ವಿಶ್ವದಲ್ಲಿ ವಿಚ್ಛೇದನ ದರ: ಯಾವ ದೇಶದಲ್ಲಿ ವಿಚ್ಛೇದನದ ಸಂಖ್ಯೆ ಹೆಚ್ಚಿದೆ, ಭಾರತದ ಸ್ಥಾನವೇನು?

divorce
Published on

ಬೆಂಗಳೂರು:  ವಿದೇಶಗಳಿಗಿಂತ ಭಾರತದಲ್ಲಿ ಮದುವೆಗೆ ವಿಶೇಷ ಸ್ಥಾನವಿದೆ. ಭಾರತದಲ್ಲಿ ವಿಚ್ಛೇದನ ಬಹಳ ದೂರದ ಮಾತು. ಒಂದು ವೇಳೆ ಜೊತೆಯಾಗಿ ಬಾಳಲು ಇಷ್ಟವಿಲ್ಲ ಎಂದು ದಂಪತಿಗಳು ಹೇಳಿದರೆ ಮನೆಯವರು, ಸುತ್ತಲಿನ ಜನರು ಗಲಾಟೆ ಮಾಡುತ್ತಾರೆ. ಆದರೆ 21 ನೇ ಶತಮಾನದಲ್ಲಿ ಭಾರತೀಯ ಸಮಾಜ ಸಾಕಷ್ಟು ಬದಲಾಗಿದೆ. ಇದು ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳ ಯುಗ. ಜನರು ಇದರ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಈ ಹಿನ್ನೆಲೆಯಲ್ಲಿ  ಇಲ್ಲಿ ಯಾವ ದೇಶದಲ್ಲಿ ವಿಚ್ಛೇದನದ ಸಂಖ್ಯೆ ಹೆಚ್ಚಿದೆ ಎಂಬುದರ ಬಗ್ಗೆ ಮಾಹಿತಿಯಿದೆ ನೋಡಿ... 

ವಿಚ್ಛೇದನದ ವಿಷಯದಲ್ಲಿ ಪೋರ್ಚುಗಲ್ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಇಲ್ಲಿ ವಿಚ್ಛೇದನ ಪ್ರಮಾಣ ಶೇ.94. ಸ್ಪೇನ್ ಎರಡನೇ ಸ್ಥಾನದಲ್ಲಿದೆ. ಇಲ್ಲಿ ವಿಚ್ಛೇದನ ಪ್ರಮಾಣ ಶೇ.84.

ಈ ಪಟ್ಟಿಯಲ್ಲಿ ಲಕ್ಸೆಂಬರ್ಗ್ ಮೂರನೇ ಸ್ಥಾನದಲ್ಲಿದೆ. ಈ ಯುರೋಪಿಯನ್ ದೇಶದಲ್ಲಿ ವಿಚ್ಛೇದನ ಪ್ರಮಾಣವು 79 ಪ್ರತಿಶತ. ಇದರ ನಂತರ, ರಷ್ಯಾ- 73%, ಉಕ್ರೇನ್- 70%, ಕ್ಯೂಬಾ- 55%, ಫಿನ್ಲೆಂಡ್- 55% ಮತ್ತು ಬೆಲ್ಜಿಯಂ- 53%.

ಈ ಪಟ್ಟಿಯಲ್ಲಿ ಸ್ವೀಡನ್ 9 ನೇ ಸ್ಥಾನದಲ್ಲಿದೆ, ಇಲ್ಲಿ ವಿಚ್ಛೇದನ ದರವು 50% ಆಗಿದೆ, ಆದರೆ ಫ್ರಾನ್ಸ್ ಈ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ, ಇಲ್ಲಿ ವಿಚ್ಛೇದನ ಪ್ರಮಾಣವು 51% ಆಗಿದೆ.

ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾದ ಅಮೆರಿಕದಲ್ಲಿ ವಿಚ್ಛೇದನದ ಪ್ರಮಾಣವು 45% ಆಗಿದ್ದರೆ, ಚೀನಾದಲ್ಲಿ ಇದು 44% ಮತ್ತು ಯುಕೆಯಲ್ಲಿ 41% ಆಗಿದೆ ಎಂಬುದು ಅತ್ಯಂತ ಆಶ್ಚರ್ಯಕರ ಸಂಗತಿಯಾಗಿದೆ.

ಈ ಪಟ್ಟಿಯಲ್ಲಿ ಭಾರತ ಕೊನೆಯ ಸ್ಥಾನದಲ್ಲಿದೆ. ಭಾರತದಲ್ಲಿ ಕೇವಲ ಒಂದು ಶೇಕಡ ವಿಚ್ಛೇದನ ಪ್ರಕರಣಗಳಿವೆ, ಇನ್ನು ವಿಯೆಟ್ನಾಂನಲ್ಲಿ  ಕೇವಲ 7 ಪ್ರತಿಶತದಷ್ಟು ವಿವಾಹಗಳು ಮುರಿದುಹೋಗಿವೆ.

ಈಗ ಮಹಿಳೆಯರು ಮತ್ತು ಪುರುಷರು ತಮ್ಮ ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ, ಆದ್ದರಿಂದ ಭಾರತದಲ್ಲಿ ವಿಚ್ಛೇದನದ ಬಗ್ಗೆ ಜನರ ಗ್ರಹಿಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net