ಪತ್ನಿಗೆ ಚುಚ್ಚು ಮದ್ದು ನೀಡಿ ಕೊಲೆ ಮಾಡಿದ್ದು ಪತಿ ಎಂಬ ಆರೋಪ | ಊಟದ ಬಳಿಕ ನರಳಿ ಮೃತಪಟ್ಟಳೇ ವಿವಾಹಿತೆ?

Wife Murder
Published on

ರಾಮನಗರ: ದಾಂಪತ್ಯ ಕಲಹ ಹಿನ್ನೆಲೆಯಲ್ಲಿ ಪತ್ನಿಗೆ ಚುಚ್ಚು ಮದ್ದು ಕೊಟ್ಟು ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ರಾಮನಗರದ ಹನುಮಂತ ನಗರದಲ್ಲಿ ಬುಧವಾರ ಘಟನೆ ನಡೆದಿದೆ.

ದೀಪಾ(24) ಮೃತ ಮಹಿಳೆ. ಪತಿ ವೆಂಕಟೇಶ್(30) ವಿರುದ್ಧ ಕೊಲೆ ಆರೋಪ ಎದುರಾಗಿದೆ. ಆರೋಪಿ ವೆಂಕಟೇಶ್ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ನೌಕರನಾಗಿ‌ ಕೆಲಸ ಮಾಡುತ್ತಿದ್ದ. 11 ತಿಂಗಳ ಹಿಂದೆ ವಡ್ಡರಹಳ್ಳಿ ದೀಪಾಳೊಂದಿಗೆ ವಿವಾಹವಾಗಿದ್ದ ವೆಂಕಟೇಶ್, ಮದುವೆಯಾದಗಿನಿಂದಲೂ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು.

ಹಲವು ಬಾರಿ ಹಿರಿಯರ ಸಮ್ಮುಖದಲ್ಲಿ ನ್ಯಾಯ ತೀರ್ಮಾನವಾಗಿತ್ತು. ನಿನ್ನೆ ರಾತ್ರಿಯೂ ಇಬ್ಬರ ಮಧ್ಯೆ ಜಗಳವಾಗಿದೆ ಎನ್ನಲಾಗಿದೆ. ಈ ವೇಳೆ ದೀಪಾಳಿಗೆ ಗೊತ್ತಿದ್ದೋ ಅಥವಾ ಗೊತ್ತಿಲದೆಯೋ ಚುಚ್ಚು ಮದ್ದು ಕೊಟ್ಟಿದ್ದಾನೆ ಎನ್ನಲಾಗಿದೆ. ಊಟ ಮಾಡಿದ ಬಳಿಕ ದೀಪಾ ನರಳಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಐಜೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net