ಫ್ಯಾಶನ್ ಡಿಸೈನಿಂಗ್‌ಗೆ ದೇಶ ವಿದೇಶಗಳಲ್ಲಿ ಬೇಡಿಕೆ

web 3
Published on

ಧಾರವಾಡ: ಆಧುನಿಕತೆಯ ದಿನಗಳಲ್ಲಿ ಫ್ಯಾಶನ್ ಡಿಸೈನಿಂಗ್ ಕೋರ್ಸ್‌ಗಳಿಗೆ ದೇಶ- ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಖಾಸಗಿ ಹಾಗೂ ಸ್ವಂತ ಉದ್ಯೋಗ ಮಾಡಲು ಕೋರ್ಸ್ ಉಪಯುಕ್ತ ಎಂದು ರಾಷ್ಟ್ರೀಯ ಕುಟುಂಬ ಕಲ್ಯಾಣ ಯೋಜನೆಯ ಶಾಖಾ ವ್ಯವಸ್ಥಾಪಕಿ ಸುಜಾತಾ ಆನಿಶೆಟ್ಟರ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಪ್ಯಾಶನ್ ಡಿಸೈನ್ (ಐಎನ್‌ಐಎ್ಡಿ) ಕಾಲೇಜಿನ ಪ್ರೆಶರ್ಸ್ ಡೇ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಂಪ್ರದಾಯಿಕತೆಗೆ ಜೋತು ಬೀಳುವ ಪರಿಪಾಠ ಗ್ರಾಮೀಣ ಪ್ರದೇಶಗಳಲ್ಲಿ ಇಂದೂ ಮುಂದುವರಿದಿದೆ. ಎಲ್ಲೆಡೆ ಪ್ಯಾಶನ್ ಡಿಸೈನ್ ಕೋರ್ಸ್‌ಗಳು ಜನಪ್ರಿಯಗೊಳ್ಳುತ್ತಿವೆ. ಪುರುಷರಂತೆ ಮಹಿಳೆಯರೂ ಎಲ್ಲ ಕ್ಷೇತ್ರಗಳಲ್ಲಿ ಸರಿಸಮಾನರಾಗಿ ಪಾಲ್ಗೊಳ್ಳುತ್ತಿದ್ದಾರೆ. ಇಡೀ ವಿಶ್ವವೇ ಶರವೇಗದಲ್ಲಿ ಬದಲಾಗುತ್ತ ಸಾಗುತ್ತಿರುವ ಸಂದರ್ಭದಲ್ಲಿ ಮಹಿಳೆಯರು ಕೀಳರಿಮೆ ತೊರೆದು ಮುಂದೆ ಬರಬೇಕು ಎಂದರು.
ಶ್ರೀ ಬಸವೇಶ್ವರ ರೂರಲ್ ಎಜುಕೇಶನ್ ಆ್ಯಂಡ್ ಡೆವಪಲಪ್‌ಮೆಂಟ್ ಟ್ರಸ್ಟ್ ಮುಖ್ಯಸ್ಥ ಡಾ. ಶರಣಪ್ಪ ಕೊಟಗಿ ಅಧ್ಯಕ್ಷತೆ ವಹಿಸಿದ್ದರು. ಗುರುರಾಜ ಹೂಗಾರ, ವಿ.ಜಿ. ಪಾಟೀಲ, ಕಾಲೇಜು ಸಂಸ್ಥಾಪಕ ನಾಗರಾಜ ಕೊಟಗಿ, ಚಂದ್ರಪ್ರಭಾ ದೇಶನೂರ, ಕೌನ್ಸಿಲರ್ ಪ್ರಿಯಾ ಹಪ್ಪಳಿ, ಪೂಜಾ ಎನ್., ಸೋನಾಲಿ, ವಸುಂಧರಾ, ಸವಿತಾ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net