

ಮೂರು ದಶಕದ ನಂತರ ರೂಪಿಸಿರುವ ನೂತನ ಶಿಕ್ಷಣ ನೀತಿ-2020ಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ನೀತಿ ರಚನೆಯ ಸಮಿತಿ ಅಧ್ಯಕ್ಷತೆ ವಹಿಸಿದ್ದವರು ಇಸ್ರೋ ಮಾಜಿ ಅಧ್ಯಕ್ಷ ಡಾ. ಕಸ್ತೂರಿ ರಂಗನ್. ಹೊಸ ಶಿಕ್ಷಣ ವ್ಯವಸ್ಥೆಯ ಕುರಿತು ವಿಜಯವಾಣಿ ಜತೆಗೆ ಮನದಾಳ ಹಂಚಿಕೊಂಡಿದ್ದಾರೆ.
ರಮೇಶ ದೊಡ್ಡಪುರ ಬೆಂಗಳೂರು * ಶಿಕ್ಷಣ ನೀತಿ ಎಂದ ಕೂಡಲೆ ಸಾಕಷ್ಟು ಚರ್ಚೆ ಪಠ್ಯಕ್ರಮ (ಸಿಲಬಸ್) ಕುರಿತೇ ನಡೆಯುತ್ತದೆ. ಈ ನೀತಿ ಪಠ್ಯಕ್ರಮದದ ಬದಲಾವಣೆಗಿಂತ ಹೆಚ್ಚಿನದ್ದೇನಿದೆ?
* ಹೊಸ ಶಿಕ್ಷಣ ನೀತಿಯ ಕಾರಣಕ್ಕೆ ರಾಜ್ಯ ಸರ್ಕಾರಗಳ ಪಾಲುದಾರಿಕೆ, ವ್ಯಾಪ್ತಿ ಕಡಿಮೆಯಾಗುತ್ತದೆ, ಕೇಂದ್ರದ ಮೇಲುಗೈ ಆಗುತ್ತದೆ ಎಂಬ ಮಾತುಗಳಿವೆಯಲ್ಲ?
- ನಾನು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷನಾಗಿದ್ದಾಗ ನೀತಿಯನ್ನು ರೂಪಿಸಿದ್ದೆವು. ಅದನ್ನು ಗಮನಿಸಿದರೆ, ಸಾಕಷ್ಟು ಸಾಮ್ಯತೆಗಳಿವೆ. ಶಿಕ್ಷಣದ ವಿಷಯ ಸಂವಿಧಾನದ ಸಹವರ್ತಿ ಪಟ್ಟಿಯಲ್ಲಿ ಬರುತ್ತದೆ. ರಾಜ್ಯ ಸರ್ಕಾರಗಳು ಕೈಗೊಳ್ಳುವ ನಿರ್ಧಾರಗಳೇ ಅಂತಿಮವಾಗಿ ಜಾರಿಯಾಗುವುದು. ನಿರ್ಧಾರ ಪ್ರಕ್ರಿಯೆಯ ಮೌಲ್ಯ ಹೆಚ್ಚಿಸಲು ಹಾಗೂ ಪ್ರಾಮಾಣೀಕರಿಸುವಲ್ಲಿ ಕೇಂದ್ರದೊಂದಿಗೆ ಸಮಾಲೋಚನೆ ಇದ್ದೇ ಇರುತ್ತದೆ. ದೇಶದ ಹಿತದೃಷ್ಟಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ, ಕೇಂದ್ರ ಸರ್ಕಾರ ಸಮಪಾಲು ಹೊಂದಿರುತ್ತವೆ.
* ದೇಶಗಳ ವೈವಿಧ್ಯತೆ, ಸಾಕ್ಷರತೆ ಪ್ರಮಾಣ ಗಮನದಲ್ಲಿರಿಸಿಕೊಂಡು ಈ ನೀತಿ ಅನುಷ್ಠಾನ ಎಷ್ಟು ಸವಾಲಾಗಬಹುದು?
- ನೀತಿಯ ಅನುಷ್ಠಾನದ ವಿಚಾರದಲ್ಲಿ ಇದು ಬಹುಮುಖ್ಯವಾದ ಅಂಶ. ನಮ್ಮ ದೇಶದ ಭಾಷೆ, ಪ್ರದೇಶ, ಅಭಿವೃದ್ಧಿ, ಸಂಸ್ಕೃತಿ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳಲ್ಲಿ ವೈವಿಧ್ಯತೆ ಇದೆ. ಹಾಗಾಗಿ ನೀತಿ ಅನುಷ್ಠಾನ ಮಾಡುವಾಗ, ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಯೋಜನೆಯನ್ನು ಹೊಂದುವುದು ಮುಖ್ಯ. ನೀತಿಯು ವ್ಯಾಪಕವಾಗಿದ್ದು, ಅನುಷ್ಠಾನ ಸಮಯದಲ್ಲಿ ಈ ವೈವಿಧ್ಯತೆಯನ್ನು ಗಮನಲ್ಲಿರುವಂತೆ ಖಾತ್ರಿಪಡಿಸಿಕೊಳ್ಳಬೇಕು.
* ಈಗಾಗಲೆ ಲಕ್ಷಾಂತರ ಶಿಕ್ಷಕರಿದ್ದಾರೆ, ಅವರೆಲ್ಲರಿಗೂ ತರಬೇತಿ ನೀಡುವ ಸಾಧ್ಯತೆ ಹೇಗೆ?
- ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಕುರಿತು ಶಿಕ್ಷಕರಲ್ಲಿ ಮೂಡುವ ಎಲ್ಲ ಪ್ರಶ್ನೆಗಳಿಗೆ ನಾವು ಪರಿಹಾರ ಸೂಚಿಸಿದ್ದೇವೆ. ತಂತ್ರಜ್ಞಾನ ಸೇರಿದಂತೆ ಹೊಸ ಪದ್ಧತಿಗೆ ಅವರು ಹೊಂದಿಕೊಳ್ಳುವುದು ಹೇಗೆ, ಸೇವೆ ಸಲ್ಲಿಸಲು ಉತ್ತಮ ವಾತಾವರಣ ನಿರ್ವಿುಸುವುದು ಹೇಗೆ ಎಂಬುದು ಸೇರಿ ಅನೇಕ ವಿಚಾರ ಗಳನ್ನು ವಿಸõತವಾಗಿ ರ್ಚಚಿಸಿ ದ್ದೇವೆ. ಹೊಸ ಶಿಕ್ಷಣ ವ್ಯವಸ್ಥೆ ಶಿಕ್ಷಕರ ಗೌರವ ಮತ್ತಷ್ಟು ಹೆಚ್ಚುವ ರೀತಿಯಲ್ಲಿ ರೂಪಿಸಲಾಗಿದೆ.
ಸುಭದ್ರ ಸಾಕ್ಷರತೆ, ಸಂಖ್ಯಾಶಾಸ್ತ್ರ: ಸುಭದ್ರ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಇಂದಿನ ಕಲಿಕೆಯ ತುರ್ತು ಅಗತ್ಯವಾಗಿದ್ದು, ಇದಕ್ಕಾಗಿ ಶಿಕ್ಷಣ ಇಲಾಖೆಯು ಸುಭದ್ರ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ರಾಷ್ಟ್ರೀಯ ಮಿಷನ್ ಸ್ಥಾಪಿಸಲಿದೆ. 2025ರ ಒಳಗಾಗಿ ಸುಭದ್ರ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಉದ್ದೇಶ ಸಾಧಿಸುವ ಸಲುವಾಗಿ ಎಲ್ಲಾ ರಾಜ್ಯ ಸರ್ಕಾರಗಳು ಅನುಷ್ಠಾನ ಯೋಜನೆ ಸಿದ್ಧಪಡಿಸಬೇಕಿದೆ. ಅಲ್ಲದೆ, ರಾಷ್ಟ್ರೀಯ ಪುಸ್ತಕ ಪ್ರಚಾರ ನೀತಿಯನ್ನೂ ರೂಪಿಸುವ ಉದ್ದೇಶ ಹೊಂದಲಾಗಿದೆ.
ಹೊಸ ಪಠ್ಯಕ್ರಮ, ಬಾಲ್ಯದ ಆರೈಕೆ: ಮಕ್ಕಳ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕೆ ಒತ್ತು ನೀಡಿ, ಈಗಿನ 10+2 ಶಾಲಾ ಪಠ್ಯಕ್ರಮದ ಬದಲಾಗಿ 3-8, 8-11, 11-14 ಮತ್ತು 14-18 ವರ್ಷಕ್ಕೆ ಅನುಗುಣವಾಗಿ 5+3+3+4 ವರ್ಷಗಳ ಶಿಕ್ಷಣ ಪದ್ಧತಿಯನ್ನು ಜಾರಿ ಮಾಡುವುದು. ಇದು ಮಕ್ಕಳ ಮಾನಸಿಕ ಸಾಮರ್ಥ್ಯದ ಅಭಿವೃದ್ಧಿಯ ನಿರ್ಣಾಯಕ ಹಂತ ಎಂದೇ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಇಲ್ಲಿ ಮೊದಲ ಮೂರು ವರ್ಷ ಅಂಗನವಾಡಿ/ಪ್ರಿ ಸ್ಕೂಲ್ ಶಿಕ್ಷಣ ನೀಡಲಾಗುವುದು. ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕಾಗಿ 8 ವರ್ಷದವರೆಗಿನ ಮಕ್ಕಳಿಗಾಗಿ ಎನ್ಸಿಇಆರ್ಟಿ ಪಠ್ಯಕ್ರಮ ಅಭಿವೃದ್ಧಿಪಡಿಸಲಿದೆ.
ಬಹುಭಾಷೆ ಮತ್ತು ಭಾಷಾ ಶಕ್ತಿ: 5ನೇ ತರಗತಿ ತನಕ ಪ್ರಾದೇಶಿಕ/ಸ್ಥಳೀಯ/ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಕಡ್ಡಾಯ. ಅದರ ಮೇಲಾಗಿ 8 ಮತ್ತು ಅದಕ್ಕೂ ಮೀರಿದ ತರಗತಿಗೆ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ನೀಡಬಹುದು. ಅದರೆ ಅದು ಕಡ್ಡಾಯವೇನಲ್ಲ. ಉನ್ನತ ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲಿ ಕಲಿಯುವ ಆಯ್ಕೆ ನೀಡಬಹುದು. ಶಾಲೆಗಳಲ್ಲಿ ಎಲ್ಲಾ ಹಂತದಲ್ಲೂ ಸಂಸ್ಕೃತ ಬೋಧಿಸಬೇಕು. ತ್ರಿಭಾಷಾ ಸೂತ್ರ ಅಳವಡಿಸುವುದರೊಂದಿಗೆ ಉನ್ನತ ಶಿಕ್ಷಣದಲ್ಲಿ ಸಂಸ್ಕೃತವನ್ನು ಆಯ್ಕೆಯಾಗಿ ನೀಡಬಹುದು. ಭಾರತದ ಇತರೆ ಶಾಸ್ತ್ರೀಯ ಭಾಷೆಗಳು ಹಾಗೂ ಸಾಹಿತ್ಯಗಳು ಸಹ ಆಯ್ಕೆಗಳಾಗಿ ಲಭ್ಯವಿರಲಿವೆ. ಯಾವ ಭಾಷೆಯನ್ನೂ ವಿದ್ಯಾರ್ಥಿ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗುವುದಿಲ್ಲ. ಏಕ ಭಾರತ ಶ್ರೇಷ್ಠ ಭಾರತ ಉಪಕ್ರಮದಡಿಯಲ್ಲಿ 6-8ನೇ ತರಗತಿ ಕಲಿಕೆ ಮಧ್ಯೆ ವಿದ್ಯಾರ್ಥಿಗಳಿಗೆ ಭಾರತದ ಭಾಷೆಗಳ ಬಗ್ಗೆ ಪ್ರಾಜೆಕ್ಟ್ ಅಥವಾ ಚಟುವಟಿಕೆಗಳನ್ನು ಆಯೋಜಿಸುವುದು, ಪ್ರೌಢ ಶಿಕ್ಷಣ ಹಂತದಲ್ಲಿ ಹಲವು ವಿದೇಶಿ ಭಾಷೆಗಳ ಕಲಿಕೆಗೆ ಕ್ರಮ ಕೈಗೊಳ್ಳುವ ಅಂಶಗಳನ್ನು ಇದು ಒಳಗೊಂಡಿದೆ. ಶ್ರವಣದೋಷವುಳ್ಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಭಾರತೀಯ ಸಂಕೇತ ಭಾಷೆ (ಐಎಸ್ಎಲ್) ದೇಶಾದ್ಯಂತ ಪ್ರಮಾಣೀಕರಿಸುವ ಉದ್ದೇಶವಿದೆ.