ಯಾರಿಗೆ ಕೀಲಿ'ಕೈ'?; ಹೊಸ ನಾಯಕತ್ವಕ್ಕೆ ಸೋನಿಯಾ ಸೂಚನೆ

front-1
Published on

ನವದೆಹಲಿ: ಕಾಂಗ್ರೆಸ್​ಗೆ ಗಾಂಧಿ ಮನೆತನ ಹೊರತುಪಡಿಸಿದ ನಾಯಕತ್ವ ಆಯ್ದುಕೊಳ್ಳುವ ಕಾಲ ಪಕ್ವವಾಗಿದೆಯೇ? ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಸೋಮವಾರ ನಿಗದಿಯಾಗಿರುವ ಬೆನ್ನಲ್ಲೇ ಕೈಪಾಳಯದ ಕಾರಿಡಾರ್​ನಲ್ಲಿ ಇಂಥದ್ದೊಂದು ಚರ್ಚೆ ಜೋರಾಗಿದೆ.

‘ನಮಗೆ ಪ್ರಬಲ ನಾಯಕತ್ವದ ಅಗತ್ಯವಿದ್ದು, ಪ್ರಮುಖ ವಿಚಾರಗಳಲ್ಲಿ ಕೇಂದ್ರ ಸರ್ಕಾರವನ್ನು ಸಮರ್ಥವಾಗಿ ಎದುರಿಸಲು, ರಾಷ್ಟ್ರಮಟ್ಟದಲ್ಲಿ ಪಕ್ಷದ ಪುನಶ್ಚೇತನಕ್ಕಾಗಿ ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆ

ಯಾಗಬೇಕು’ ಎಂದು ಕಾಂಗ್ರೆಸ್​ನ 23 ಮಂದಿ ಪ್ರಮುಖರು ಪತ್ರ (ಆ.10) ಬರೆದ ಬೆನ್ನಲ್ಲೇ, ‘ಹೊಸ ನಾಯಕತ್ವವನ್ನು ಆಯ್ಕೆ ಮಾಡಿಕೊಳ್ಳಿ’ ಎಂದು ಅಧಿನಾಯಕಿ ಸೋನಿಯಾ ಗಾಂಧಿ ಕೂಡ ತಿಳಿಸಿರುವುದು ಪಕ್ಷದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಯುವ ನಾಯಕ ಸಚಿನ್ ಪೈಲಟ್ ನಡುವಿನ ರಾಜಕೀಯ ಕಾದಾಟ ಜೋರಾಗಿದ್ದ ಸಂದರ್ಭದಲ್ಲೇ 23 ಹಿರಿ-ಕಿರಿಯ ನಾಯಕರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಈ ಪತ್ರ ಬಹಿರಂಗಗೊಳ್ಳುತ್ತಿದ್ದಂತೆಯೇ ಆಪ್ತರ ಮೂಲಕ ಸಂದೇಶ ರವಾನಿಸಿರುವ ಸೋನಿಯಾ, ‘ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲೂ ನಾನು ಪೂರ್ಣಾವಧಿಗೆ ಅಧ್ಯಕ್ಷೆಯಾಗಿರಲಾರೆ ಎಂದಿದ್ದೆ. ಹೀಗಾಗಿ, ನೀವೇ ರ್ಚಚಿಸಿ, ಗಾಂಧಿಯೇತರ ನಾಯಕತ್ವ ಆಯ್ದುಕೊಳ್ಳಿ’ ಎಂದು ತಿಳಿಸಿರುವುದಾಗಿ ಹೇಳಲಾಗುತ್ತಿದೆ.

ಕಳೆದ ಲೋಕಸಭೆ ಚುನಾವಣೆಯ ಸೋಲಿನ ಬಳಿಕ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಸೋಲಿಗೆ ತಾನೇ ಜವಾಬ್ದಾರಿ ಎಂದಿದ್ದರು. ಅಲ್ಲದೆ, ಬೇರೆಯವರಿಗೆ ನಾಯಕತ್ವ ನೀಡುವುದು ಸೂಕ್ತ ಎಂದೂ ಅಭಿಪ್ರಾಯಪಟ್ಟಿದ್ದರು. ಆದರೆ, ಬಹುತೇಕ ಮಂದಿ ಗಾಂಧಿ ಮನೆತನದವರೇ ಪಕ್ಷವನ್ನು ಮುನ್ನಡೆಸಬೇಕು ಎಂದು ಒತ್ತಾಯಿಸಿದ್ದರಿಂದ ಸೋನಿಯಾ ಗಾಂಧಿ ಮಧ್ಯಂತರ ಅಧ್ಯಕ್ಷರಾಗಲು ಒಪ್ಪಿದ್ದರು.

ಕಳೆದ ಲೋಕಸಭೆ ಚುನಾವಣೆ ಮುನ್ನ ಲೇಖಕರೊಬ್ಬರಿಗೆ ಸಂದರ್ಶನ ನೀಡಿದ್ದ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ, ‘ಗಾಂಧಿ ವಂಶಸ್ಥರಲ್ಲದ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ನನ್ನದೇನೂ ತಕರಾರಿಲ್ಲ’ ಎಂದಿದ್ದರು. ಕೆಲ ದಿನಗಳ ಹಿಂದೆ ಈ ಸಂದರ್ಶನ ಬಹಿರಂಗಗೊಂಡಿದ್ದರಿಂದ ‘ಹೊಸ ನಾಯಕತ್ವದ ಚರ್ಚೆ’ ಮುನ್ನೆಲೆಗೆ ಬಂದಿತ್ತು. ಇದೇ ವೇಳೆ 23 ಮಂದಿಯ ಪತ್ರವೂ ಬೆಳಕಿಗೆ ಬಂದಿರುವುದರಿಂದ ಸೋನಿಯಾ ಮೇಲೂ ಒತ್ತಡ ಹೆಚ್ಚಿತ್ತು. ಸೋಮವಾರದ ಕಾರ್ಯಕಾರಿ ಸಮಿತಿ ಸಭೆಗೆ ಮುನ್ನವೇ ಅವರು ತಮ್ಮ ಅಭಿಪ್ರಾಯ ಹೊರಹಾಕಿದ್ದು, ಸಭೆಯಲ್ಲಿ ಮತ್ತೇನೇನು ಚರ್ಚೆಯಾಗಬಹುದು ಎಂಬ ಕುತೂಹಲವೂ ಹೆಚ್ಚಿದೆ.

ಎಲ್ಲರ ಒಪ್ಪಿಗೆ ಇದೆಯೇ?: ಸೋನಿಯಾ, ರಾಹುಲ್, ಪ್ರಿಯಾಂಕಾ ಈ ಮೂವರು ಗಾಂಧಿಯೇತರ ವ್ಯಕ್ತಿ ಪಕ್ಷದ ಅಧ್ಯಕ್ಷರಾಗಲಿ ಎಂದರೂ ಇದಕ್ಕೆ ಬಹುಪಾಲು ಕಾಂಗ್ರೆಸ್ಸಿಗರು ಒಪು್ಪವ ಸಾಧ್ಯತೆ ಕಡಿಮೆ. ಏಕೆಂದರೆ, ರಾಹುಲ್ ಮತ್ತೆ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬೇಕು ಎಂದು ಒಂದು ವರ್ಗ ವಾದಿಸುತ್ತಿದ್ದರೆ, ಮತ್ತೊಂದು ವರ್ಗ ಪ್ರಿಯಾಂಕಾ ಗಾಂಧಿ ಮೇಲೆ ಒಲವು ವ್ಯಕ್ತಪಡಿಸುತ್ತಿದೆ. ಮತ್ತೆ ಕೆಲವರು, ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಿ ಮುಂದುವರಿದು 2 ಉಪಾಧ್ಯಕ್ಷ ಹುದ್ದೆ ಸೃಷ್ಟಿಸಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದೂ ಪ್ರತಿಪಾದಿಸುತ್ತಿದ್ದಾರೆ. ‘ಪಕ್ಷ ಹೋಳಾಗದೆ ಉಳಿಯಲು ‘ಗಾಂಧಿ’ ಹೆಸರೇ ಕಾರಣ. ಇದು ನಮ್ಮ ನಡುವೆ ಒಗ್ಗಟ್ಟು ಕಾಪಾಡುತ್ತದೆ ಮತ್ತು ಮತದಾರರನ್ನು ಭಾವನಾತ್ಮಕವಾಗಿ ಸೆಳೆಯಲು ಅನುಕೂಲವಾಗುತ್ತದೆ. ಹೀಗಾಗಿಯೇ, ಗಾಂಧಿಯೇತರ ನಾಯಕತ್ವದ ಬಗ್ಗೆ ಅನೇಕರಲ್ಲಿ ಆತಂಕವಿದೆ’ ಎಂಬುದು ಪಕ್ಷ ಮುಖಂಡರೊಬ್ಬರ ಅಭಿಪ್ರಾಯ.

ಪಕ್ಷದ ಮುಖಂಡರೆಲ್ಲ ಒಟ್ಟಿಗೆ ಸೇರಿ ಹೊಸ ನಾಯಕರನ್ನು ಗುರುತಿಸಿ. ನೂತನ ಅಧ್ಯಕ್ಷರು ಗಾಂಧಿ ಕುಟುಂಬದಿಂದ ಹೊರತಾಗಿರುವವರೇ ಆಗಿರಬೇಕು. | ಸೋನಿಯಾ ಗಾಂಧಿ (ಪಕ್ಷದ ಮೂಲಗಳ ಮಾಹಿತಿ) ಕಾಂಗ್ರೆಸ್​ನಲ್ಲಿ ಗಾಂಧಿ ಕುಟುಂಬದ ನಾಯಕತ್ವವನ್ನು ಕೆಲವರು ಪ್ರಶ್ನಿಸುತ್ತಿರುವುದು ದುರದೃಷ್ಟಕರ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಸತ್ತೆಯನ್ನೇ ನಾಶಮಾಡಲು ಹೊರಟಿರುವ ಸಂದರ್ಭದಲ್ಲಿ ಕಾಂಗ್ರೆಸ್ಸನ್ನು ಇನ್ನಷ್ಟು ಬಲಪಡಿಸಲು ನಾವು ಯತ್ನಿಸಬೇಕು. ದುರ್ಬಲಗೊಳಿಸುವುದಲ್ಲ. | ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ https://www.vijayavani.net/is-former-cji-bjps-assam-cm-candidate/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net