ಅಂಬಾನಿ ಪುತ್ರನ ಮದುವೆ ಮುಗಿಯುತ್ತಿದ್ದಂತೆ ಲಂಡನ್​ಗೆ ಹಾರಿದ ರಾಮ್​ಚರಣ್​! ಸಿಗಲಿದ್ಯಾ ಈ ವಿಶೇಷ ಗೌರವ?

ವಿಜಯವಾಣಿ (33)
Published on

ಆಂಧ್ರಪ್ರದೇಶ: ರಾಜಮೌಳಿ ನಿರ್ದೇಶನದ ಬ್ಲಾಕ್​ಬಸ್ಟರ್​ 'ಆರ್​ಆರ್​ಆರ್'​ ಚಿತ್ರದ ಮೂಲಕ ಇಡೀ ವಿಶ್ವಕ್ಕೆ ತಮ್ಮನ್ನು ತಮ್ಮ ಪಾತ್ರದಿಂದಲೇ ಪರಿಚಯಿಸಿಕೊಂಡ ಟಾಲಿವುಡ್ ಮೆಗಾಸ್ಟಾರ್​ ಚಿರಂಜೀವಿ ಪುತ್ರ ರಾಮ್​ ಚರಣ್​, ಇದೊಂದು ಸಿನಿಮಾ ಮೂಲಕವೇ ಅಪಾರ ಯಶಸ್ಸು, ಕೀರ್ತಿಯನ್ನು ಗಳಿಸಿದ್ದಾರೆ. ಇತ್ತೀಚೆಗಷ್ಟೇ ರಿಲೈಯನ್ಸ್ ಸಂಸ್ಥಾಪಕ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹಕ್ಕೆ ಆಗಮಿಸಿದ ನಟ ಮುಂಬೈ ಏರ್​ಪೋರ್ಟ್​ನಿಂದ ನೇರವಾಗಿ ಲಂಡನ್​ಗೆ ಹಾರಿದ್ದಾರೆ.

'ಗೇಮ್ ಚೇಂಜರ್'​ ಚಿತ್ರದ ಶೂಟಿಂಗ್​ನ ಒಂದು ಮುಖ್ಯಭಾಗ ಅಂತ್ಯಗೊಂಡ ಬೆನ್ನಲ್ಲೇ ಅನಂತ್-ರಾಧಿಕಾ ಮದುವೆಗಾಗಿ ರಾಮ್​ ಚರಣ್ ಮತ್ತು ಅವರ ಪತ್ನಿ ಉಪಾಸನಾ ಮುಂಬೈಗೆ ತೆರಳಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳನ್ನು ಹರಸಿ, ಆಶೀರ್ವದಿಸಿದ 'ಆರ್​ಆರ್​ಆರ್'​ ಸ್ಟಾರ್​, ಪತ್ನಿಯ ಜತೆಗೆ ಅಲ್ಲಿಂದ ನೇರವಾಗಿ ಲಂಡನ್​ಗೆ ಹಾರಿದ್ದಾರೆ. ಮೊದಲಿಗೆ ಇದು ಅವರ ಅಭಿಮಾನಿಗಳಿಗೆ ಗೊಂದಲ ಉಂಟುಮಾಡಿದರು ಬಳಿಕ ಅಸಲಿ ಕಾರಣ ಇದೇ ಇರಬಹುದು ಎಂಬ ಉತ್ತರ ಕಂಡುಕೊಂಡಿದ್ದಾರೆ.

ಮುಂದಿನ ಎರಡು ವಾರಗಳ ಕಾಲ ಲಂಡನ್​ನಲ್ಲೇ ರಾಮ್ ಚರಣ್ ಕುಟುಂಬ ಉಳಿದುಕೊಳ್ಳಲಿದೆ ಎಂದು ವರದಿಯೊಂದು ಉಲ್ಲೇಖಿಸಿದೆ. ಆದರೆ, ಈ ಮಧ್ಯೆ ರಾಮ್ ಚರಣ್​ ಲಂಡನ್​ಗೆ ಹೋಗಲು ಕಾರಣ, ಯುಕೆಯಲ್ಲಿ ಆಯೋಜಿಸಿರುವ ವಿಶೇಷ ಸನ್ಮಾನ ಕಾರ್ಯಕ್ರಮ ಎನ್ನಲಾಗಿದೆ. ಮೇಡಮ್ ಟುಸ್ಸಾಡ್ಸ್ ವ್ಯಾಕ್ಸ್ ಮ್ಯೂಸಿಯಂ ವತಿಯಿಂದ ಮೆಗಾಪವರ್​ ಸ್ಟಾರ್ ಅವರ​ ಮೇಣದ ಪ್ರತಿಮೆ ಅನಾವರಣಗೊಳ್ಳಲಿದೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಸದ್ಯ ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net