ಕುಡಿದು ಕಿರುಕುಳ ನೀಡುವ ಪತಿಯನ್ನು ದೋಸೆ ಕಾವಲಿಯಿಂದ ಹೊಡೆದು ಕೊಂದ ಪತ್ನಿ!

dosa pan
Published on

ತಮಿಳುನಾಡು: ಕುಡಿದು ಕಿರುಕುಳ ನೀಡುತ್ತಿದ್ದ ಗಂಡನನ್ನು ಹೆಂಡತಿಯೊಬ್ಬಳು ದೋಸೆ ಕಾವಲಿಯಿಂದ ಹೊಡೆದು ಕೊಂದ ಘಟನೆ ನೆರೆಯ ತಮಿಳುನಾಡಿನಲ್ಲಿ ನಡೆದಿದೆ.

ತಿರುಪ್ಪೂರ್ ನಗರದ ಸೆಂಥಿಲ್ ನಗರದ ರವಿಕುಮಾರ್ ಮೃತ. ಜ್ಯೋತಿಮಣಿ ಕೊಲೆ ಆರೋಪಿಯಾಗಿದ್ದಾರೆ. ಪತಿ ಮದ್ಯದ ಚಟ ಹೊಂದಿದ್ದು, ಈ ವಿಚಾರವಾಗಿ ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು. ಈ ಜಗಳ ಕೊಲೆ ಮಾಡುವ ಹಂತಕ್ಕೆ ತಲುಪಿದೆ.

ಮಾರ್ಚ್ 22 ರಂದು ರವಿಕುಮಾರ್ ಕುಡಿದ ಅಮಲಿನಲ್ಲಿ ಮನೆಗೆ ಬಂದು ಜ್ಯೋತಿಮಣಿ ಮೇಲೆ ಹಲ್ಲೆ ನಡೆಸಿದ್ದ. ಇದನ್ನು ಸಹಿಸಲಾಗದೆ ಜ್ಯೋತಿಮಣಿ ರವಿಕುಮಾರ್​ಗೆ ದೋಸೆ ಕಾವಲಿಯಿಂದ ಹೊಡೆದಿದ್ದಾಳೆ. ರವಿಕುಮಾರ್ ಪ್ರಜ್ಞೆ ತಪ್ಪಿ ಮೃತ ಪಟ್ಟಿದ್ದಾರೆ.

ಜ್ಯೋತಿಮಣಿ, ಪತಿ ಶವವನ್ನು ಆಂಬ್ಯುಲೆನ್ಸ್‌ನಲ್ಲಿ ಈರೋಡ್‌ನ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಹೃದಯಾಘಾತವಾಗಿದೆ ಎಂದು ಹೇಳಿದರು. ರವಿಕುಮಾರ್​​ ತಂದೆ ದುಷ್ಕೃತ್ಯದ ಬಗ್ಗೆ ಶಂಕಿಸಿ ತಿರುಮುರುಗನಪೂಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೊಂಡಾದ ವಸ್ತುವಿನಿಂದ ಉಂಟಾದ ಗಾಯಗಳಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದುಬಂದಿದೆ.

ವರದಿಯೊಂದಿಗೆ ಪೊಲೀಸರು ಜ್ಯೋತಿಮಣಿಯನ್ನು ವಿಚಾರಣೆಗೊಳಪಡಿಸಿದ್ದು, ರವಿಕುಮಾರ್‌ನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಬುಧವಾರ ಆಕೆಯನ್ನು ಬಂಧಿಸಿ ಕೊಯಮತ್ತೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net