ಮೋದಿ ಭರವಸೆಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಕ್ರಿಯೆ.. ನೋಡಿ ಹೇಗಿದೆ?

modi-fit india
Published on

ಬೆಂಗಳೂರು: ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಶನಿವಾರ ಮಾತನಾಡಿದ್ದಾಗ ಪ್ರಧಾನಿ ಮೋದಿ ಅವರು ನೀಡಿದ ಭರವಸೆಗೆ ಇದೀಗ ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್​ ಅಧನಾಮ್​ ಗೆಬ್ರೇಸಸ್​ ಅವರು ಮೋದಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ಜಗತ್ತಿನಲ್ಲಿ ಲಸಿಕೆ ಉತ್ಪಾದಿಸುವ ಬೃಹತ್​ ರಾಷ್ಟ್ರವಾಗಿರುವ ಭಾರತದ ಪರವಾಗಿ ನಾನು ಜಾಗತಿಕ ಸಮುದಾಯಕ್ಕೆ ಮತ್ತೊಂದು ಭರವಸೆ ನೀಡುತ್ತಿದ್ದೇನೆ. ಭಾರತದ ಲಸಿಕೆ ಉತ್ಪಾದನೆ ಹಾಗೂ ವಿತರಣಾ ಸಾಮರ್ಥ್ಯವನ್ನು ಸದ್ಯದ ಕೋವಿಡ್​ ಸಂಕಷ್ಟದಲ್ಲಿರುವ ಎಲ್ಲರಿಗೂ ನೆರವಾಗುವ ನಿಟ್ಟಿನಲ್ಲಿ ಬಳಸಲಾಗುವುದು ಎಂದು ಮೋದಿ ವಿಶ್ವಸಂಸ್ಥೆ ಅಧಿವೇಶನದಲ್ಲಿ ಮಾತನಾಡುವ ವೇಳೆ ಭರವಸೆ ನೀಡಿದ್ದರು.

ಅದಕ್ಕೆ ಈಗ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿಯವರು ತೋರಿದ ಐಕ್ಯತೆಯ ಬದ್ಧತೆಗೆ ಅಭಿನಂದನೆಗಳು. ಸಾಮಾನ್ಯ ಒಳಿತಿಗೆ ನಾವು ಜಂಟಿಯಾಗಿ ನಮ್ಮ ಶಕ್ತಿ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡಾಗ ಮಾತ್ರ ಕೋವಿಡ್​ 19 ಪಿಡುಗನ್ನು ನಾವು ತೊಲಗಿಸಲು ಸಾಧ್ಯ ಎಂಬುದಾಗಿ ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net