'ಜವಾನ್​'ನಲ್ಲಿ ಶಾರುಖ್​​ ಮೆಟ್ರೋನಲ್ಲಿ ಹಾಡಿದ 'ಬೇಕರಾರ್​'​​ ಹಾಡಿಗೆ ಅದೇ ಅವತಾರದಲ್ಲಿ ಹೆಜ್ಜೆ ಹಾಕಿದ ಮಹಿಳೆ; ವಿಡಿಯೋ ವೈರಲ್​

jjjj
Published on

ಮೆಟ್ರೋ ಕೋಚ್‌ನಲ್ಲಿ ಮಹಿಳೆಯೊಬ್ಬರು ಸಖತ್​​ ಆಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ವೀಡಿಯೊದಲ್ಲಿ, ಸಹೇಲಿ ರುದ್ರ ಎಂಬ ಮಹಿಳೆ ಶಾರುಖ್​​​ ಖಾನ್​​ ಅವರ ಹಿಟ್ ಚಿತ್ರ 'ಜವಾನ್' ನಲ್ಲಿ ಕಾಣಿಸಿಕೊಂಡಿರುವ 'ಬೇಕಾರಾರ್ ಕರ್ಕೆ ಹುಮೇನ್' ಎಂಬ ಹಾಡಿಗೆ ಯಾವ ರೀತಿ ನಟಿಸಿದ್ದಾರೋ, ಅದೇ ರೀತಿ ಹೆಜ್ಜೆ ಹಾಕಿದ್ದಾರೆ.


ಮೆಟ್ರೋ ಹೈಜಾಕ್‌ನ ಮಧ್ಯೆ 1962ರ ಸುಮಧುರ ಟ್ರ್ಯಾಕ್‌ನ ಟ್ಯೂನ್‌ಗೆ ಶಾರುಖ್​​ ಹೆಜ್ಜೆ ಹಾಕಿರೋ ಸೀನ್​​, ಈಗಾಗಲೇ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಸಹೇಲಿ ರುದ್ರ ಅವರು ಶಾರುಖ್​​​ ರೀತಿಯೇ ಹೆಜ್ಜೆ ಹಾಕಿದ ವಿಡಿಯೋವನ್ನ ನ್ನ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ಹಂಚಿಕೊಂಡಿದ್ದಾರೆ. ಚಲನಚಿತ್ರದಿಂದ ಖಾನ್ ಅವರ ಬ್ಯಾಂಡೇಜ್ ಲುಕ್ ಅನ್ನು ಮಹಿಳೆ ಧರಿಸಿದ್ದಾರೆ.


ಇನ್ಸ್​​ಟಾಗ್ರಾಂನಲ್ಲಿ ಹಂಚಿಕರಯಾದ ನಂತರ ಈ ವಿಡಿಯೋ 10.1 ಮಿಲಿಯನ್​ಗೂ ಹೆಚ್ಚು ವೀಕ್ಷಣೆಯನ್ನ ಗಳಿಸಿದೆ. ಕೋಲ್ಕತ್ತಾದ ಕಂಟೆಂಟ್ ಕ್ರಿಯೇಟರ್ ಸಹೇಲಿ ಜನರು ಈ ವೀಡಿಯೊಗೆ ಮಿಶ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.


ಮತ್ತೊಂದೆಡೆ, ಸಹೇಲಿಯ ಧೈರ್ಯ ಶ್ಲಾಘನೀಯ ಎಂದು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.


ಶಾರುಖ್ ಖಾನ್ ಮತ್ತು ಅಟ್ಲೀ ಅವರ ಚಿತ್ರ 'ಜವಾನ್' ಸೆಪ್ಟೆಂಬರ್ 7 ರಂದು ಬಿಡುಗಡೆಯಾದಾಗಿನಿಂದ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿದೆ. ಈಗಾಗಲೇ ವಿಶ್ವಾದ್ಯಂತ ರೂ 1000-ಕೋಟಿ ಕ್ಲಬ್‌ಗೆ ಪ್ರವೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net