24 ಗಂಟೆಯಲ್ಲಿ ದೇಶದಲ್ಲಿ 1975 ಹೊಸ ಕರೊನಾ ಪ್ರಕರಣಗಳು ಪತ್ತೆ, 47 ಸೋಂಕಿತರು ಸಾವು; ಅತಿ ಹೆಚ್ಚು ಮಂದಿ ಮೃತಪಟ್ಟಿದ್ದೆಲ್ಲಿ ಗೊತ್ತಾ?

Coronavirus 26 april 20
Published on

ನವದೆಹಲಿ: ಭಾರತದಲ್ಲಿ ಇಂದು ಕರೊನಾ ಸೋಂಕಿತರ ಸಂಖ್ಯೆ 26,917ಕ್ಕೆ ಏರಿದೆ. ಮೃತಪಟ್ಟವರು ಒಟ್ಟು 826 ಮಂದಿ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1975 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, 47 ಮಂದಿ ಸಾವನ್ನಪ್ಪಿದ್ದಾರೆ.

ಈ 26,917ಮಂದಿಯಲ್ಲಿ 5,913 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದು, 20,177 ಸಕ್ರಿಯ ಕರೊನಾ ಪ್ರಕರಣಗಳು ಇವೆ. ಒಟ್ಟು ಕರೊನಾ ಸೋಂಕಿತರಲ್ಲಿ 111ಮಂದಿ ವಿದೇಶಿಯರು ಎಂದು ಇಂದು ಸಂಜೆ ಆರೋಗ್ಯ ಇಲಾಖೆ ತಿಳಿಸಿದೆ.

ಭಾರತದಲ್ಲಿ ಕರೊನಾ ವೈರಸ್​ನಿಂದ ಗುಣಮುಖರಾಗುತ್ತಿರುವ ಪ್ರಮಾಣ ಶೇ.21.9ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

ಶನಿವಾರ ಸಂಜೆಯಿಂದ ಭಾನುವಾರ ಸಂಜೆಯವರೆಗೆ ಮೃತಪಟ್ಟ 47 ಕರೊನಾ ಸೋಂಕಿತರಲ್ಲಿ ಅತಿ ಹೆಚ್ಚು ಅಂದರೆ 22 ಸಾವು ಮಹಾರಾಷ್ಟ್ರದಲ್ಲಿಯೇ ಉಂಟಾಗಿದೆ. ರಾಜಸ್ಥಾನದಲ್ಲಿ ಎಂಟು, ಮಧ್ಯಪ್ರದೇಶದಲ್ಲಿ ಏಳು, ಗುಜರಾತ್​ನಲ್ಲಿ ಆರು, ದೆಹಲಿ, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ತಮಿಳುನಾಡಿನಲ್ಲಿ ತಲಾ ಒಬ್ಬರು ಕರೊನಾದಿಂದ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net