ಚಿತ್ರ ವಿ-ಚಿತ್ರ: ಮಹಿಳೆಯ ಏಕಾಂಗಿ ಪ್ರತಿಭಟನೆ

sudina 3
Published on

ನವದೆಹಲಿ: ಇತ್ತೀಚೆಗೆ ವರ್ಣಭೇದ ನೀತಿಯ ವಿರುದ್ಧ ಅಮೆರಿಕದಲ್ಲಿ ಬಹು ದೊಡ್ಡ ಸಾಮೂಹಿಕ ಹೋರಾಟವೇ ಜರುಗುತ್ತಿದೆ. ಇದರ ಮಧ್ಯೆ ಕೆಲವರು ವೈಯಕ್ತಿಕ ನೆಲೆಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಮಹಿಳೆಯೊಬ್ಬರು ಜಾರ್ಜ್ ಫ್ಲಾಯ್್ಡ ಹತ್ಯೆಯನ್ನು ವಿರೋಧಿಸಿ, ‘ನನಗೆ ಉಸಿರಾಡಲು ಸಾಧ್ಯವಿಲ್ಲ’

(ಐ ಕಾಂಟ್ ಬ್ರೀದ್) ಎಂಬ ಪ್ಲೇಕಾರ್ಡ್ ಹಿಡಿದು ಒಬ್ಬಂಟಿಯಾಗಿ ಸಾಗಿದ್ದಾರೆ. ಪ್ರತಿಭಟನೆಗೆಂದು ತನ್ನ ಜತೆಗೆ ಯಾವ ಸ್ನೇಹಿತರೂ ಬರದ ಕಾರಣ ಆಕೆ ರಸ್ತೆಯಲ್ಲಿ ಒಂಟಿಯಾಗಿಯೇ ನಡೆದುಹೋದರು. ಇದರ ಪೋಟೋವನ್ನು ಆಕೆಯ ಪುತ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ಈ ಏಕಾಂಗಿ ಹೋರಾಟಕ್ಕೆ ಭರಪೂರ ಮೆಚ್ಚುಗೆ ಹರಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net