

ಬೈಲುಕುಪ್ಪೆ: ಇಲ್ಲಿನ ಬಿ.ಎಂ. ರಸ್ತೆ ಒಂದನೇ ಕ್ಯಾಂಪ್ ಸರ್ಕಲ್‌ನ ರಾಷ್ಟ್ರೀಯ ಹೆದ್ದಾರಿಗೆ ಅಳವಡಿಸಿದ್ದ ರಸ್ತೆ ಡುಬ್ಬಕ್ಕೆ ಇಲಾಖೆ ವತಿಯಿಂದ ಬಿಳಿ ಬಣ್ಣ ಗುರುವಾರ ಬಳಿಯಲಾಯಿತು.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮದಲ್ಲಿ ಕೆಲವು ತಿಂಗಳ ಹಿಂದೆ ಇಲಾಖೆ ವತಿಯಿಂದ ರಸ್ತೆ ಡುಬ್ಬ ಹಾಕಿ ಹೋದವರು ಇತ್ತ ತಿರುಗಿ ನೋಡಿರಲಿಲ್ಲ. ಪ್ರತಿದಿನ ಒಂದಲ್ಲ ಒಂದು ಅಪಘಾತ ಆಗುತ್ತಿತ್ತು. ಇದರಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಪೋಲಿಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ರೂಪಾ ಅವರಿಗೆ ಹಲವಾರು ಬಾರಿ ಪತ್ರದ ಮೂಲಕ ಗಮನ ಸೆಳೆದಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ಅವರು ಸಂಬಂಧಪಟ್ಟ ಅಧಿಕಾರಿಗೆ ಕರೆ ಮಾಡಿ ಮಾಹಿತಿ ಮೇರೆಗೆ ಬೈಲುಕುಪ್ಪೆ ಗ್ರಾಮಕ್ಕೆ ಇಲಾಖೆ ವತಿಯಿಂದ ಬಂದು ಒಂದನೇ ಕ್ಯಾಂಪ್ ಸರ್ಕಲ್ ಹಾಗೂ ಬೈಲುಕುಪ್ಪೆ ಹಳೆಯೂರು ಸಮೀಪ ಬಿ.ಎಂ. ರಸ್ತೆಯಲ್ಲಿ ರಸ್ತೆ ಡುಬ್ಬಗಳಿಗೆ ವೈಟ್ ಪೇಂಟ್ ಹಾಕಲಾಗಿದೆ.
ಈ ಸಂದರ್ಭದಲ್ಲಿ ಬೈಲುಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು, ಪಿಡಿಒ ಬೋರೇಗೌಡ, ಸದಸ್ಯರಾದ ನಿಸಾರ್ ಅಹಮದ್, ಮಂಜು, ಮಾಜಿ ಸದಸ್ಯ ದಿನೇಶ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.