ದುಡುಕಿ ಹೀಗ್ಯಾಕೆ ಮಾಡಿದ್ರು 'ಲಿಯೋ' ನಿರ್ದೇಶಕ? ಲೋಕೇಶ್ ನಿರ್ಧಾರಕ್ಕೆ ಫ್ಯಾನ್ಸ್ ತೀವ್ರ ಬೇಸರ!

ವಿಜಯವಾಣಿ (78)
Published on

ತಮಿಳುನಾಡು: ಪ್ಯಾನ್ ಇಂಡಿಯಾ ಸಿನಿಮಾ 'ಲಿಯೋ' ನಿರ್ದೇಶಕ ಲೋಕೇಶ್ ಕನಕರಾಜ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ತಾವು ತೆಗೆದುಕೊಂಡ ನಿರ್ಧಾರಕ್ಕೆ ಸಿನಿಪ್ರೇಕ್ಷಕರು ಮತ್ತು ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಲೋಕೇಶ್​ ಮಾಡಿದ್ದೇನು? ದುಡುಕಿ ಯಾವ ನಿರ್ಧಾರ ಕೈಗೊಂಡರು ಎಂಬುದರ ಮಾಹಿತಿ ಇಲ್ಲಿದೆ ನೋಡಿ..

ಸದ್ಯ ಕಾಲಿವುಡ್​ ಅಂಗಳದಲ್ಲಿ ವಿಭಿನ್ನ ಹಾಗು ವಿಶೇಷ ಜಾನರ್​ ಸಿನಿಮಾಗಳನ್ನು ಮಾಡುವಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಲೋಕೇಶ್​, 'ಲಿಯೋ' ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಲಿಯೋ ಚಿತ್ರಗಳಂತಹ ಆ್ಯಕ್ಷನ್, ಥ್ರಿಲ್ಲರ್​ ಸಿನಿಮಾಗಳ ಮೂಲಕ ಹೊಸ ಅಲೆಯನ್ನು ಸೃಷ್ಟಿಸುತ್ತಿರುವ ದಕ್ಷಿಣ ಭಾರತದ ಡೈರೆಕ್ಟರ್​, ಇದೀಗ ಬೇರೆ ಒಂದು ವಿಚಾರಕ್ಕೆ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.

ಬಾಕ್ಸ್ ಆಫೀಸ್​ನಲ್ಲಿ 'ಲಿಯೋ' ಅಬ್ಬರಿಸಿದ ಬಳಿಕ ತಮ್ಮ ಮುಂದಿನ ಸಿನಿಮಾಗಳ ಕೆಲಸಗಳತ್ತ ಹೆಜ್ಜೆ ಹಾಕಿದ ಲೋಕೇಶ್, ಇದೀಗ ಸೋಷಿಯಲ್ ಮೀಡಿಯಾ ಬಳಸುವುದನ್ನು ನಿಲ್ಲಿಸುತ್ತೇನೆ ಎಂದು ಹೇಳುವ ಮೂಲಕ ಶಾಕಿಂಗ್ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ, ಅವರು ಎಲ್ಲಾ ಸಾಮಾಜಿಕ ಜಾಲತಾಣದ ಪ್ಲಾಟ್‌ಫಾರ್ಮ್‌ಗಳಿಂದ ಹೊರಬರಲಿದ್ದು, ಹೆಚ್ಚಿನ ಮೊಬೈಲ್‌ ಬಳಕೆಗೆ ಬ್ರೇಕ್ ಕೊಡಲಿದ್ದಾರೆ.

ಇಂತಹ ನಿರ್ಧಾರ ಕೈಗೊಳ್ಳಲು ಅಸಲಿ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ, ಲೋಕೇಶ್ ತಮ್ಮ ಸಂಪೂರ್ಣ ಗಮನವನ್ನು ಅವರ ಮುಂದಿನ ಪ್ರಾಜೆಕ್ಟ್​ ರಜನಿಕಾಂತ್ ನಟನೆಯ 'ತಲೈವರ್ 171' ಚಿತ್ರಕ್ಕಾಗಿ ಮೀಸಲಿಡಲು ಚಿಂತಿಸಿದ್ದಾರೆ. ತಮ್ಮ ಚೊಚ್ಚಲ ಪ್ರೊಡಕ್ಷನ್​ನ ಜೀ ಸ್ಕ್ವ್ಯಾಡ್​ ಬ್ಯಾನರ್​ನಡಿ ತೆರೆಗೆ ಬಂದ ​'ಫೈಟ್​ ಕ್ಲಬ್' ಚಿತ್ರಕ್ಕೆ ಸಿನಿಪ್ರೇಕ್ಷಕರು ನೀಡುತ್ತಿರುವ ಬೆಂಬಲ ಕಂಡು ಲೋಕೇಶ್​ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net