VIDEO| ವರದಕ್ಷಿಣೆ ಬೇಕೆ ಬೇಕು... ಮಹಿಳೆ ಮೇಲೆ ಪತಿ ಮನೆಯವರಿಂದ ಮಾರಣಾಂತಿಕ ಹಲ್ಲೆ

attack
Published on

ಲಖನೌ: ವರದಕ್ಷಿಣೆ ವಿಚಾರವಾಗಿ ಮಹಿಳೆಯೊಬ್ಬಳನ್ನು ಆಕೆಯ ಪತಿ ಮನೆಯವರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದಿದೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯ ಮೇಲೆ ಪತಿ ಮನೆಯವರು ಕೊಡಲಿಯಿಂದ ಮನಬಂದಂತೆ ಹಲ್ಲೆ ನಡೆಸುತ್ತಿರುವುದು ಕಂಡು ಬರುತ್ತದೆ.

ಮನಬಂದಂತೆ ಹಲ್ಲೆ

ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯನ್ನು ಆಕೆಯ ಮಾವ ಮನೆಯಿಂದ ಬಲವಂತವಾಗಿ ಹೊರಗೆ ಎಳೆದು ತಂದು ಕೊಡಲಿಯಿಂದ ಮನ ಬಂದಂತೆ ಹಲ್ಲೆ ನಡೆಸುತ್ತಿರುವುದು ಕಂಡು ಬರುತ್ತದೆ. ಹಾಡಹಗಲಿನಲ್ಲಿ ಘಟನೆ ನಡೆದಿದ್ದು ಸಂತ್ರಸ್ತೆ ನೆರವಿಗೆ ಧಾವಿಸುವಂತೆ ನೆರದಿದ್ದವರ ಬಳಿ ಅಂಗಲಾಚುತ್ತಿರುವುದು ಕಂಡು ಬರುತ್ತದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಮೋದಿನಗರ ಪೊಲೀಸ್​ ಠಾಣೆಯ ಅಧಿಕಾರಿ ಒಬ್ಬರು ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳ್ಲಲಿ ವೈರಲ್​ ಆಗುತ್ತಿದ್ದಂತೆ ಹಲ್ಲೆಗೊಳಗಾದ ಮಹಿಳೆಯ ಮಾವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಉಳಿದ ಆರೋಪಿಗಳ ಪರಾರಿಯಾಗಿದ್ದು ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net