ್ತೆಯ ಸ್ನೇಹಿತರೊಬ್ಬರು ದೂರಿದ್ದಾರೆ. ನನ್ನ ಮಗಳು ನೀಡಿದ್ದ ದೂರನ್ನು ವಾಪಾಸು ತೆಗೆದುಕೊಳ್ಳಬೇಕೆಂದು ಹೇಳಿ ಪೊಲೀಸರು ಒತ್ತಡ ಹೇರಿದ್ದರು ಎಂದು ಮಹಿಳೆಯ ತಾಯಿ ಆರೋಪಿಸಿದ್ದಾರೆ.

ಸದ್ಯದ ಮಟ್ಟಿಗೆ ಬ್ರಿಟನ್​ ಸರ್ಕಾರದಲ್ಲಿ ಈ ಪ್ರಕರಣ ದೊಡ್ಡ ತಲೆನೋವಾಗಿದೆ. ಸರಿಯಾದ ತನಿಖೆಯ ನಂತರ ಪ್ರಕರಣದ ನಿಜಾಂಶ ಹೊರಬರಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net