ಹೊಸ ದಾಖಲೆ ಸೃಷ್ಟಿಸಿದ ಅಯೋಧ್ಯೆ ರಾಮಮಂದಿರ! ತಾಜ್ ಮಹಲ್​ಗಿಂತ ದೇಶಿ, ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತಿದೆ Ayodhya Ram Temple

Ayodhya Ram Temple
Published on

Ayodhya Ram Temple : ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್​​ಗೆ ಪ್ರವಾಸಿಗರ ದಟ್ಟಣೆ ಕಡಿಮೆಯಾಗುತ್ತಿದೆ ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಬಹಿರಂಗಪಡಿಸಿದೆ. ಮೊದಲು ಎಲ್ಲಾ ದೇಶೀಯ ಮತ್ತು ವಿದೇಶಿ ಪ್ರವಾಸಿಗರು ತಾಜ್ ಮಹಲ್ ಅನ್ನು ಭೇಟಿ ಮಾಡಲು ಹೆಚ್ಚಾಗಿ ಆಗ್ರಾಕ್ಕೆ ಹೋಗುತ್ತಿದ್ದರು. ಆದರೆ ಈಗ ಅಯೋಧ್ಯೆ ರಾಮಮಂದಿರ ಎಲ್ಲರ ಗಮನ ಸೆಳೆಯುತ್ತಿದೆ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22, 2024 ರಂದು ಮಮಂದಿರ ಉದ್ಘಾಟಿಸಿದರು. ಅಂದಿನಿಂದ, ರಾಮ ಭಕ್ತರು ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರು ಅಯೋಧ್ಯೆಗೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅಯೋಧ್ಯೆ ದಿನನಿತ್ಯ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದು, ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರ ಇದೀಗ ಮತ್ತೊಂದು ದಾಖಲೆ ನಿರ್ಮಿಸಿದೆ. ಎಲ್ಲರ ಗಮನ ಸೆಳೆದ ಆ ಸುಂದರ ಬಾಲಕ ರಾಮನ ಮುಂದೆ ಜಗತ್ಪ್ರಸಿದ್ಧ ತಾಜ್ ಮಹಲ್​ಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿ ಮುಖವಾಗುತ್ತಿದೆ ಎನ್ನಲಾಗಿದೆ.

ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರ ಹೊಸ ಪ್ರವಾಸೋದ್ಯಮ ದಾಖಲೆಗಳನ್ನು ಸೃಷ್ಟಿಸಿದೆ. ಅಯೋಧ್ಯೆಯು ದೇಶದ ಅತ್ಯಂತ ಪ್ರಸಿದ್ಧ ಪ್ರವಾಸಿ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿದೆ. ಒಂದು ಕಾಲದಲ್ಲಿ ಆಗ್ರಾದ ತಾಜ್ ಮಹಲ್ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿತ್ತು, ಈಗ ಅಯೋಧ್ಯೆ ಅದರ ಸ್ಥಾನವನ್ನು ಪಡೆದುಕೊಂಡಿದೆ. ಉತ್ತರ ಪ್ರದೇಶ ಸರ್ಕಾರ ಈ ವಿಷಯವನ್ನು ಬಹಿರಂಗಪಡಿಸಿದೆ.

2024 ರ ಜನವರಿ ಮತ್ತು ಸೆಪ್ಟೆಂಬರ್ ನಡುವೆ 47.61 ಕೋಟಿ ಪ್ರವಾಸಿಗರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ಸರ್ಕಾರ ಘೋಷಿಸಿತು. ಇದು ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ.

2024 ರ ಜನವರಿಯಿಂದ ಸೆಪ್ಟೆಂಬರ್ ವರೆಗೆ 13.55 ಕೋಟಿ ಭಾರತೀಯರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ ಎಂಬ ವಿವರಗಳನ್ನು ಉತ್ತರ ಪ್ರದೇಶ ಸರ್ಕಾರ ಬಹಿರಂಗಪಡಿಸಿದೆ. ಅದೇ ಸಮಯದಲ್ಲಿ, ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರು ಸೇರಿದಂತೆ ಒಟ್ಟು 12.51 ಕೋಟಿ ಜನರು ಆಗ್ರಾದ ತಾಜ್ ಮಹಲ್ ಅನ್ನು ವೀಕ್ಷಿಸಿದರು. ಅಯೋಧ್ಯೆ ರಾಮಮಂದಿರವು ಕೇವಲ 9 ತಿಂಗಳಲ್ಲಿ ತಾಜ್ ಮಹಲ್ ದಾಖಲೆಯನ್ನು ಮೀರಿಸಿದೆ ಎಂದು ಯುಪಿ ಸರ್ಕಾರ ಸ್ಪಷ್ಟಪಡಿಸಿದೆ.

ವಾಸೋದ್ಯಮ ಕ್ಷೇತ್ರದಲ್ಲಿ ತನ್ನ ಅನನ್ಯತೆಯನ್ನು ಉಳಿಸಿಕೊಳ್ಳಲು ತಾಜ್ ಮಹಲ್ ಹೊಸ ನೀತಿಗಳನ್ನು ಆವಿಷ್ಕರಿಸುವ ಅಗತ್ಯವಿದೆ. ಯುಪಿ ಪ್ರವಾಸೋದ್ಯಮ ಇಲಾಖೆಯು ತಾಜ್ ಮಹಲ್‌ನಲ್ಲಿ ವಿಶೇಷ ಕಾರ್ಯಕ್ರಮಗಳು ಮತ್ತು ಉತ್ಸವಗಳನ್ನು ಆಯೋಜಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಪ್ರಯತ್ನಿಸಬಹುದು. ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಎಷ್ಟರಮಟ್ಟಿಗೆ ಕಡಿಮೆಯಾಗಲಿದೆ ಎಂಬ ಚರ್ಚೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net