

ಮುಂಬೈ: ಪತಿ ತನ್ನ 6 ವರ್ಷದ ಮಗನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಪತ್ನಿಯೇ ಠಾಣೆ ಮೆಟ್ಟಿಲೇರಿರುವ ಘಟನೆ ಮುಂಬೈನ ಮಲಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
27 ವರ್ಷದ ಮಹಿಳೆ ಮಲಾಡ್ ಪೊಲೀಸರಿಗೆ ದೂರು ನೀಡಿದ್ದು, ತನ್ನ ಪತಿ ಮೋಶಿನ್ ಶೇಖ್ ಮತ್ತು ಅತ್ತೆ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಎರಡು ಗರ್ಭಪಾತ ಮಾಡಿಸಿದ್ದಾರೆ. ನನ್ನ ಪಾಲಕರು 9.55 ಲಕ್ಷ ರೂ ವರದಕ್ಷಿಣೆ ನೀಡಿದ್ದರೂ, ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು, ಹಲವು ಬಾರಿ ಹಲ್ಲೆ ನಡೆಸಿದ್ದಾರೆ. ಈ ನಡುವೆ ನನ್ನ ಪತಿ ನನ್ನ 6 ವರ್ಷದ ಮಗನಿಗೆ ಬಲವಂತದ ಬಾಯಿ ಸಂಭೋಗದಂತಹ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾಳೆ.
ಎಫ್ಐಆರ್ ಪ್ರಕಾರ, ಘಟನೆಗಳು ಜುಲೈನಿಂದ ಡಿಸೆಂಬರ್ 2023 ರ ನಡುವೆ ಸಂಭವಿಸಿವೆ. ಮಹಿಳೆ ತನ್ನ ಮೊದಲ ವಿಚ್ಛೇದನದ ನಂತರ ಜುಲೈನಲ್ಲಿ ಆರೋಪಿ ಮೋಶಿನ್ ಶೇಖ್ನನ್ನು ವಿವಾಹವಾಗಿದ್ದು, ನನ್ನ ಪತಿ, ಅತ್ತೆ ಗುಲ್ನಾಜ್ ಶೇಖ್ ಮತ್ತು ಮಾವ ಯಾಸಿನ್ ಶೇಖ್ನನಗೆ ಹಾಗೂ ನನ್ನ ಮಗನಿಗೆ ಲೈಂಗಿಕ ಕಿರುಕುಳ, ಬಲವಂತವಾಗಿ ಅಸಹಜ ಲೈಂಗಿಕ ಕ್ರಿಯೆ, ವರದಕ್ಷಿಣೆ ಕಿರುಕುಳ, ಹಲ್ಲೆಯಂತಹ ಕೃತ್ಯಗಳನ್ನು ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.