ಮಹಿಳೆಯರಿಗೆ ಶಿಕ್ಷಣ ಶಕ್ತಿಯಾಗಿ ನಿಂತಿದೆ; ಸಂಗೀತಾ ದೊಡ್ಡಮನಿ

4-RNR-04
Published on

ರಾಣೆಬೆನ್ನೂರ: ನಮ್ಮ ದೇಶದಲ್ಲಿ ಮಹಿಳೆಯರಿಗೆ ಶಿಕ್ಷಣ ಆತ್ಮಸ್ಥೆ$ರ್ಯ ನೀಡುವ ಶಕ್ತಿಯಾಗಿ ನಿಂತಿದೆ ಎಂದು ಪಿಎಸ್​ಐ ಸಂಗೀತಾ ದೊಡ್ಡಮನಿ ಹೇಳಿದರು.

ನಗರದ ಬಿಎಜೆಎಸ್​ಎಸ್​ ಸ್ವತಂತ್ರ ಪದವಿ ಪೂರ್ವ ಮಹಿಳಾ ಕಾಲೇಜಿನ 2025&-26ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾಥಿರ್ನಿಯರ ಸ್ವಾಗತ, ಕ್ರೀಡಾಕೂಟ, ಸಾಂಸತಿಕ, ಎನ್​ಎಸ್​ಎಸ್​ ಕಾರ್ಯ ಚಟುವಟಿಕೆಗಳಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾಥಿರ್ನಿಯರು ದೊಡ್ಡ ಗುರಿ ಇಟ್ಟುಕೊಂಡು ಓದಿ ತಂದೆ ತಾಯಂದಿರಿಗೂ ಓದಿದ ಶಾಲಾ ಕಾಲೇಜಿಗೂ ಕೀತಿರ್ ತರಬೇಕು. ಸಾಮಾಜಿಕ ಜಾಲ ತಾಣ, ಮೊಬೈಲ್​ನಿಂದ ದೂರವಿದ್ದು ಶಿಕ್ಷಣದ ಗುರಿಯನ್ನು ಸಾಧಿಸಿ ಎಂದರು.

ಬಿಎಜೆಎಸ್​ಎಸ್​ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದಶಿರ್ ಹಾಗೂ ಆಡಳಿತಾಧಿಕಾರಿ ಡಾ. ಆರ್​.ಎಂ. ಕುಬೇರಪ್ಪ ಮಾತನಾಡಿ, ವಿದ್ಯಾಥಿರ್ ಜೀವನದ ಸಮಯ ಹಾಳು ಮಾಡಿಕೊಳ್ಳದೆ ಪುಸ್ತಕದ ಓದು ಹಾಗೂ ಶ್ರೇಷ್ಠ ಸಾಧಕರ ಉದಾಹರಣೆ ಇಟ್ಟುಕೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಎಚ್​. ಬಿ. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಎಚ್​.ಎ. ಭಿಕ್ಷಾವತಿರ್ಮಠ, ಶಿಕ್ಷಕರಾದ ಸುರೇಂದ್ರ ನಾಯಕ, ಬಿ.ಕೆ. ಚೌಡಣ್ಣನವರ, ಎ. ಶಂಕರನಾಯ್ಕ, ಎಸ್​.ಎಚ್​. ಹುಚ್ಚಗೊಂಡರ, ಅಶೋಕ ಬಣಕಾರ, ರಾಜಪ್ಪ ಎಂ., ಶಾರದಾ ವಾಲಿ, ಲಚ್ಚನಾಯ್ಕ ಎಲ್​. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net