

ಬೆಂಗಳೂರು: ಬೀದಿ ನಾಯಿಗಳಿಗೆ ಹೊಡೆಯುತ್ತಿರುವುದನ್ನು ಪ್ರಶ್ನಿಸಿದ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಅವಾಚ್ಯ ಶಬ್ಧಗಳಿಂದ ನಿಂದಿಸಿ ತುಂಬಾ ಸನೀಹಕ್ಕೆ ಬಂದಿದ್ದು, ಮಹಿಳೆ ಕೂಗಾಡುತ್ತಿದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ.
ಇಬ್ಬಲೂರು ನಿವಾಸಿಯಾದ ಮಿನು ಸಿಂಗ್ ಅವರು, ಡಿ.೩ ರಂದು ಬೆಳಗ್ಗೆ ೮.೨೦ ರ ಸಮಯದಲ್ಲಿ ತಮ್ಮ ಮನೆಯಲ್ಲಿರುವಗಾಗ ಬೀದಿ ನಾಯಿಗಳು ಕಿರುಚಾಡುವ ಶಬ್ಧಗಳನ್ನು ಕೇಳಿ ತಾನು ವಾಸವಿರುವ ಅಪಾರ್ಟ್‌ಮೆಂಟ್‌ನಿಂದ ಹೊರ ಬಂದು ನೋಡಿದ್ದಾಗ ಸುಮಾರು ೪೦ ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಕಪ್ಪು ಜಾಕೇಟ್ ಮತ್ತು ಹ್ಾ ಪ್ಯಾಂಟ್ ಧರಿಸಿದ ಅಪರಿಚಿತ ವ್ಯಕ್ತಿ ಬೀದಿ ನಾಯಿಗಳನ್ನು ಅಟ್ಟಾಡಿಸಿಕೊಂಡು ಹೊಡಿಯುತ್ತಿದ್ದ ಇದನ್ನು ಕಂಡ ಮಹಿಳೆ ಹೀಗೆಕೆ ಮಾಡುತ್ತಿದ್ದೀರಾ ಎಂದು ಕೇಳಿದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿನಿ ತುಂಬ ಸನೀಹಕ್ಕೆ ಬಂದಿದ್ದು ಮಹಿಳೆ ಜೋರಾಗಿ ಜನರನ್ನು ಕರೆದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಯನ್ನು ಪತ್ತೆ ಹಚ್ಚಿ ಆತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬೆಳಂದೂರು ಠಾಣೆ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.