ರಾಮ ಜನ್ಮಭೂಮಿ ಆವರಣದಲ್ಲಿ ಪ್ರಧಾನಿ ಮೋದಿ ಪಾರಿಜಾತ ನೆಟ್ಟಿದ್ದು ಏಕೆ?

Parijatha
Published on

ರಾಮ ಜನ್ಮಭೂಮಿ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾರಿಜಾತ ಸಸಿಯನ್ನು ನೆಟ್ಟರು. ಈ ಸಸಿಯನ್ನೇ ನೆಡುವುದರ ಹಿಂದೆ ಘನವಾದ ಉದ್ದೇಶವಿದೆ.

ಐತಿಹ್ಯದ ಪ್ರಕಾರ ದೇವರಾಜ ಇಂದ್ರ ಪಾರಿಜಾತ ಗಿಡವನ್ನು ಸ್ವರ್ಗದಲ್ಲಿ ನೆಟ್ಟಿದ್ದ. ಇದರ ಹೂವುಗಳು ಚಿಕ್ಕ ಗಾತ್ರದಾದ್ದರೂ, ಶ್ವೇತವರ್ಣದಿಂದ ಕೂಡಿದ್ದು, ಆಹ್ಲಾದ ನೀಡುತ್ತವೆ. ಈ ಹೂವುಗಳು ರಾತ್ರಿ ಅರಳಿ, ಬೆಳಗ್ಗೆ ಗಿಡದಿಂದ ಉದುರುತ್ತವೆ. ಪಾರಿಜಾತ ಪಶ್ಚಿಮ ಬಂಗಾಳದ ರಾಜ್ಯ ಪುಷ್ಪವೂ ಹೌದು. ಲಕ್ಷ್ಮೀದೇವಿಗೆ ಪಾರಿಜಾತ ತುಂಬ ಪ್ರಿಯ. ಪೂಜೆ-ಅರ್ಚನೆ ಸಮಯದಲ್ಲಿ ಪಾರಿಜಾತ ಹೂವು ಸಮರ್ಪಿಸುವುದರಿಂದ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ.

ಶ್ರೀಕೃಷ್ಣ ಪರಮಾತ್ಮ ಪಾರಿಜಾತವನ್ನು ಸ್ವರ್ಗದಿಂದ ಭೂಮಿಗೆ ತಂದು, ಗುಜರಾತಿನ ದ್ವಾರಕಾದಲ್ಲಿ ನೆಟ್ಟಿದ್ದನಂತೆ. ಅರ್ಜುನ ಅಲ್ಲಿಂದ ಪಾರಿಜಾತ ವೃಕ್ಷವನ್ನೇ ಎತ್ತಿಕೊಂಡು ಬಂದ ಎಂಬ ಐತಿಹ್ಯವಿದೆ. ಪಾರಿಜಾತದ ಹೂವು, ಎಲೆಗಳನ್ನು ಔಷಧ ತಯಾರಿಕೆಗೆ ಬಳಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net