ಮದುವೆ ಮಾಡಿಕೊಡಿ ಅಂತ ಕೈ ಕಟ್​... ಮಾಧ್ಯಮದ ಎದುರು ಕಣ್ಣೀರಿಟ್ಟ ಜಯಂ ರವಿ ವಿರುದ್ಧ ಅತ್ತೆ ವಾಗ್ದಾಳಿ

ರವಿ ಮೋಹನ್​ (ಎಡ), ಆರತಿ ಮತ್ತು ಅವರ ತಾಯಿ ಸುಜಾತ ವಿಜಯಕುಮಾರ್​
ರವಿ ಮೋಹನ್​ (ಎಡ), ಆರತಿ ಮತ್ತು ಅವರ ತಾಯಿ ಸುಜಾತ ವಿಜಯಕುಮಾರ್​
Published on

ಪ್ರಮುಖ ಮುಖ್ಯಾಂಶಗಳು

  • ರವಿ ಮೋಹನ್​ ಮತ್ತು ಆರತಿ ನಡುವಿನ ಡಿವೋರ್ಸ್​ ವಿವಾದ ಮತ್ತೊಮ್ಮೆ ಮುನ್ನೆಲೆಗೆ
  • ಮಾಧ್ಯಮದ ಮುಂದೆ ಕಣ್ಣೀರಿಟ್ಟ ತಮಿಳು ನಟ ಜಯಂ ರವಿ
  • ಪತ್ನಿ ವಿರುದ್ಧ ಆರೋಪಗಳ ಬೆನ್ನಲ್ಲೇ ಅತ್ತೆ ಸಜಾತ ವಿಜಯಕುಮಾರ್​ ವಾಗ್ದಾಳಿ
Ravi Mohan: ತಮಿಳು, ಮಲಯಾಳಂ ನಟ, ನಿರ್ಮಾಪಕ ರವಿ ಮೋಹನ್​ ಮತ್ತು ಆರತಿ ನಡುವಿನ ಡಿವೋರ್ಸ್​ ವಿವಾದ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ವಿಪರೀತ ಟೀಕೆ, ಟ್ರೋಲ್​ಗಳು ಮತ್ತು ಆರತಿಯಿಂದ ಸಾಕಷ್ಟು ತೊಂದರೆಗಳು ಆಗುತ್ತಿವೆ ಎಂದು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಅಳಲು ತೋಡಿಕೊಂಡ ರವಿ, ವಿಚ್ಛೇದನ ಸಿಗುವವರೆಗೂ ಸಿನಿಮಾ ಮಾಡೋದಿಲ್ಲ ಎಂದು ಕಣ್ಣೀರಿಟ್ಟರು. ಈ ಆರೋಪಗಳ ಬೆನ್ನಲ್ಲೇ ಆರತಿ ತಾಯಿ ಶಾಕಿಂಗ್ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ.
ಗಾಯಕಿ ಕೆನಿಶಾ ಫ್ರಾನ್ಸಿಸ್​ ಜೊತೆಗಿದ್ದ ಕಾರಣ, ರವಿ-ಆರತಿ ಮಧ್ಯೆ ದಾಂಪತ್ಯ ಒಡೆದಿದೆ ಎಂದು ನೆಟ್ಟಿಗರು ವಿಪರೀತವಾಗಿ ಜಾಲತಾಣಗಳಲ್ಲಿ ಟ್ರೋಲ್​ ಮಾಡಿದರು. ಇದರಿಂದ ತೀವ್ರ ಮನನೊಂದ ಕೆನಿಶಾ, ವಿಡಿಯೋಗಳ ಮೂಲಕ ನನ್ನನ್ನು ಬದುಕಲು ಬಿಡಿ ಎಂದು ಕೇಳಿಕೊಂಡಿದ್ದಲ್ಲದೇ, ಚೆನ್ನೈ ತೊರೆಯುವ ಮೂಲಕ ರವಿ ಮೋಹನ್​ಗೆ ಗುಡ್​ಬೈ ಹೇಳಿದ್ದಾರೆ. ಈ ಎಲ್ಲ ನಡೆಯಿಂದ ತೀರ ಬೇಸತ್ತ ರವಿ, ಪತ್ನಿ ಕಡೆಯಿಂದ ಸಾಕಷ್ಟು ಮಾನಸಿಕ ಹಿಂಸೆ ಮತ್ತು ತೊಂದರೆಗಳು ಆಗುತ್ತಿವೆ. ಆಕೆಯಿಂದ ಡಿವೋರ್ಸ್​ ಪಡೆಯುವವರೆಗೂ ನಾನು ಸಿನಿಮಾಗಳನ್ನು ಮಾಡೋದಿಲ್ಲ, ಆ ಚಿತ್ರಗಳು ರಿಲೀಸ್ ಕೂಡ ಆಗುವುದಿಲ್ಲ ಎಂದರು.
ತಮ್ಮ ಮಗಳ ಮೇಲಿನ ಆರೋಪಗಳು ಜೋರಾಗಿ ಸದ್ದು ಮಾಡುತ್ತಿದ್ದಂತೆ ಅಳಿಯ ವಿರುದ್ಧ ಆರೋಪ ಎಸಗಿದ ಸುಜಾತ ವಿಜಯಕುಮಾರ್​, ಆರತಿ ಮೇಲೆ ರವಿ ಮೋಹನ್​ ಮಾಡಿದ ಆರೋಪಗಳು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ, ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರಹಿಂಸೆ ನೀಡುತ್ತಿರುವ ಮಾತು ಮತ್ತು ಮಕ್ಕಳಾದ ಆರವ್​ ಮತ್ತು ಅಯ್ಯನ್​ರನ್ನು ನೋಡಲು ಹೆಂಡತಿ ಬಿಡುತ್ತಿಲ್ಲ ಎಂಬ ಆರೋಪಗಳು ಶುದ್ಧ ಸುಳ್ಳು ಎಂದಿದ್ದಾರೆ.
ಯಾರು ಯಾರನ್ನು ಬ್ಲ್ಯಾಕ್​ಮೇಲ್ ಮಾಡಿದ್ದಾರೆ? ತನ್ನ ಕೈಯಲ್ಲಿನ ಗಾಯ ತೋರಿಸುವ ಜಯಂ ರವಿ, ಅಂದು ಆರತಿ ಜೊತೆ ಮದುವೆ ಮಾಡಿಕೊಡಿ ಎಂದು ಕೈಕಟ್​ ಮಾಡಿಕೊಂಡಿದ್ದು ಏಕೆ? 2008ರಲ್ಲಿ ವಿಕಟನ್ ನಿಯತಕಾಲಿಕೆಯಲ್ಲಿ ಒಂದು ಸಂದರ್ಶನವಿತ್ತು. ನಾನು ಈಗ ಅದನ್ನು ಹುಡುಕುತ್ತಿರುವೆ. ಯಾರು ಯಾರನ್ನು ಬ್ಲ್ಯಾಕ್‌ಮೇಲ್ ಮಾಡಿದರು ಅಂತ ಅದರಲ್ಲಿ ತಿಳಿಯುತ್ತೆ. ನನ್ನ ಮೊಮ್ಮಗ ಈಗ 10ನೇ ತರಗತಿ. ಕೌಟುಂಬಿಕ ಸಮಸ್ಯೆಗಳಿಂದಾಗಿ ಆತ ಕುಗ್ಗಿದ್ದಾನೆ. ಬಾಲ್ಯದಲ್ಲಿ ನೋಡಬಾರದ ಪರಿಸ್ಥಿತಿಯನ್ನು ಅವನು ನೋಡ್ತಿದ್ದಾನೆ ಎಂದು ಹೇಳಿದ್ದಾರೆ.

ರವಿ ಮೋಹನ್ ಆರೋಪಗಳೇನು?

ಆರತಿ ಜೊತೆ ಇದ್ದಷ್ಟು ದಿನವು ತೀವ್ರ ಅವಮಾನವನ್ನು ಸಹಿಸಿಕೊಂಡೆ. ವರ್ಷಗಳಿಂದ ನನ್ನನ್ನು ಒಬ್ಬ ಗುಲಾಮನಂತೆ ಅವರ ಮನೆಯಲ್ಲಿ ನಡೆಸಿಕೊಂಡರು. ಇದು ಶೋಚನೀಯ. ನಾನು ಎಷ್ಟೋ ದಿನಗಳಿಂದ ಏನ್ನನ್ನೂ ಹೇಳಲಾಗದ ಸ್ಥಿತಿಯಲ್ಲಿದ್ದೆ. ಈಗ ಸಮಯ ಬಂದಿದೆ. ನಾನೊಬ್ಬ ಮೃದು ಸ್ವಭಾವದ ವ್ಯಕ್ತಿ ಎಂದೇ ಜನರು ನನ್ನನ್ನು ನೋಡಿದ್ದಾರೆ. ಮೊದಲು ಹಾಗೆಯೇ ಇದ್ದೆ. ಆದರೆ, ಇನ್ಮುಂದೆ ಇರಲ್ಲ. ಇದೆಲ್ಲವೂ ಮುಗಿಯುವವರೆಗೂ ನನಗೆ ನೆಮ್ಮದಿಯಿಲ್ಲ ಎಂದು ರವಿ ಮೋಹನ್ ದುಃಖ ತೋಡಿಕೊಂಡರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net