

Wild Boar: ಅರಣ್ಯದಲ್ಲಿ ಪ್ರಕೃತಿ ಮಾತೆಯ ಪ್ರಾರ್ಥನೆಗೆ ಹೋಗುತ್ತಿದ್ದಾಗ ಕಾಡು ಹಂದಿ ದಾಳಿ ಮಾಡಿ ಗಂಭೀರ ಗಾಯಗೊಂಡ ಬುಡಕಟ್ಟು ರೈತ ಸಾವನ್ನಪ್ಪಿದ ಘಟನೆ ಆದಿಲಾಬಾದ್ ಉಟ್ನೂರ್ ಮಂಡಲದ ರಾಜುಲುಮಡುಗು ಗ್ರಾಮದಲ್ಲಿ ಭಾನುವಾರ (ಮೇ.25) ನಡೆದಿದೆ.
35 ವರ್ಷದ ಬುಡಕಟ್ಟು ರೈತ ಲಕ್ಷ್ಮಣ್ ರಾಜುಲುಮಡುಗು ಗ್ರಾಮದ ಕಾಡಿನಲ್ಲಿ ಪ್ರಕೃತಿ ಮಾತೆಯ ಪ್ರಾರ್ಥನೆಗೆ ಹೋಗುತ್ತಿದ್ದಾಗ ಹಂದಿ ದಾಳಿ ಮಾಡಿ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಸಹಾಯಕ್ಕೆ ಧಾವಿಸುವ ಮುನ್ನ ಲಕ್ಷ್ಮಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ಮೃತದೇಹವನ್ನು ಉಟ್ನೂರ್ ಮಂಡಲ ಕೇಂದ್ರ ಕಚೇರಿಯ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಅರಣ್ಯ ಅಧಿಕಾರಿಗಳು ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದಿದ್ದು, ಲಕ್ಷ್ಮಣ್ ಕುಟುಂಬಕ್ಕೆ ಶೀಘ್ರದಲ್ಲೇ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್)