

ಬೆಂಗಳೂರು: ಹಾಸನ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಮಲೇಷ್ಯಾಕ್ಕೆ ಕಳುಹಿಸಿದ್ದು ಯಾರು. ನನ್ನನ್ನು ಕೆಣಕಿದ್ದಾರೆ, ನಾನು ಸುಮ್ಮನೆ ಬಿಡಲ್ಲ ಎಂದು ಇದೇ ಸಂದರ್ಭದಲ್ಲಿ ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ವಿಡಿಯೋ ಬಿಟ್ಟು ನನ್ನನ್ನು ಕೆಣಕಿದ್ದಾರೆ. ನನಗೆ ಏನು ಮಾಡಬೇಕು ಅಂತ ಗೊತ್ತಿದೆ. ಮೊದಲು ಡ್ರೈವರ್ ಕಾರ್ತಿಕ್ ಎಲ್ಲಿ ಇದ್ದಾನೆ ಎಂದು ಹುಡುಕಿಕೊಳ್ಳಿ ತಿರುಗೇಟು ನೀಡಿದರು.
ಪ್ರಜ್ವಲ್ ರೇವಣ್ಣ ಕಾರ್ ಡ್ರೈವರ್ ಆಗಿದ್ದ ವ್ಯಕ್ತಿ ವಿಡಿಯೋ ಮಾಡಿ ಹೇಳಿದ್ನಲ್ವಾ, ಯಾರು ಆ ವಿಡಿಯೋ ಮಾಡಿದ್ದು? ಇಲ್ಲಿ ಚಿಲ್ಲರೆ ಬ್ರದರ್ಸ್ ಇದಾರಲ್ವಾ, ಅವರು ಏನು ಹೇಳಿದ್ರು, ಕುಮಾರಸ್ವಾಮಿ ಬಿಟ್ಟಿದ್ದು ಅಂತಾರೆ. ಕಾರ್ತಿಕ್ ಎಲ್ಲಿದ್ದಾನೆ ಈಗ, ಕಾರ್ತಿಕ್‌ನನ್ನು ಮಲೇಷ್ಯಾಕ್ಕೆ ಕಳಿಸಿದ್ದು ಯಾರು?" ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ವಿಡಿಯೋವನ್ನು ಬಿಡುಗಡೆ ಮಾಡಿದವರು ಯಾರು? ದೇವರಾಜೇಗೌಡನ ಕೈಯಲ್ಲಿ ನಾನು ವಿಡಿಯೋ ಕೊಟ್ಟಿದ್ದೇನೆ ಎಂದಿದ್ದಾನೆ. ಕಾರ್ತಿಕ್ ಈಗ ಮಲೆಷ್ಯಾದಲ್ಲಿ ಇದ್ದಾನೆ. ನಿಮಗೆ ವಿಡಿಯೋ ರಿಲೀಸ್ ಮಾಡಿದ್ದು ಎಲ್ಲಿಂದ? ಮೊದಲು ಆತನನ್ನು ಕರೆದುಕೊಂಡು ಬನ್ನಿ ಎಂದು ಕುಮಾರಸ್ವಾಮಿ ಅವರು ಆಕ್ರೋಶ ಹಾಕಿದರು.