ನಿಗೂಢವಾಗಿ ನಾಪತ್ತೆಯಾದ ಮಹಿಳೆ; ಆ್ಯಂಬುಲೆನ್ಸ್​ ಸಿಬ್ಬಂದಿನೂ ಇಲ್ಲ..ಆಕೆಯೂ ಇಲ್ಲ

BBMP
Published on

ಆನೇಕಲ್​: ನಾವು ಬಿಬಿಎಂಪಿ ಸಿಬ್ಬಂದಿ..ನಿಮಗೆ ಕರೊನಾ ಪಾಸಿಟಿವ್​ ಇದೆ ಎಂದು ಹೇಳಿಕೊಂಡು, ಆ್ಯಂಬುಲೆನ್ಸ್​ ತಂದ ಆಗಂತುಕರು ಮಹಿಳೆಯೋರ್ವರನ್ನು ಕರೆದೊಯ್ದಿದ್ದಾರೆ. ಇವರ್ಯಾರೂ ಬಿಬಿಎಂಪಿ ಸಿಬ್ಬಂದಿಯಲ್ಲ. ನಕಲಿ ಎಂಬುದು ಗೊತ್ತಾಗಿದೆ.

ಸೆಪ್ಟೆಂಬರ್ 3ರಂದೇ ಮಹಿಳೆಯನ್ನು ಕರೆದೊಯ್ದಿದ್ದಾರೆ. ಇದುವರೆಗೂ ಮಹಿಳೆ ಪತ್ತೆಯಾಗಿಲ್ಲ. ಈಕೆ ಆ್ಯಂಬುಲೆನ್ಸ್​ ಹತ್ತುವಾಗ ಮೊಬೈಲ್​ ತೆಗೆದುಕೊಳ್ಳಲೂ ಬಿಡಲಿಲ್ಲ.

ಆಕೆಯ ಮೊಬೈಲ್​ಗೂ ಕರೊನಾಕ್ಕೆ ಸಂಬಂಧಪಟ್ಟ ಯಾವುದೇ ಮೆಸೇಜ್​ ಬಂದಿಲ್ಲ. ಬಿಬಿಎಂಪಿಯವರನ್ನು ವಿಚಾರಿಸಿದಾಗ ನಾವು ಆ ಮಹಿಳೆಗೆ ಯಾವುದೇ ಟೆಸ್ಟ್ ಮಾಡಿಯೇ ಇಲ್ಲ. ಸಿಬ್ಬಂದಿಯನ್ನೂ ಕಳಿಸಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net