'ಹುಕ್ ರಾಜಾ ಜಿ'ಗೆ ಹೊಲದಲ್ಲಿ ಸೀರೆಯುಟ್ಟ ಮಹಿಳೆ ನೃತ್ಯ..ವೀಡಿಯೋ ವೈರಲ್​

hook
Published on

ಭೋಪಾಲ್​: ರೀಲ್​ಗಳ ಹುಚ್ಚು ಹಳ್ಳಿಯಿಂದ ಡೆಲ್ಲಿವರೆಗೆ ಯಾರನ್ನೂ ಬಿಡುತ್ತಿಲ್ಲ. ಯಾವುದಾದರೂ ಹಾಡು ಫೇಮಸ್​ ಆಗುತ್ತಿದ್ದಂತೆ ಅದಕ್ಕೆ ಹೊಲಗದ್ದೆ ಎನ್ನದೆ ರೀಲ್ಸ್​ ರಾಣಿಯರು ಕುಣಿದು ಕುಪ್ಪಳಿಸುತ್ತಾರೆ. ಇಲ್ಲೊಂದು ವೀಡಿಯೋ ವೈರಲ್​ ಆಗಿದ್ದು, ಮಹಿಳೆ ತನ್ನ ನೃತ್ಯ ಕೌಶಲ್ಯದೊಂದಿಗೆ 'ಹುಕ್ ರಾಜಾ ಜಿ' ಹಾಡಿಗೆ ಸ್ಟೆಪ್ಸ್​ ಹಾಕಿದ್ದಾಳೆ.

ಇನ್‌ಸ್ಟಾಗ್ರಾಮ್ ನಲ್ಲಿ ಹರಿದಾಡುತ್ತಿರುವ ವೀಡಿಯೋವನ್ನು ಮಧ್ಯಪ್ರದೇಶದ ಕಂಟೆಂಟ್ ಕ್ರಿಯೇಟರ್ ರಾಂಬಾಯಿ ಅವರದ್ದು ಎಂದು ಗುರುತಿಸಲಾಗಿದೆ. ಆಕೆ ಯಾವುದೇ ವಿಶೇಷ ಉಡುಪು ಧರಿಸದೆ, ಸಾಧಾರಣ ಸೀರೆ ಉಟ್ಟು ತಲೆ ಮೇಲೆ ಘೂಂಘಾಟ್ ಹಾಕಿಕೊಂಡು ನೃತ್ಯ ಮಾಡಿದ್ದಾಳೆ.

ಆಕೆ ಹೊಲದ ಬಳಿ ಸರಳವಾಗಿ ಸ್ಟೆಪ್ಸ್​ ಹಾಕಿರುವುದಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಜೂನ್ 29 ರಂದು ರಂಬಾಯಿ ತನ್ನ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದು ಈಗಾಗಲೇ ವೈರಲ್ ಆಗಿದೆ ಮತ್ತು ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಆಕರ್ಷಿಸಿದೆ.

'ಹುಕ್ ರಾಜಾ ಜಿ' ಹಾಡಿಗೆ ಆಕೆಯ ನೃತ್ಯವನ್ನು ವೀಕ್ಷಿಸಿದ ವೀಕ್ಷಕರು, ಹೃದಯದ ಎಮೋಜಿಗಳನ್ನು ಹಾಕುವ ಮೂಲಕ ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

'ಹುಕ್ ರಾಜಾ ಜಿ' ಹಾಡನ್ನು 2023 ರಲ್ಲಿ ಡಿಜೆ ರಂಗದಾರ್ ನಾಚ್ ದಂಗಲ್ (ಸಂಪುಟ 1) ಆಲ್ಬಂ ಅಡಿಯಲ್ಲಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net