ವನ್ಯಜೀವಿ ಛಾಯಾಗ್ರಹಣ ವಿಶಿಷ್ಟ ಕಲೆ

sgr (11)
ಸಾಗರದಲ್ಲಿ ಆಯೋಜಿಸಿದ್ದ ವನ್ಯಜೀವಿ ಛಾಯಾಚಿತ್ರಗ್ರಾಹಕ ಉಲ್ಲಾಸ ಶ್ಯಾನಭಾಗ್ ಅವರ ಅಮ್ಮನ ಆಸರೆ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನದ ಸಮಾರೋಪದಲ್ಲಿ ಉಲ್ಲಾಸ ಶ್ಯಾನಭಾಗ್ ದಂಪತಿಯನ್ನು ಶಾಸಕ ಗೋಪಾಲಕಷ್ಣ ಬೇಳೂರು ಸನ್ಮಾನಿಸಿದರು. ಎಂ.ನಾಗರಾಜ್, ಮೈತ್ರಿ ಪಾಟೀಲ್, ಸವಿತಾ ವಾಸು ಇತರರಿದ್ದರು.
Published on

ಸಾಗರ: ಮೊಬೈಲ್ ಜಗತ್ತಿನಲ್ಲಿ ಎಲ್ಲರೂ ಛಾಯಾಗ್ರಾಹಕರಾಗಿ ಬಿಡುತ್ತೇವೆ. ಛಾಯಾಗ್ರಹಣ ಎನ್ನುವುದು ಒಂದು ವಿಶಿಷ್ಟ ಕಲೆ. ವನ್ಯಜೀವಿ ಛಾಯಾಗ್ರಹಣಕ್ಕೆ ತಾಳ್ಮೆ, ಶ್ರದ್ಧೆ ಮತ್ತು ಸಮಯ ಬಹಳ ಮುಖ್ಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ತಾಲೂಕು ೋಟೋಗ್ರಾರ್ಸ್‌ ಅಸೋಸಿಯೇಷನ್, ಪವಿತ್ರಾ ಗ್ರೂಪ್ಸ್‌ನಿಂದ ವನ್ಯಜೀವಿ ಛಾಯಾಗ್ರಾಹಕ ಉಲ್ಲಾಸ ಶ್ಯಾನಭಾಗ್ ಅವರ ಅಮ್ಮನ ಆಸರೆ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನದ ಸಮಾರೋಪದಲ್ಲಿ ಉಲ್ಲಾಸ ಶ್ಯಾನಭಾಗ್ ದಂಪತಿಯನ್ನು ಸನ್ಮಾನಿಸಿ ಮಾತನಾಡಿದರು.

ಉಲ್ಲಾಸ ಶ್ಯಾನಭಾಗ್ 25 ವರ್ಷಗಳ ಕಾಲ ವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಅಪರೂಪದ ಛಾಯಾಚಿತ್ರ ಸೆರೆ ಹಿಡಿದಿದ್ದಾರೆ. ಪ್ರಾಣಿ, ಪಕ್ಷಿ, ಕೀಟಗಳ ವಿಶೇಷ ಭಾವಚಿತ್ರಗಳು ಇಲ್ಲಿವೆ. ಒಂದೊಂದು ಚಿತ್ರ ಸೆರೆಹಿಡಿಯಲಿಕ್ಕೂ ತಿಂಗಳುಗಟ್ಟಲೆ ಕಾದಿದ್ದಾರೆ. ಎಲ್ಲರಿಂದಲೂ ಇಂತಹ ಸಾಧನೆ ಸಾಧ್ಯವಿಲ್ಲ. ಇಂತಹ ಛಾಯಾಗ್ರಾಹಕರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.

ಛಾಯಾಗ್ರಾಹಕ ಪಂಪಯ್ಯ ಮಳೇಮಠ್ ಮಾತನಾಡಿ, ಉಲ್ಲಾಸ ಶ್ಯಾನಭಾಗ್ ಅರಣ್ಯದ ನಡುವಿನ ಸವಾಲುಗಳನ್ನು ಎದುರಿಸಿ ಅದ್ಭುತವಾದ ೋಟೋಗಳನ್ನು ಸೆರೆಹಿಡಿದಿದ್ದಾರೆ. ೋಟೋಗ್ರಫಿ ಎನ್ನುವುದು ವಿಶೇಷವಾದ ಕಲೆ, ೋಟೋಗ್ರಫಿ ಜತೆಗೆ ಪರಿಸರ ಉಳಿಸುವ ಬಗ್ಗೆಯೂ ಉಲ್ಲಾಸ ಶ್ಯಾನಭಾಗ್ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಪವಿತ್ರಾ ಗ್ರೂಪ್ಸ್ ಅಧ್ಯಕ್ಷ ಎಂ.ನಾಗರಾಜ್, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಏರ್‌ಮಾರ್ಷಲ್ ಎಚ್.ವಿ.ರಾಜರಾಮ್, ಡಾ. ಗುಹೇಶ್ವರ ಬಿ. ಪಾಟೀಲ್, ಅಭಿನಂದನ್, ಗಣಪತಿ ಪಂಡಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net