ರಕ್ತದಲ್ಲೇ ಕಿಚ್ಚ ಸುದೀಪ್​ ಚಿತ್ರ ಬರೆದ ಕಲಾವಿದೆ! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

sudeep
Published on

ಬೆಂಗಳೂರು: ಕಿಚ್ಚ ಸುದೀಪ್​ ಅನೇಕ ಚಿತ್ರಗಳಲ್ಲಿ ನಟಿಸಿದ್ದು ಅಪಾರ ಅಭಿಮಾನಿ ಬಳಗವನ್ನು ದೇಶಾದ್ಯಂತ ಹೊಂದಿದ್ದಾರೆ. ಅವರು ಕನ್ನಡವಲ್ಲದೇ ತೆಲುಗು, ಹಿಂದಿ ಸೇರಿದಂತೆ ನಾನಾ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದು ಬಾಲಿವುಡ್​ನ ಸಲ್ಮಾನ್​ ಖಾನ್​ ಜತೆಗೂ ಹತ್ತಿರದ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಸ್ಟಾರ್​ ನಟರ ಚಿತ್ರವನ್ನು ಹಚ್ಚೆ ಹಾಕಿಸಿಕೊಳ್ಳುವವರಿಂದ ಹಿಡಿದು, ತಮ್ಮ ರಕ್ತದಲ್ಲೇ ಚಿತ್ರ ಬಿಡಿಸುವವರವರೆಗೆ ನಾನಾ ರೀತಿಯ ಅಭಿಮಾನಿಗಳು ಇರುತ್ತಾರೆ. ಇದೀಗ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್​ ಆಗುತ್ತಿದ್ದು ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ತಮ್ಮದೇ ರಕ್ತದಲ್ಲಿ ಕಿಚ್ಚ ಸುದೀಪ್​ ಚಿತ್ರವನ್ನು ಬಿಡಿಸಿ ಸಂಚಲನ್ನು ಮೂಡಿಸುತ್ತಿದ್ದಾರೆ.

ಶಿವಮೊಗ್ಗ ಮೂಲದ ವೈಷ್ಣವಿ ದೀಪು ಸಸ್ಯಾಹಾರಿ ಎನ್ನಲಾಗುತ್ತಿದ್ದು ಈ ಬಗ್ಗೆ ಸುದೀಪ್ ಅಭಿಮಾನಿ ಬಳಗವೊಂದು "ರಕ್ತ ಮೊಟ್ಟೆ ಮಾಂಸವನ್ನು ನೋಡದೆ ಇರುವ ಇವರು ತಮ್ಮದೇ ರಕ್ತದಲ್ಲಿ ಚಿತ್ರ ಬಿಡಿಸಿದ್ದು ನಿಜಕ್ಕೂ ಗ್ರೇಟ್​" ಎಂದು ಟ್ವೀಟ್ ಮಾಡಿದ್ದಾರೆ.

ಈ ಕುರಿತಾಗಿ ನಾನಾ ರೀತಿಯ ಪ್ರತಿಕ್ರಿಯೆಗಳನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಕೈ ಮುಗಿಯುವ ಇಮೋಜಿಗಳನ್ನು ಬಳಸಿ ಕಾಮೆಂಟ್ ಮಾಡಿದ್ದರೆ, ಕೆಲವರು ಹಾಗೆಲ್ಲ ರಕ್ತವನ್ನು ವ್ಯರ್ಥ ಮಾಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net