

ನವದೆಹಲಿ: ಉತ್ತಮ ಅನುಭವದ ಹೆಸರಿನಲ್ಲಿ 20 ರೂ. ನೀರಿನ ಬಾಟಲ್ಗೆ 100 ರೂ. ವಸೂಲಿ ಮಾಡುತ್ತಿದ್ದೀರಿ. ಇದರ ಹೊರತಾಗಿಯೂ ಸೇವಾ ಶುಲ್ಕವನ್ನು ಏಕೆ ವಿಧಿಸುತ್ತಿದ್ದೀರಿ ಎಂದು ದೆಹಲಿ ಹೈಕೋರ್ಟ್ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳ ಸಂಘಗಳಿಗೆ (ಎಫ್ಎಚ್ಆರ್ಎಐ) ಪ್ರಶ್ನಿಸಿದೆ. ಹೋಟೆಲ್ಗಳಲ್ಲಿ ಸೇವಾ ಶುಲ್ಕವನ್ನು ಕಡ್ಡಾಯವಾಗಿ ವಿಧಿಸುವಂತಿಲ್ಲ ಎಂದು ಕಳೆದ ಮಾರ್ಚ್ನಲ್ಲಿ ದೆಹಲಿ ಹೈಕೋರ್ಟ್ನ ಏಕಸದಸ್ಯ ಪೀಠ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಎಫ್ಎಚ್ಆರ್ಎಐ ಮೇಲ್ಮನವಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾ. ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾ. ತುಷಾರ್ ರಾವ್ ಗೆಡೆಲಾ ಅವರ ಪೀಠ ‘ನಿಮ್ಮ ರೆಸ್ಟೋರೆಂಟ್ಗಳಿಗೆ ಭೇಟಿ ನೀಡುವ ವ್ಯಕ್ತಿ ಅಲ್ಲಿ ಪಡೆಯುವ ಅನುಭವಕ್ಕಾಗಿ ಹಲವು ಪದಾರ್ಥಗಳ ಮೇಲೆ ಎಂಆರ್ಪಿಗಿಂತ ಹೆಚ್ಚಿನ ಶುಲ್ಕ ವಿಧಿಸುತ್ತೀರಿ ಮತ್ತು ನೀವು ನೀಡುವ ಸೇವೆಗೆ ಸೇವಾ ಶುಲ್ಕವನ್ನೂ ಪಡೆಯುತ್ತಿದ್ದೀರಿ. ನಿರ್ದಿಷ್ಟ ರೀತಿಯ ಅನುಭವಕ್ಕಾಗಿ ವಾತಾವರಣವನ್ನು ಒದಗಿಸುವುದು ನೀವು ನೀಡುತ್ತಿರುವ ಸೇವೆಯಲ್ಲಿ ಒಳಗೊಂಡಿರುವುದಿಲ್ಲವೇ? 20 ರೂ. ನೀರಿನ ಬಾಟಲ್ಗೆ 100 ರೂ. ಪಡೆಯುತ್ತಿದ್ದೀರಿ. ಹೆಚ್ಚುವರಿಯಾಗಿ 80 ರೂ.ಗಳನ್ನು ಯಾವ ಲೆಕ್ಕದಲ್ಲಿ ಪಡೆಯುತ್ತೀದ್ದೀರಿ ಎಂದು ಪ್ರಶ್ನಿಸಿದೆ.