

Pawan Kalyan: ತೆಲುಗು ನಟ ಪವರ್ಸ್ಟಾರ್ ಕಮ್ ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಬಗ್ಗೆ ಯಾರಿಗೆ ತಿಳಿಯದು. ಸಿನಿಮಾ ರಂಗದಿಂದ ಏಕಾಏಕಿ ರಾಜಕಾರಣ ಪ್ರವೇಶಿಸಿ ಇಂದು ರಾಜ್ಯದ ಡಿಸಿಎಂ ಆಗುವ ಮೂಲಕ ಇಡೀ ದೇಶವನ್ನು ತಮ್ಮ ಕಡೆ ನೋಡುವಂತೆ ಮಾಡಿದ ನಟ ಈತ. ಡಿಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಪವನ್ ಕಲ್ಯಾಣ್ ಅವರ ನಟನೆಯ 'ಹರಿಹರ ವೀರಮಲ್ಲು' ಚಿತ್ರ ಬಿಡುಗಡೆಗೊಳ್ಳಲು ಸಿದ್ಧವಾಗಿದೆ.
ಈ ವಾರ ಹರಿಹರ ವೀರಮಲ್ಲು ವಿಶ್ವದ್ಯಾಂತ ತೆರೆಗೆ ಬರ್ತಿದೆ. ಗುರುವಾರ(ಜು.24) ಸಿನಿಮಾ ಬಿಡುಗಡೆಯಾಗಲಿದ್ದು, ಇದಾಗಲೇ ಪ್ರಿಮಿಯರ್ ಶೋಗಳು ಆರಂಭವಾಗಿವೆ. ಅದಾಗ್ಯೂ, ಈ ಸಿನಿಮಾ ಪ್ರೀ ಇವೆಂಟ್ ಆಂಧ್ರದ ವಿಶಾಖಪಟ್ಟಣದಲ್ಲಿ ನಡೆಯಿತು. ರಾಜಕೀಯ ಚಟುವಟಿಕಗಳನ್ನು ಬದಿಗೊತ್ತಿ ಪವನ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಈ ಇವೆಂಟ್ಗೆ ರಾಜಕಾರಣಿಗಳು ಸೇರಿ ಪವನ್ ಬೆಳವಣಿಗೆಗೆ ಕಾರಣವಾದ ಪ್ರಮುಖರಲ್ಲಿ ಅವರ ಗುರು ಸತ್ಯಾನಂದ್ ಕೂಡ ಭಾಗವಹಿಸಿದ್ದರು.
ಪ್ರೀ ಇವೆಂಟ್ ವೇದಿಕೆ ಕಾರ್ಯಕ್ರಮ ಹಂಚಿಕೊಂಡ ಸತ್ಯಾನಂದ್ ಕೆಲ ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಂಡರು. ಅದರಲ್ಲಿ ಪವನ್ ಮತ್ತು ನಟ ಚಿರಂಜೀವಿ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಹೇಳಿದ ಮಾತುಗಳು ಇದೀಗ ವೈರಲ್ ಆಗಿವೆ.
1992ರಲ್ಲಿ ನಟ ಚಿರಂಜೀವಿ ನನಗೆ ಕರೆ ಮಾಡಿದರು. ಎಲ್ಲಿದ್ದರೂ ಆದಷ್ಟು ಬೇಗೆ ಚೆನ್ನೈಗೆ ಬರಲು ಹೇಳಿದ್ರು. ನಾನು ಚೆನ್ನೈಗೆ ತೆರಳಿದ ತಕ್ಷಣ, ಚಿರಂಜೀವಿ ಅವರು ತಮ್ಮನ (ಪವನ್ ಕಲ್ಯಾಣ್) ಕೈ ಹಿಡಿದು ಹೀಗೆ ಹೇಳಿದರು.. ಸತ್ಯ ಅವರೇ.. ನನ್ನ ತಮ್ಮ ಪವನ್ನನ್ನು ನಿಮ್ಮ ಕೈಯಲ್ಲಿಡುತ್ತಿದ್ದೇನೆ. ಅವನನ್ನು ಒಬ್ಬ ನಟನ್ನಾಗಿ ಮಾಡಿ. ಈ ಜವಾಬ್ದಾರಿ ನಿಮ್ಮದು ಎಂದರು. ಇದು ನನ್ನ ಜೀವನದ ದೊಡ್ಡ ತಿರುವು. ಅಲ್ಲಿಯವರೆಗೂ ನಾನು ಸಣ್ಣ ನಾಟಕಗಳನ್ನು ಮಾಡುತ್ತಿದ್ದೆ. ನನ್ನ ಜೀವನ ದಿಕ್ಕು ತೋಚದ ಸ್ಥಿತಿಯಲ್ಲಿತ್ತು ಎಂದು ಸತ್ಯಾನಂದ್ ಹೇಳಿದರು.
ಆ ಸಮಯದಲ್ಲಿ, ಚಿರಂಜೀವಿ ಒಂದು ನಿರ್ಧಾರ ತೆಗೆದುಕೊಂಡು ಪವನ್ ಕಲ್ಯಾಣ್ ಅವರನ್ನು ನನ್ನ ಕೈಯಲ್ಲಿ ವಜ್ರವನ್ನಾಗಿ ಇಟ್ಟರು. ಆ ದಿನದಿಂದ ಇಂದಿನವರೆಗೆ ನಾನು ಹಿಂತಿರುಗಿ ನೋಡಬೇಕಾಗಿಲ್ಲ. ನಾನು ಇನ್ನೂ ನೂರಾರು ಜನರಿಗೆ ನಟನೆಯಲ್ಲಿ ತರಬೇತಿ ನೀಡುತ್ತಿದ್ದೇನೆ ಎಂದು ಸತ್ಯಾನಂದ್ ಹೇಳಿದರು. ಅವರ ಮೊದಲ ಶಿಷ್ಯ ಪವನ್ ಕಲ್ಯಾಣ್ ಎಂದು ಅವರು ಹೇಳಿದರು.(ಏಜೆನ್ಸೀಸ್)