ಎರಡನೇ ಮದುವೆಯಾಗಲು ಹೆಂಡ್ತಿ ಬದುಕಿರುವಾಗಲೇ ಶ್ರಾದ್ಧ ಮಾಡಿದ ಪತಿರಾಯ

Marriage Black Magic
Published on

ಲಖನೌ: ತನ್ನ ಪ್ರೇಯಸಿಯನ್ನು ಮದುವೆಯಾಗುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ ಪತ್ನಿ ಜೀವಂತವಾಗಿರುವಾಗಲೇ ಆಕೆಗೆ ಶ್ರಾದ್ಧ ಮಾಡಿರುವ ಘಟನೆ ಉತ್ತರಪ್ರದೇಶದ ಕನೌಜ್​ನಲ್ಲಿ ನಡೆದಿದೆ.

ಪತ್ನಿ ಬದುಕಿರುವಾಗಲೇ ಶ್ರಾದ್ಧ ಮಾಡಿದ ವ್ಯಕ್ತಿಯ ಹೆಸರು ಪವನ್​ ಪಟೇಲ್​ ಎಂದು ಗುರುತಿಸಲಾಗಿದ್ದು, ಸದ್ಯ ಈತ ತಲೆಮಾರಿಸಿಕೊಂಡಿದ್ದಾನೆ. ಪೊಲೀಸರು ಈತನನ್ನು ಬಂಧಿಸಲು ತಂಡವನ್ನು ರಚಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಪವನ್​ ಪಟೇಲ್​ ಪತ್ನಿಗೆ ಖಾಯಿಲೆಯಿಂದ ಬಳಲುತ್ತಿದ್ದು, ಆತ ತನ್ನ ಪತ್ನಿಗೆ ತಿಳಿಸದೆ ಪ್ರೇಯಸಿಯ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದಾನೆ. ಈ ವಿಚಾರವನ್ನು ತಿಳಿದ ಮೊದಲ ಪತ್ನಿ ದೂರು ನೀಡಿದ್ದು, ಆತ ತಲೆಮಾರಿಸಿಕೊಂಡಿದ್ದಾನೆ. ಇದಲ್ಲದೆ ಇಬ್ಬರು ಮಕ್ಕಳನ್ನು ಆತ ತನ್ನ ಜೊತೆಯೇ ಇರಿಸಿಕೊಂಡಿದ್ದು, ತಾಯಿಯ ಹತ್ತಿರ ಕಳುಹಿಸುತ್ತಿಲ್ಲ ಎಂದು ದೂರುದಾರೆ ಆರೋಪಿಸಿದ್ದಾರೆ.

ಮದುವೆಯಾದ ಮೇಲೂ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪವನ್ ಪಟೇಲ್,ಸಾಕಷ್ಟು ದಿನಗಳಿಂದ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ. ಇದರಿಂದ ನೊಂದಿದ್ದ ಪತ್ನಿ ತವರು ಮನೆಗೆ ಹೋಗಿದ್ದಾಳೆ. ದೂರು ದಾಖಲಿಸಿಕೊಳ್ಳಲಾಗಿದ್ದು ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net