ಬೆಳಿಗ್ಗೆ ಕಸ ಗುಡಿಸುವ ವೇಳೆ ದುರಂತ: ಮಹಿಳೆಯ ಪ್ರಾಣ ತೆಗೆದ ಮಂಗಗಳ ಗುಂಪು..?

monkeys
ಸಾಂದರ್ಭಿಕ ಚಿತ್ರ
Published on

ಮಹಬೂಬ್​ನಗರ: ಮಂಗಗಳ ಕಿಡಿಗೇಡಿತನಕ್ಕೆ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿರುವ ವಿಚಿತ್ರ ಘಟನೆ ತೆಲಂಗಾಣದ ಮಹಬೂಬ್​ನಗರದಲ್ಲಿ ನಡೆದಿದೆ.

ಪಟ್ಟಣದ ಲಕ್ಷ್ಮೀ ಥಿಯೇಟರ್ ಬಳಿ ವಾಸವಿರುವ ಸಾಬಿರಾ ಬೇಗಂ(55) ಎಂಬಾಕೆಯೇ ಮೃತ ದುರ್ದೈವಿಯಾಗಿದ್ದು, ನಿನ್ನೆ ಸಾಯಂಕಾಲದಿಂದಲೇ ಮಹಿಳೆಯ ಮನೆಯ ಬಳಿ ಮಂಗಗಳ ಗುಂಪು ವಾಸ್ತವ್ಯ ಹೂಡಿದ್ದವು. ಮಹಿಳೆಯು ಪ್ರತಿದಿನದಂತೆ ಬೆಳಿಗ್ಗೆ ಎದ್ದು ಮನೆಯಂಗಳವನ್ನು ಕಸಗೂಡಿಸುತ್ತಿದ್ದ ವೇಳೆ ಮಂಗಗಳು ಮನೆಯ ಮೇಲಿನ ಸಿಮೆಂಟ್ ಬ್ಲಾಕ್‌ಗೆ ಕಟ್ಟಿದ್ದ ಸರ್ವೀಸ್ ವೈರ್​ನ್ನು ಎಳೆದಿವೆ.

ಮಹಿಳೆಯ ದುರಾದೃಷ್ಟ ಎಂಬಂತೆ ಕೋತಿಗಳ ತಾಕತ್ತಿಗೆ ಸಿಮೆಂಟ್ ಗೋಡೆ ಕೊಂಚ ಭಾಗ ಆಕೆಯ ಮೇಲೆ ಕಳಚಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಕೂಡಲೇ ಅಕ್ಕಪಕ್ಕದ ಮನೆಯವರು ಆಕೆಯನ್ನು ಗಮನಿಸಿ ಆಸ್ಪತ್ರೆಗೆ ಕರೆದೊಯ್ದಿದ್ದು, ಆಕೆ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಇದನ್ನೂ ಓದಿ: ನನ್ನ ಮಗನಿಗೆ ಗಲ್ಲು ಶಿಕ್ಷೆ ನೀಡಿ: ಮಗನ ವಿರುದ್ಧವೇ ಸಾಕ್ಷಿ ಹೇಳಿದ ತಾಯಿ..

ಇನ್ನೊಂದೆಡೆ, ಮಹಬೂಬಾಬಾದ್ ಪಟ್ಟಣದಲ್ಲಿ ಮಂಗಗಳ ಕಾಟ ಜಾಸ್ತಿಯಾಗಿದ್ದು, ಊರವರು ಹೊರಗೆ ಬರಲು ಹೆದರುತ್ತಿದ್ದಾರೆ,. ಈ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ಈಗಲಾದರೂ ಪಟ್ಟಣದಲ್ಲಿ ಮಂಗಗಳ ಕಾಟದಿಂದ ಜನರನ್ನು ರಕ್ಷಿಸುವಂತೆ ಸ್ಥಳೀಯ ಅಧಿಕಾರಿಗಳು ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net