

ಲಂಡನ್: ಗಂಟೆಗೆ 110 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಏಕಾಂಗಿ ಮಹಿಳೆಯೊಬ್ಬಳು ಸ್ಟೀರಿಂಗ್ ಬಿಟ್ಟು ಕಿಟಿಕಿಯಿಂದ ಹೊರ ಚಾಚಿದಂತೆ ಎದ್ದು ನಿಂತು ಪ್ರಯಾಣಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ಪರದೆ ಮೇಲೆ "ನಾನು ಸಾಯಲು ಹೋಗುತ್ತಿರುವೇ" ಎಂದು ಬರೆದಿದ್ದು, ಅಪರಿಚಿತ ಮಹಿಳೆಯ ಅಪಾಯಕಾರಿ ಸಾಹಸವು ಇಂಗ್ಲೆಂಡ್ ಸರ್ರೆ ಕ್ಲ್ಯಾಕೆಟ್ ಲೇನ್ ಸರ್ವೀಸ್ ರಸ್ತೆಯಲ್ಲಿ ನಡೆದಿದೆ. ಶನಿವಾರ ನಡುರಾತ್ರಿ 1.30ರ ಸಮಯದಲ್ಲಿ ಈ ಪ್ರಸಂಗ ಜರುಗಿದ್ದು, ಕೊನೆಗೆ M25 ಕಾರಿನಿಂದ ಹೊರ ಬಿದ್ದರೂ ಪ್ರವಾಡ ರೀತಿಯಲ್ಲಿ ಮಹಿಳೆ ಪಾರಾಗಿದ್ದಾಳೆ.
ಈ ಕುರಿತು ಸರ್ರೆ ಪೊಲೀಸ್ ಅಧಿಕಾರಿಗಳು ಟ್ವೀಟ್ ಮಾಡಿದ್ದು, ಮಹಿಳೆಗೆ ಯಾವುದೇ ಗಂಭೀರ ಗಾಯವಾಗಿಲ್ಲ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಬದುಕುಳಿದಿದ್ದಾಳೆ ಎಂದು ಹೇಳಿದ್ದಾರೆ.
ಮಹಿಳೆಯನ್ನು ಬಂಧಿಸಿಲ್ಲ. ಬದಲಾಗಿ ಆಕೆಗೆ ಚಿಕಿತ್ಸೆ ಕೊಡಿಸಿ ಬುದ್ಧಿವಾದ ಹೇಳಿ ಕಳುಹಿಸಲಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯ ನಡೆಯನ್ನು ಖಂಡಿಸಿದ್ದು, ಕ್ರಮಕ್ಕೂ ಆಗ್ರಹಿಸಿದ್ದಾರೆ. (ಏಜೆನ್ಸೀಸ್) (ವಿಡಿಯೋ ಕೃಪೆ: ಡೈಲಿ ಮೇಲ್)