ಜಾಲತಾಣದಲ್ಲಿ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಯುವತಿ ಹಿಂದೆ ಬಿದ್ದ ಪೊಲೀಸರು!

Woman Biker
Published on

ಸೂರತ್​: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಸೋಶಿಯಲ್ ಮೀಡಿಯಾ ಪ್ರಭಾವಿ ಯುವತಿಯನ್ನು ಗುಜರಾತಿನ ಸೂರತ್​ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಯುವತಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಇರುವ ತನ್ನ ಇನ್​​ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದರು. ಅದರಲ್ಲಿ ಮಾಸ್ಕ್​ ಮತ್ತು ಹೆಲ್ಮೆಟ್​ ಧರಿಸದೇ ಬೈಕ್​ ರೈಡ್​ ಮಾಡಿದ್ದಳು. ಈ ವಿಡಿಯೋ ಸೂರತ್​ ಪೊಲೀಸರ ಗಮನಕ್ಕೆ ಬಂದ ತಕ್ಷಣ ಯುವತಿಯನ್ನು ಬಂಧಿಸಲಾಗಿದೆ.

ವಿಡಿಯೋದ ಗಂಭೀರತೆ ಅರಿತು ಯುವತಿಯನ್ನು ಬಂಧಿಸಿರುವುದಾಗಿ ಸೂರತ್​ ಪೊಲೀಸರು ತಿಳಿಸಿದ್ದಾರೆ. ಇಂತಹ ಅನೇಕ ವಿಡಿಯೋಗಳು ವೈರಲ್​ ಆಗಿದ್ದು, ಅದರಲ್ಲಿ ಆಕೆ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಅತಿವೇಗದ ಚಾಲನೆ ಮಾಡಿರುವುದು ಬೆಳಕಿಗೆ ಬಂದಿದೆ.

ಇಂತಹ ನಡವಳಿಕೆಗಳಿಗೆ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಜಾಲತಾಣದಲ್ಲಿ ಲೈಕ್ಸ್​ ಮತ್ತು ಶೇರ್​ ಗಿಟ್ಟಿಸಿಕೊಳ್ಳಲು ಜೀವದ ಜತೆ ಚೆಲ್ಲಾಟ ಆಡುವುದು ಅರಿಯಲ್ಲ. ಇಂತಹ ಘಟನೆಗಳು ಮರುಕಳಿಸಿದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತೀರಿ ಎಂದು ಸೂರತ್​ ಪೊಲೀಸರು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net