

ಬೆಂಗಳೂರು: ನಗರದ ಬಾಬುಸಾಬ್ ಪಾಳ್ಯದಿಂದ ಹೊರಮಾವು ಸಂಪರ್ಕದ ಮೇಲ್ಸೇತುವೆ ಹಾಗೂ ಹೊರಮಾವು ಅಂಡರ್‌ಪಾಸ್ ರಸ್ತೆಗಳಲ್ಲಿ ನ.18 ರಿಂದ ವೈಟ್‌ಟಾಪಿಂಗ್ ಕಾಮಗಾರಿ ಆರಂಭವಾಗಲಿದೆ.
ಈಗಾಗಲೇ ಬಿಬಿಎಂಪಿ ನಗರದ ವಿವಿಧ ಮುಖ್ಯ ರಸ್ತೆಗಳಲ್ಲಿ 68 ಕಡೆ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದೆ. ಇದರಿಂದ ವಾಹನ ಸಂಚಾರಕ್ಕೂ ಅವಕಾಶವಿಲ್ಲದೆ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, 5 ನಿಮಿಷದ ತಲುಪುವ ಮಾರ್ಗವನ್ನು 30 ನಿಮಿಷಕ್ಕೆ ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಿರುವಾಗ ಕೈಗೆತ್ತಿಕೊಂಡಿರುವ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸುವ ಮುನ್ನವೇ ಹೊಸ ರಸ್ತೆಗಳಲ್ಲಿ ಕಾಮಗಾರಿ ಆರಂಭಿಸುವ ಮೂಲಕ ವಾಹನ ಸಂಚಾರಕ್ಕೆ ಸಮಸ್ಯೆ ತಂದೊಡ್ಡಲು ಮುಂದಾಗಿದೆ.
ಸರ್ವಿಸ್ ರಸ್ತೆಗಳಲ್ಲಿ ಟ್ರಾಫಿಕ್ ಸಾಧ್ಯತೆ : ಬಾಬುಸಾಬ್‌ಪಾಳ್ಯ-ಹೊರಮಾವು- ಹೆಬ್ಬಾಳ- ರಾಮಮೂರ್ತಿನಗರ ಸಂಪರ್ಕಿಸುವ ಮೇಲ್ಸೇತುವೆ ಮತ್ತು ಅಂಡರ್‌ಪಾಸ್ ರಸ್ತೆಗಳ ವೈಟ್ ಟಾಪಿಂಗ್ ಕಾವಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯರಸ್ತೆ ಬಂದ್ ಆಗಲಿದೆ. ಆದ್ದರಿಂದ ಸರ್ವಿಸ್ ರಸ್ತೆಗಳಲ್ಲಿ ಸಂಚಾರಕ್ಕೆ ಸಂಚಾರ ಪೊಲೀಸರು ಅನುಮತಿ ನೀಡಿದ್ದಾರೆ. ನ.18 ರಿಂದ ಡಿ.26ರ ವರೆಗೆ ಒಂದೂವರೆ ತಿಂಗಳ ಕಾಲ ಸೇವಾ ರಸ್ತೆಗಳಲ್ಲಿ ಭರ್ಜರಿ ಟ್ರಾಫಿಕ್ ಉಂಟಾಗುವ ಸಾಧ್ಯತೆಯಿದೆ.
ಹೊಸ ವೈಟ್ ಟಾಪಿಂಗ್ ಕಾಮಗಾರಿ ವಿವರ
ಕಾಮಗಾರಿ ನಡೆಯುವ ಸ್ಥಳ- ಕಾಮಗಾರಿ ಆರಂಭ- ಮುಕ್ತಾಯ ಅವಧಿ
ಬಾಬುಸಾಪಾಳ್ಯ- ಹೊರಮಾವು ಮೇಲ್ಸೇತುವೆ ನ.18 ಡಿ.26
ಹೊರಮಾವು ಅಂಡರ್‌ಪಾಸ್- ಹೆಬ್ಬಾಳ ರಸ್ತೆ ನ.19 ಡಿ.2
ಬಾಬುಸಾಪಾಳ್ಯ- ಹೆಬ್ಬಾಳ ಮೇಲ್ಸೇತುವೆ ಡಿ.6 ಡಿ.22
ಹೊರಮಾವು ಅಂಡರ್‌ಪಾಸ್-ರಾಮಮೂರ್ತಿನಗರ ರಸ್ತೆ ಡಿ.7 ಡಿ.26