ಆಟೋದಲ್ಲಿ ಅಮ್ಮನ ಹೆಣ ಇಟ್ಟುಕೊಂಡು ಗೋಳಾಡಿದ ಮಗ! ತಾಯಿಯ ಸಾವಿಗೆ ಆಸ್ಪತ್ರೆಯೇ ಕಾರಣವೆಂಬ ಆರೋಪ

auto
Published on

ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮನನ್ನು ಆಸ್ಪತ್ರೆಗೆ ಕರೆತಂದ ಮಗ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗದೆ, ಆಕೆ ಆಟೋದಲ್ಲಿ ಕುಳಿತು ಪ್ರಾಣ ಬಿಡುವುದನ್ನು ನೋಡುತ್ತ ಅಸಹಾಯಕನಾಗಿ ನಿಂತಿದ್ದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

28 ವರ್ಷದ ಮುಕುಲ್​ ವ್ಯಾಸ್​ ತನ್ನ ತಾಯಿ ಕಿರಣ ವ್ಯಾಸ (52) ಅವರನ್ನು ಆಸ್ಪತ್ರೆಗೆ ಕರೆ ತಂದಿದ್ದರು. ಸರ್ದಾರ್​ ವಲ್ಲಭ ಭಾಯಿ ಪಟೇಲ್​ ಆಸ್ಪತ್ರೆಗೆ ಸೇರಿಸಲೆಂದು ಕರೆತರಲಾಗಿತ್ತು. ಆದರೆ ಆಸ್ಪತ್ರೆಯವರು ರೋಗಿಯನ್ನು ದಾಖಲಿಸಿಕೊಳ್ಳುವ ಮೊದಲು ಅನೇಕ ಕ್ರಮಗಳನ್ನು ಅನುಸರಿಸುವಂತೆ ಹೇಳಿದ್ದಾರೆ. ಜಿಲ್ಲಾ ಕಣ್ಗಾವಲು ಅಧಿಕಾರಿಯಿಂದ ರೆಫರೆನ್ಸ್​ ಪತ್ರ ತರಬೇಕು ಎಂದಿದ್ದಾರೆ. ನಿಮಗೆ ಮೆಸೇಜ್​ ಬರುತ್ತೆ ಅದನ್ನ ಕೊಡಬೇಕು.. ಹೀಗೆ ನಾನಾ ರೀತಿಯ ನಿಯಮಗಳನ್ನು ಹೇಳಿದ್ದಾರೆ. ಗಂಟೆಗಟ್ಟಲೆ ಆ ಕೆಲಸದಲ್ಲೇ ಮುಕುಲ್​ ಕಾಲ ಕಳೆದಿದ್ದಾನೆ.

ಇತ್ತ ಆಟೋದಲ್ಲಿದ್ದ ಕಿರಣಗೆ ಉಸಿರಾಟ ತೊಂದರೆ ತೀವ್ರವಾಗಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾಳೆ. ಅದಾದ ನಂತರ ಮುಕುಲ್​ ತನ್ನ ತಾಯಿಯ ಸಾವಿಗೆ ಆಸ್ಪತ್ರೆಯವರೇ ಕಾರಣ ಎಂದು ಆರೋಪಿಸಿದ್ದಾನೆ. ಯಾರಾದರೂ ಒಬ್ಬರು ಸಾಯುತ್ತಿದ್ದರೆ ಅವರಿಗೆ ಚಿಕಿತ್ಸೆ ಕೊಡುವುದು ಮುಖ್ಯವೋ ಅಥವಾ ಅವರ ನಿಯಮ ಪಾಲನೆ ಮಾಡುವುದು ಮುಖ್ಯವೋ ಎಂದು ಪ್ರಶ್ನಿಸಿದ್ದಾರೆ. ವೈದ್ಯಕೀಯ ಅವ್ಯವಸ್ಥೆಗೆ ಇದೊಂದು ನಿದರ್ಶನವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net