ಫೇಸ್​​ಬುಕ್ ಪ್ರಿಯಕರನಿಗೋಸ್ಕರ ಗಂಡನನ್ನೇ ಮುಗಿಸಿ ಬಿಟ್ಟ ಪತ್ನಿ!

Lovers
Published on

ಉತ್ತರ ಪ್ರದೇಶ: ಆಕೆಗೆ ಮದುವೆಯಾಗಿತ್ತು. ಹೀಗಿದ್ದರೂ ಫೇಸ್​ಬುಕ್​ನಲ್ಲಿ ಅನೂಜ್ ಪಟೇಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಗಂಡನಿಗೆ ಗೊತ್ತಾಗಿದೆ. ಇದು ಪತ್ನಿ ಆರತಿ ಹಾಗೂ ಪತಿ ರೋಹಿತ್​​ ಕುಮಾರ್(27) ನಡುವೆ ಕಲಹಕ್ಕೂ ಕಾರಣವಾಗಿತ್ತು. ಇದರಿಂದ ಸಿಟ್ಟಾದ ಪತ್ನಿ, ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದಾಳೆ. ಈ ಘಟನೆ ರಾಯ್​​ಬರೇಲಿ ಜಿಲ್ಲೆಯ ಕಂದಾರ್​​ಪುರ್ ಗ್ರಾಮದಲ್ಲಿ ನಡೆದಿದೆ.

ಆರತಿ ತನ್ನ ಫೇಸ್​ಬುಕ್​ ಪ್ರಿಯಕರನ ಜತೆಗೂಡಿ ಗಂಡನನ್ನು ಕೊಲೆ ಮಾಡಿದ ನಂತರ ಯಾರಿಗೂ ಅನುಮಾನ ಬಾರದಂತೆ ಮೃತದೇಹವನ್ನು ಮನೆಯಿಂದ ಸ್ವಲ್ಪ ದೂರದಲ್ಲೇ ಇರುವ ನಿರ್ಜನ ಪ್ರದೇಶದಲ್ಲಿ ಎಸೆದು ಬಂದಿದ್ದಾಳೆ.

ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗುತ್ತಿದ್ದಂತೆ ದಾರಿ ಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲಿಸಿದ ಪೊಲೀಸರು ಮೃತದೇಹದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ವೇಳೆ ಪತ್ನಿ ಆರತಿ ಕೊಲೆ ಮಾಡಿರುವುದು ಗೊತ್ತಾಗಿದೆ. ಕೂಡಲೇ ಹೆಚ್ಚಿನ ವಿಚಾರಣೆ ನಡೆಸಿ, ಆಕೆಯ ಫೇಸ್​ಬುಕ್ ಪ್ರಿಯಕರ ಅನೂಜ್ ಪಟೇಲ್ ಹಾಗೂ ಆತನ ಸ್ನೇಹಿತ ವಿವೇಕ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.

ಸದ್ಯ ಬಂಧನವಾಗಿರುವ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302, 201, 34ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಜಿಲ್ಲಾ ಎಸ್​​ಪಿ ರಾಹುಲ್ ಭಾಟಿ ಮಾಹಿತಿ ನೀಡಿರುವುದು ವರದಿಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net