Bigg Boss ಶುರುವಾದ ಮೂರನೇ ವಾರಕ್ಕೆ Wild Card ಎಂಟ್ರಿ; ದೊಡ್ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಸಿಕ್ತು ವಿಶೇಷ ಅಧಿಕಾರ

BBK 11
Published on

ಬೆಂಗಳೂರು: ಈಗಾಗಲೇ ಸಾಕಷ್ಟು ವಿವಾದಗಳಿಂದಲೇ ಸದ್ದು ಮಾಡಿರುವ ಬಿಗ್​ಬಾಸ್​ (Bigg Boss) 11ನೇ ಆವೃತ್ತಿಯೂ ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಿದೆ. ಈ ವಾರ ಮನೆಯಲ್ಲಿ ನಡೆದಿದ್ದ ಡಬಲ್​ ಎಲಿಮಿನೇಷನ್​ (Double Elimination) ಸಾಕಷ್ಟು ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿದ್ದು, ಈ ವಿವಾರವಾಗಿ ನಿರೂಪಕ ಕಿಚ್ಚ ಸುದೀಪ್​ (Kichcha Sudeep) ಬಿಗ್​ಬಾಸ್​ (Bigg Boss) ಸೇರಿದಂತೆ ಸ್ಫರ್ಧಿಗಳಿಗೆ ಪ್ರತ್ಯೇಕವಾಗಿ ಕ್ಲಾಸ್​​ ತೆಗೆದುಕೊಂಡಿದ್ದರು. ಇದೀಗ ಮೂರನೇ ವಾರಕ್ಕೆ ಬಿಗ್​ಬಾಸ್​ಗೆ (Bigg Boss) ವೈಲ್ಡ್​ ಕಾರ್ಡ್​ (WildCard) ಮೂಲಕ ಹೊಸ ಸ್ಫರ್ಧಿಯೊಬ್ಬರು ಎಂಟ್ರಿ ಕೊಟ್ಟಿದ್ದು, ಬಿಗ್​ಬಾಸ್​ (Bigg Boss) ಅವರಿಗೆ ವಿಶೇಷ ಅಧಿಕಾರವನ್ನು ಕೊಟ್ಟಿದ್ದಾರೆ.

ಕಾರ್ಯಕ್ರಮ ಶುರುವಾದಾಗಿನಿಂದಲೂ ಬಿಗ್​ಬಾಸ್​ (Bigg Boss) ಮನೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ಇಬ್ಬರು ಈಗಾಗಲೇ ನೇರವಾಗಿ ಎಲಿಮಿನೇಟ್​ ಆಗಿದ್ದಾರೆ. ಸ್ಫರ್ಧಿಗಳಾದ ರಂಜಿತ್​ (Ranjith) ಹಾಗೂ ಜಗದೀಶ್​ (jagadish) ಎಲಿಮಿನೇಟ್​ ಆಗಿದ್ದು, ಬಿಗ್​ಬಾಸ್ (Bigg Boss)​ ಮನೆಯಲ್ಲಿ ನಡೆದ ಗುಂಪುಗಾರಿಕೆ ಹಾಗೂ ನಿರಂತರ ಜಗಳವೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಇದೀಗ ಮನೆಗೆ ವೈಲ್ಡ್​ಕಾರ್ಡ್​ (Wild Card) ಮೂಲಕ ಹೊಸ ಸ್ಫರ್ಧಿ ಎಂಟ್ರಿ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಮನೆಯ ವಾತಾವರಣ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.

ವೈಲ್ಡ್​ಕಾರ್ಡ್ ಎಂಟ್ರಿ ಮನೆಯವರಿಗೆ ಮೈಲ್ಡ್ ಆಗಿ ಶಾಕ್ ಕೊಡ್ತಾ? ಎಂಬ ಶೀರ್ಷಿಕೆಯಡಿ ಪ್ರೋಮೋ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಹಾವೇರಿ ಮೂಲದ ಗಾಯಕ ಹನುಮಂತ ವೈಲ್ಡ್​ ಕಾರ್ಡ್​ (Wild Card) ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಹನುಮಂತ ಅವರು ಅನೇಕ ರಿಯಾಲಿಟಿ ಶೋಗಳಲ್ಲಿ (Reality Show) ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ಹನುಮಂತ ಅವರು ಇದೀಗ ಬಿಗ್​ಬಾಸ್ (Bigg Boss)​ ಮನೆಗೆ ಎಂಟ್ರಿ ಕೊಟ್ಟಿದ್ದು, ದೊಡ್ಮನೆಯಲ್ಲಿ ಹೇಗಿರಲಿದ್ದಾರೆ ಎಂದು ನೋಡಬೇಕಿದೆ.

ಹನುಮಂತ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಬಿಗ್​ಬಾಸ್​ (Bigg Boss) ಅವರಿಗೆ ವಿಶೇಷ ಅಧಿಕಾರಿವನ್ನು ನೀಡಿದ್ದು, ಈ ವಾರದ ಮನೆಯ ಕ್ಯಾಪ್ಟನ್​ ಆಗಿ ನೇಮಿಸಿದ್ದಾರೆ. ಎರಡನೇ ವಾರ ಕ್ಯಾಪ್ಟನ್ಸಿ ಟಾಸ್ಕ್​ ನಡಯುತ್ತಿರುವಾಗ ಸ್ಫರ್ಧಿಗಳ ನಡುವೆ ಉಂಟಾದ ಮನಸ್ತಾಪದಿಂದಾಗಿ ಚಟುವಟಿಕೆಗಳನ್ನು ರದ್ದುಪಡಿಸಲಾಗಿತ್ತು. ಇದೀಗ ಮೂರನೇ ವಾರದ ಮನೆಯ ಕ್ಯಾಪ್ಟನ್​ ಆಗಿ ವೈಲ್ಡ್​ಕಾರ್ಡ್​ ಸ್ಫರ್ಧಿ ಹನುಮಂತ ಎಂಟ್ರಿ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net