

Dogs Howl : ಸಾಮಾನ್ಯವಾಗಿ ಬೀದಿಯಲ್ಲಿ ಓಡಾಡುವ ನಾಯಿಗಳು ಹಗಲಿನಲ್ಲಿ ಯಾವುದೇ ತೊಂದರೆಯನ್ನು ನೀಡುವುದಿಲ್ಲ. ಯಾವುದೇ ಶಬ್ಧವನ್ನು ಮಾಡದೇ ತಮ್ಮ ಪಾಡಿಗೆ ತಾವು ಇರುತ್ತವೆ. ಆದರೆ, ರಾತ್ರಿಯಾದರೆ ಸಾಕು ತಕ್ಷಣ ಊಳಿಡಲು ಪ್ರಾರಂಭಿಸುತ್ತವೆ. ಅಲ್ಲದೆ, ರಸ್ತೆಯಲ್ಲಿ ಓಡುವ ವಾಹನವಾಗಲಿ ಅಥವಾ ಮಧ್ಯರಾತ್ರಿಯಲ್ಲಿ ರಸ್ತೆಯಲ್ಲಿ ನಡೆಯುವವರಾಗಲಿ ಬೆನ್ನಟ್ಟಿ ಹೋಗುತ್ತದೆ.
ಕೆಲವೊಮ್ಮೆ ನಾಯಿಗಳು ಮಧ್ಯರಾತ್ರಿಯಲ್ಲಿ ಅತಿಯಾಗಿ ಕೂಗುತ್ತವೆ. ಈ ಕೂಗು ಆಳವಾದ ನಿದ್ರೆಯಲ್ಲಿರುವಾಗಲೂ ನಮ್ಮನ್ನು ಇದ್ದಕ್ಕಿದ್ದಂತೆ ಎಚ್ಚರಗೊಳಿಸಬಹುದು. ನಾಯಿಗಳು ಈ ರೀತಿ ಉಳಿಡುವುದಕ್ಕೆ ನಾನಾ ಅರ್ಥಗಳನ್ನು ಕಲ್ಪನೆ ಮಾಡಲಾಗುತ್ತದೆ. ಕೆಲವರ ನಂಬಿಕೆ ಪ್ರಕಾರ ನಾಯಿಗಳ ಕಣ್ಣಿಗೆ ನಕರಾತ್ಮಕ ಶಕ್ತಿಗಳು ಕಾಣಿಸಿಕೊಂಡಾಗ ಕೂಗುತ್ತವೆ ಎನ್ನುತ್ತಾರೆ. ಆದರೆ, ನಿಖರ ಕಾರಣ ಏನು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹೀಗಾಗಿ ನಾಯಿಗಳು ರಾತ್ರಿಯಲ್ಲಿ ಏಕೆ ಹೆಚ್ಚು ಬೊಗಳುತ್ತವೆ? ಇದಕ್ಕೆ ನಿಜವಾದ ಕಾರಣವೇನು? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
1. ನೀವು ಅಂದುಕೊಂಡ ಹಾಗೇ ಬೀದಿ ನಾಯಿಗಳು ಮಾತ್ರವಲ್ಲ, ಮನೆಯಲ್ಲಿ ಸಾಕಿರುವ ನಾಯಿಗಳು ಸಹ ರಾತ್ರಿಯಲ್ಲಿ ಕೂಗುತ್ತವೆ. ಇದಕ್ಕೆ ಹಲವು ಕಾರಣಗಳಿದ್ದರೂ, ಶಾಸ್ತ್ರಗಳು ಮರಣವನ್ನು ಮುನ್ಸೂಚಿಸುವ ಕೆಟ್ಟ ಶಕುನ ಎಂದು ಹೇಳುತ್ತವೆ.
2. ಬೀದಿ ನಾಯಿಗಳು ತಮ್ಮ ಗುಂಪಿನಲ್ಲಿರುವ ಇತರ ನಾಯಿಗಳಿಗೆ ಏನಾದರೂ ಸಂಕೇತವನ್ನು ಕಳುಹಿಸಲು ರಾತ್ರಿ ವೇಳೆ ಬೊಗಳುತ್ತವೆ ಎಂದು ಅನೇಕ ಅಧ್ಯಯನಗಳು ಸೂಚಿಸುತ್ತವೆ. ಇದಲ್ಲದೆ, ನಾಯಿಗಳು ತಮ್ಮ ಸುತ್ತಲಿನ ನಾಯಿಗಳೊಂದಿಗೆ ಸಂವಹನ ನಡೆಸಲು ಈ ರೀತಿ ಬೊಗಳಬಹುದು ಎಂಬ ಸಿದ್ಧಾಂತವೂ ಇದೆ.
3. ನಾಯಿಗಳು ತಮಗೆ ಇಷ್ಟವಿಲ್ಲದ ವಾತಾವರಣದಲ್ಲಿದ್ದಾಗ ಅದನ್ನು ತೋರಿಸಲು ಬೊಗಳುತ್ತವೆ ಎಂದು ಹೇಳಲಾಗುತ್ತದೆ.
4. ಈ ಜಾಗ ನಮ್ಮದು ಮತ್ತು ಬೇರೆ ನಾಯಿಗಳು ಇಲ್ಲಿಗೆ ಬರಬಾರದು ಎಂದು ಎಚ್ಚರಿಸಲು ನಾಯಿಗಳು ರಾತ್ರಿಯಲ್ಲಿ ಬೊಗಳುತ್ತವೆ ಎನ್ನಲಾಗಿದೆ.
5. ನಾಯಿಗಳು ತಮ್ಮ ಪರಿಸರದಲ್ಲಿ ಸಣ್ಣ ಬದಲಾವಣೆಗಳಾದರೂ ಸುಲಭವಾಗಿ ಗ್ರಹಿಸಬಹುದು. ಅದರಲ್ಲೂ ಪಟಾಕಿ ಸಿಡಿಸುವುದು, ಪಾರ್ಟಿಗಳಲ್ಲಿ ಜೋರಾದ ಶಬ್ದಗಳು, ವಾಹನಗಳ ಹಾರ್ನ್ ಮತ್ತು ಸೈರನ್ಗಳು ಬೀದಿ ನಾಯಿಗಳನ್ನು ಕೆರಳಿಸಬಹುದು. ಇದರ ಪರಿಣಾಮವಾಗಿ ನಾಯಿಗಳು ಕೂಗುತ್ತವೆ.
6. ನಾಯಿಗಳ ದೇಹದ ಮೇಲೆ ಯಾವುದಾದರೂ ಗಾಯಗಳಾಗಿದ್ದರೆ, ಅವು ನೋವನ್ನು ಅನುಭವಿಸುತ್ತವೆ. ಅದನ್ನು ವ್ಯಕ್ತಪಡಿಸಲು ನಾಯಿಗಳು ರಾತ್ರಿಯಲ್ಲಿ ಬೊಗಳುತ್ತವೆ. ಕೆಲವು ನಾಯಿಗಳು ದಿನವಿಡೀ ಅಲೆದಾಡುತ್ತವೆ ಮತ್ತು ಆಹಾರ ಸಿಗದಿದ್ದರೆ, ರಾತ್ರಿಯಲ್ಲಿ ತಮ್ಮ ಹಸಿವನ್ನು ವ್ಯಕ್ತಪಡಿಸಲು ಬೊಗಳುತ್ತವೆ ಮತ್ತು ಹಸಿದ ಕಾರಣ ಅವುಗಳಿಗೆ ನಿದ್ರೆಯು ಸಹ ಬರುವುದಿಲ್ಲ.
ಗಮನಿಸಿ: ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪುಸ್ತಕಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶ. ಇದಕ್ಕೆ ವಿಜಯವಾಣಿ ಡಾಟ್ ನೆಟ್ ಹೊಣೆಯಲ್ಲ. (ಏಜೆನ್ಸೀಸ್)