

ಚಂಡೀಗಢ: ಪತ್ನಿಯ ಅಕಾಲಿಕ ಮರಣದಿಂದ ನೊಂದ ಪತಿ, ತನ್ನ ಮೂವರು ಮಕ್ಕಳನ್ನು ಸಾಯಿಸಿದ್ದಷ್ಟೇ ಅಲ್ಲದೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಂಜಾಬ್ನ ಬತಿಂಡ ಜಿಲ್ಲೆಯ ಹಮೀರ್ಘರ್ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಪ್ರಕರಣ ಸಂಭವಿಸಿದೆ. ಕೂಲಿ ಕಾರ್ಮಿಕ ಬಿಯಾಂತ್ ಸಿಂಗ್ (35) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತನ ಪತ್ನಿ ಕ್ಯಾನ್ಸರ್ ರೋಗದಿಂದ ಬಳಲಿದ್ದು, ಆಗಸ್ಟ್ನಲ್ಲಿ ಮೃತಪಟ್ಟಿದ್ದಳು.
ಇದರಿಂದ ತುಂಬ ನೊಂದಿದ್ದ ಬಿಯಾಂತ್, ಖಿನ್ನತೆಗೆ ಒಳಗಾಗಿದ್ದ. ಹೀಗಾಗಿ ಮೂವರು ಮಕ್ಕಳನ್ನು ಸಾಯಿತಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೀಡಾಗಿರುವ ಮೂರೂ ಮಕ್ಕಳು ಆರು ವರ್ಷದೊಳಗಿನವರು. ಪತ್ನಿಯ ಅಕಾಲಿಕ ಮರಣದಿಂದ ನೊಂದಿದ್ದೇನೆ ಎಂದು ಆತ ಬರೆದಿದ್ದ ಡೆತ್ನೋಟ್ ಸಿಕ್ಕಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)