‘ದಿ ಟ್ರೇಟರ್ಸ್’ ವಿನ್ನರ್ ಯಾರು?; ‘ನೆನಪಿಲ್ಲ’ ಎಂದ ಮಲ್ಲಿಕಾ ಶೆರಾವತ್, ನೆಟ್ಟಿಗರು ಗರಂ! | Mallika Sherawat

ದಿ ಟ್ರೇಟರ್ಸ್ ಸೀಸನ್ 2’ ವಿಜೇತೆ ರೀಡಾ ಥರಾನಾ ಬಗ್ಗೆ ಕೇಳಿದಾಗ ಮಲ್ಲಿಕಾ ಶೆರಾವತ್, “ನೆನಪಿಲ್ಲ” ಎಂದು ಹೇಳಿದ್ದಾರೆ. ನಟಿಯ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
 Mallika Sherawat  on Traitors inner
ರೀಡಾ ಥರಾನಾ ‘ನೆನಪಿಲ್ಲ’ ಎಂದ ಮಲ್ಲಿಕಾ ಶೆರಾವತ್
Published on: 

ಮುಂಬೈ: ‘ದಿ ಟ್ರೇಟರ್ಸ್ ಸೀಸನ್ 2’ ರಿಯಾಲಿಟಿ ಶೋನಿಂದ ಮಲ್ಲಿಕಾ ಶೆರಾವತ್ ಮಧ್ಯದಲ್ಲೇ ಎಲಿಮಿನೇಟ್ ಆಗಿದ್ದರು. ಆದ್ರೆ ಶೋ ಮುಗಿದ ಮೇಲೂ ಅವರ ಮಾತುಗಳು ಸದ್ದು ಮಾಡುತ್ತಿವೆ. ಇದೀಗ ಶೋ ವಿಜೇತೆ ರೀಡಾ ಥರಾನಾ ಬಗ್ಗೆ ಮಲ್ಲಿಕಾ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ಮ್ಯಾಶಬಲ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಲ್ಲಿಕಾಗೆ, ರೀಡಾ ಟ್ರೇಟರ್ ಆದ ಬಳಿಕ ಅವರು ಶೋ ಗೆಲ್ಲಬಹುದು ಎಂದು ಅನಿಸಿತ್ತಾ ಎಂದು ಕೇಳಲಾಯಿತು. ಇದಕ್ಕೆ ಮಲ್ಲಿಕಾ, ‘ನೀವು ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಅನ್ನೋದೇ ನನಗೆ ಗೊತ್ತಿಲ್ಲ. ಶೋನಲ್ಲಿ 21 ಮಂದಿ ಸ್ಪರ್ಧಿಗಳಿದ್ದರು. ಎಲ್ಲರನ್ನೂ ನಾನು ನೆನಪಿಟ್ಟುಕೊಳ್ಳಬೇಕಾ?’ ಎಂದು ಹೇಳಿದ್ದಾರೆ.

ಏನಾಯಿತು ಅನ್ನೋದು ಗೊತ್ತಿಲ್ಲ

ರೀಡಾ ಶೋ ಗೆದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ದೊಡ್ಡ ಫಾಲೋಯಿಂಗ್ ಇದೆ ಎಂದು ಸಂದರ್ಶಕರು ಹೇಳಿದರೂ, ಮಲ್ಲಿಕಾ ತಮ್ಮ ಮಾತನ್ನೇ ಮುಂದುವರಿಸಿದ್ದಾರೆ. ‘ನನಗೆ ಗೊತ್ತಿಲ್ಲ. 9ನೇ ಎಪಿಸೋಡ್‌ನಲ್ಲಿ ಟ್ರೇಟರ್ ನನ್ನನ್ನು ಆಟದಿಂದ ಹೊರಹಾಕಿದರು. ಅದಾದ ಬಳಿಕ ಏನಾಯಿತು ಅನ್ನೋದು ನನಗೆ ನಿಜವಾಗಿಯೂ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

ಮಲ್ಲಿಕಾ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಮಲ್ಲಿಕಾ ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಕೆಲ ನೆಟ್ಟಿಗರು ನಟಿಯನ್ನು ಟೀಕಿಸಿದ್ದಾರೆ. ಕೆಲವರು ಅವರನ್ನು ‘ಸೋರ್ ಲೂಸರ್’ ಎಂದು ಕರೆದರೆ, ಇನ್ನು ಕೆಲವರು ಅವರ ವರ್ತನೆಯನ್ನು ‘ಇನ್‌ಸೆಕ್ಯೂರ್’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಶೋ ಗೆದ್ದವರ ಹೆಸರನ್ನಾದರೂ ನೆನಪಿಟ್ಟುಕೊಳ್ಳಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಏನಿದು ‘ದಿ ಟ್ರೇಟರ್ಸ್’?

‘ದಿ ಟ್ರೇಟರ್ಸ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳನ್ನು ‘ಟ್ರೇಟರ್ಸ್’ ಮತ್ತು ‘ಇನೊಸೆಂಟ್ಸ್’ ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಇನೊಸೆಂಟ್ಸ್ ತಂಡದವರು ಟ್ರೇಟರ್ಸ್ ಯಾರು ಎಂಬುದನ್ನು ಪತ್ತೆಹಚ್ಚಿ ಅವರನ್ನು ಆಟದಿಂದ ಹೊರಹಾಕಬೇಕು. ಮತ್ತೊಂದೆಡೆ, ಟ್ರೇಟರ್ಸ್ ತಮ್ಮ ಗುರುತನ್ನು ಮುಚ್ಚಿಟ್ಟು ಆಟ ಮುಂದುವರಿಸಬೇಕು.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಡಿ ಬಿದ್ದ ಮಹಿಳೆ; ಹೀರೋನಂತೆ ಬಂದು ಜೀವ ಉಳಿಸಿದ RPSF ಸಿಬ್ಬಂದಿ! | Train Accident

‘ದಿ ಟ್ರೇಟರ್ಸ್ ಸೀಸನ್ 2’ರಲ್ಲಿ ಮಲ್ಲಿಕಾ ಶೆರಾವತ್ ಕೂಡ ಸ್ಪರ್ಧಿಯಾಗಿದ್ದರು. ಆದರೆ 9ನೇ ಎಪಿಸೋಡ್‌ನಲ್ಲಿ ಅವರು ಆಟದಿಂದ ಹೊರಬಂದಿದ್ದರು. ಬಳಿಕ ರೀಡಾ ಥರಾನಾ ಶೋನ ವಿಜೇತರಾಗಿ ಹೊರಹೊಮ್ಮಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net