Boiling Water : ಇದನ್ನು ಮಾಡಲೇ ಬೇಡಿ.. ಕೊತ-ಕೊತ ಕುದಿಯುವ ನೀರನ್ನು ಐಸ್ ಮಾಡಲು ಹೋಗಿ ಮೈ ಕೈ ಸುಟ್ಟುಕೊಂಡಳು!

pocket Be careful
Published on

Boiling Water:  ಕುದಿಯುವ ನೀರಿನಿಂದ ಐಸ್ ಮಾಡುವ ಟ್ರೆಂಡ್  ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಅಪಾಯಕಾರಿ ಪ್ರವೃತ್ತಿಯು ಪ್ರಚಲಿತದಲ್ಲಿದೆ. ಇದರಲ್ಲಿ, ಜನರು ಕುದಿಯುವ ನೀರನ್ನು ಹೀಮ ಹಾಗೂ ಶೀತ ವಾತಾವರಣದ ಗಾಳಿಯಲ್ಲಿ ಎಸೆಯುತ್ತಾರೆ, ಅದು ಹಿಮಾವೃತ ಹೊಗೆಯಾಗಿ ಬದಲಾಗುತ್ತದೆ. ಈ ಟ್ರೆಂಡ್ ನೋಡಲು ಎಷ್ಟು ಆಕರ್ಷಕವಾಗಿದೆಯೋ ಅಷ್ಟೇ ಅಪಾಯಕಾರಿಯೂ  ಆಗಿದೆ.  ಹೀಗೆ ಮಾಡಲು ಪ್ರಯತ್ನಿಸುತ್ತಿರುವಾಗ ಮಹಿಳೆಯೊಬ್ಬರಿಗೆ ಭೀಕರ ಅಪಘಾತ ಸಂಭವಿಸಿದೆ.

 ವಿಡಿಯೋದಲ್ಲಿ ಏನಿದೆ?: 

ಕ್ಯಾಮೆರಾ ಮುಂದೆ ಪೋಸ್ ನೀಡುತ್ತಿರುವಾಗ ಮಹಿಳೆ ಕುದಿಯುವ ನೀರಿನಿಂದ ತುಂಬಿದ ಕೆಟಲ್ ಅನ್ನು ಗಾಳಿಯಲ್ಲಿ ಎಸೆಯುವುದನ್ನು ನೀವು ವೀಡಿಯೊದಲ್ಲಿ ನೋಡುತ್ತೀರಿ. ಆದರೆ ಮುಂದಿನ ಕ್ಷಣದಲ್ಲಿ ಮಹಿಳೆಯ ಮುಖದ ಮೇಲೆ ಕುದಿಯುವ ನೀರು ಬೀಳುತ್ತದೆ. ಮಹಿಳೆ ನೋವಿನಿಂದ ನರಳುತ್ತಾ ನೆಲದ ಮೇಲೆ ಬೀಳುತ್ತಾಳೆ. ಮೈ- ಕೈ ಸುಟ್ಟು ಬಿದ್ದು ಹೊರಳಾಡಲು ಶುರು ಮಾಡುತ್ತಾಳೆ. ಈ ವಿಡಿಯೋ ಇಲ್ಲಿಗೆ ಎಂಡ್​​ ಆಗುತ್ತದೆ.

ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಚ್ಚರಿಯ ವಿಷಯವೆಂದರೆ ಅಪಘಾತವಾದ ಮರುದಿನವೇ ಮಹಿಳೆ ಮತ್ತೊಮ್ಮೆ ಪ್ರಯತ್ನಿಸಲು ಯತ್ನಿಸಿದ್ದಾಳೆ. ಜನರು ಪೋಸ್ಟ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಜನರು ಏಕೆ ಇಂತಹ ಮೂರ್ಖತನವನ್ನು ಮಾಡುತ್ತಾರೆ ಎಂದು ತಿಳಿಯುತ್ತಿಲ್ಲ ಎನ್ನುತ್ತಿದ್ದಾರೆ.

ಇದು ಎಷ್ಟೇ ಆಕರ್ಷಕವಾಗಿ ಕಾಣಿಸಬಹುದು, ಅದನ್ನು ಅನುಸರಿಸುವ ಮೊದಲು ಅದರ ಎಲ್ಲಾ ಅಪಾಯಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ ಹಾಗೂ ಎಚ್ಚರಿಕೆ ತೆಗೆದುಕೊಳ್ಳಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net