

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ನಟಿ ಸಮಂತಾ ರುತ್ ಪ್ರಭು(Samantha) ಇತ್ತಿಚಿನ ದಿನಗಳಲ್ಲಿ ತಮಿಳು ಸಿನಿಮಾಗಳಿಗೆ ಹೆಚ್ಚು ಸಹಿ ಹಾಕುತ್ತಿಲ್ಲ. ಅಲ್ಲದೆ, ಕೆಲ ವರ್ಷಗಳಿಂದ ಬೆರಳೆಣಿಕೆಯಷ್ಟೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಸ್ವತ ಸಮಂತಾನೇ ಉತ್ತರ ಕೊಟ್ಟಿದ್ದಾರೆ.
ವಿಘ್ನೇಶ್ ಶಿವನ್ ಅವರ 2022ರಲ್ಲಿ ಬಿಡುಗಡೆಯಾದ 'ಕಾತುವಾಕುಲಾ ರೆಂಡು ಕಾದಲ್' ಸಿನಿಮಾ ಸಮಂತಾ ನಟಿಸಿರುವ ಕಾಲಿವುಡ್ನ ಕೊನೆಯ ಚಿತ್ರವಾಗಿದೆ. ಅಲ್ಲದೆ, ಅಲ್ಲಿಂದ ಯಾವ ಭಾಷಯಲ್ಲಿ ಕೂಡ ಹೇಳಿಕೊಳ್ಳವಷ್ಟು ಸಿನಿಮಾಗಳು ಕೂಡ ಮಾಡಿಲ್ಲ. ಅವರ ಕೆಲ ವೈಯಕ್ತಿಕ ಕಾರಣಗಳಿಂದ ಸಿನಿಮಾದಿಂದ ದೂರನೇ ಇದ್ದಾರೆ ಎಂದು ವರದಿಯಾಗಿದೆ.
ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಸಮಂತಾಗೆ ಹೆಚ್ಚಿನ ತಮಿಳು ಚಿತ್ರಗಳಿಗೆ ಏಕೆ ಸಹಿ ಹಾಕುತ್ತಿಲ್ಲ ಎಂದು ಕೇಳಿದಾಗ, ಪ್ರಾಜೆಕ್ಟ್‌ಗೆ ಯೆಸ್ ಎಂದು ಹೇಳಲು ತಕ್ಷಣ ಆಗುವುದಿಲ್ಲ, ತನಗೆ ಇನ್ನೂ ಹೆಚ್ಚಿನ ಅಗತ್ಯವಿದೆ. ನಾನು ಬೇರೆ ಸಿನಿಮಾಗಳಲ್ಲಿ ಬ್ಯೂಸಿ ಇದ್ದೇನೆ ಎಂದು ಸಮಂತಾ ಪ್ರಾಮಾಣಿಕವಾಗಿ ಹೇಳಿದ್ದಾರೆ.
ಮುಂದುವರೆದು, ಹಲವಾರು ಚಿತ್ರಗಳನ್ನು ಮಾಡುವುದು ಸುಲಭ, ಆದರೆ ನಾನು ನನ್ನ ಜೀವನದಲ್ಲಿ ಪ್ರತಿ ಚಿತ್ರವೂ ಕೊನೆಯದು ಎಂದು ಭಾವಿಸುತ್ತೇನೆ. ಏಕೆಂದರೆ ಇದು ಒಂದು ರೀತಿಯ ಪರಿಣಾಮವನ್ನು ಹೊಂದಿದೆ. ಪ್ರತಿ ಸಿನಿಮಾ ಒಪ್ಪಿಕೊಂಡು ಅದರ ಆಳ ಅರ್ಥ ತಿಳಿದುಕೊಳ್ಳುತ್ತೇನೆ. ಬಳಿಕ ಪಾಜೆಕ್ಟ್ ಬಗ್ಗೆ ನಾನು ನೂರಕ್ಕೆ ನೂರು ನಂಬುತ್ತೇನೆ. ಒಂದು ವೇಳೆ ನಂಬದಿದ್ದರೆ, ನಾನು ಅದನ್ನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಿನಿಮಾಗಳ ಒಪ್ಪಿಕೊಳ್ಳಲು ತಡವಾಗುತ್ತದೆ ಎಂದು ಹೇಳಿದ್ದಾರೆ.
ಸಮಂತಾ ನಟಿಸಿರುವ ಕೊನೆಯ ಚಿತ್ರ ಸಿಟಾಡೆಲ್: ಹನಿ ಬನ್ನಿ, ಇದು 2024 ರಲ್ಲಿ ಬಿಡುಗಡೆಯಾಗಿದೆ. ರಕ್ತ್ ಬ್ರಹ್ಮಾಂಡ್ ಚಿತ್ರ ಹೊರತುಪಡಿಸಿ ಬೇರೆ ಯೋಜನೆಗಳನ್ನು ಅವರು ಇನ್ನೂ ಘೋಷಿಸಿಲ್ಲ.(ಏಜೆನ್ಸೀಸ್)