ಸಿಪ್ಪೆ ಮತ್ತು ಸಿಪ್ಪೆ ಇಲ್ಲದೆ.. ತಿನ್ನಲು ಯಾವ ಕಡಲೆಕಾಯಿ ಬೆಸ್ಟ್​?ಯಾವುದರಲ್ಲಿ ಪ್ರೋಟೀನ್​ ಜಾಸ್ತಿ ಇದೆ ತಿಳಿಯಿರಿ...| Peanuts

dk - 2025-02-18T131023.751
Published on

Peanuts:ಬಡವರ ಬದಾಮಿ ಎಂದೇ ಪ್ರಖ್ಯಾತಿ ಪಡೆದಿರುವ ಕಡಲೆಡಕಾಯಿ(ಶೇಂಗಾ)ಯನ್ನು ಪೋಷಾಕಾಂಶಗಳ ಉಗ್ರಾಣ ಎಂದೇ ಹೇಳಲಾಗುತ್ತದೆ. ಬಡವರಿಂದ ಶ್ರೀಮಂತರ ತನಕ ಎಲ್ಲರಿಗೂ ಅಚ್ಚುಮೆಚ್ಚು ಈ ಕಡಲೆಕಾಯಿ. ಇದರಲ್ಲಿ ಅನೇಕ ರೀತಿಯ ಖನಿಜಳಿದ್ದು, ದೇಹಕ್ಕೆ ಉತ್ತಮ ಪ್ರಯೋಜನೆಕಾರಿಯಾಗಿದೆ. ಸಾಮಾನ್ಯವಾಗಿ ಕಡಲೆಕಾಯಿ ತಿನ್ನುವಾಗ ಕೆಲವರು ಬೀಜದ(ಶೇಂಗಾ) ಸಿಪ್ಪೆ ತಗೆದು ತಿನ್ನುತ್ತಾರೆ. ಸಿಪ್ಪೆ ಮತ್ತು ಸಿಪ್ಪೆ ಇಲ್ಲದೆ ತಿನ್ನುವ ಕಡಲೆಕಾಯಿ ಯಾವುದು ಬೆಸ್ಟ್​ ಮತ್ತು ಏನೆಲ್ಲಾ ಲಾಭಗಳು ಎಂಬುವುದರ ಬಗ್ಗೆ ತಿಳಿಯೋಣ.

ಕಡಲೆಕಾಯಿಯಲ್ಲಿ ಅನೇಕ ಪೋಷಕಾಂಶಗಳಾದ ಜೀವಸತ್ವಗಳು,ಖನಿಜ ಮತ್ತು ಉತ್ಕರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ದೇಹವನ್ನು ರೋಗಕಾರದಿಂದ ರಕ್ಷಿಸುತ್ತದೆ. ಇದನ್ನು (ಕಡಲೆಕಾಯಿ) ತಿನ್ನುವುದರಿಂದ ಶಕ್ತಿ ಮತ್ತು ಅಗತ್ಯ ಪೋಷಣೆ ದೊರೆಯುತ್ತದೆ. ಕಡಲೆಕಾಯಿ ದೇಹವನ್ನು ಶಕ್ತಿಯುತವಾಗಿಡಲು ಮತ್ತು ಸ್ನಾಯುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್, ಪ್ರೋಟೀನ್ ಮತ್ತು ಕೊಬ್ಬು ಸಮೃದ್ಧವಾಗಿದೆ. ಆದರೆ ಕಡಲೆಕಾಯಿ ತಿನ್ನಲು ಉತ್ತಮ ಮಾರ್ಗ ಯಾವುದು ಎಂದು ನಿಮಗೆ ತಿಳಿದಿದೆಯೇ? ಅದನ್ನು ಸಿಪ್ಪೆಯೊಂದಿಗೆ ತಿನ್ನಬೇಕೇ? ಅಥವಾ ಸಿಪ್ಪೆ ಇಲ್ಲದೆ ತಿನ್ನಬೇಕೇ? ತಿಳಿಯಿರಿ..

ಅನೇಕರು ಸಿಪ್ಪೆ ತಗೆದು ತಿನ್ನುತ್ತಾರೆ. ಆದರೆ, ಸಿಪ್ಪೆ ಆರೋಗ್ಯಕ್ಕೆ ಸಹಾಕರಿಯಾಗುವ ಬಹಳಷ್ಟು ಖನಿಜ ಮತ್ತು ಪೋಷಾಕಾಂಶಗಳನ್ನು ಹೊಂದಿದೆ ಎಂದು ತಿಳಿಯದು. ಹೌದು, ಕೆಂಪು-ಕಪ್ಪು ಸಿಪ್ಪೆಯೊಂದಿಗೆ ಶೇಂಗಾ ತಿನ್ನುವುದರಿಂದ ಹೆಚ್ಚು ಪ್ರಯೋಜಕಾರಿ ಎಂದು ವೈದ್ಯರು ಹೇಳುತ್ತಾರೆ. ಕಡಲೆ ಕಾಯಿ ಸಿಪ್ಪೆ ಅಧಿಕ ರೋಗ ನಿರೋಧಕ ಪ್ರೋಟಿನ್​ ಅಂಶಗಳನ್ನು ಹೊಂದಿವೆ. ಅಲ್ಲದೆ, ಫೈಬರ್​ ಹೊಂದಿರುವುದರಿಂದ ಮನುಷ್ಯನ ಜೀರ್ಣಕ್ರಿಯೆಗೆ ಹೆಚ್ಚಿನ ಸಹಯಕಾರಿಯಾಗಿದೆ.

ಸಿಪ್ಪೆ ಜತೆ ತಿನ್ನುವುದರಿಂದ ಪ್ರಯೋಜನೆಗಳು

1.ಕಡಲೆಕಾಯಿ ಚಿಪ್ಪುಗಳು ಹೆಚ್ಚಿನ ಪ್ರಮಾಣದ ನಿರೋಧಕಗಳನ್ನು ಹೊಂದಿರುತ್ತವೆ, ವಿಶೇಷವಾಗಿ ರೆಸ್ವೆರಾಟ್ರೊಲ್ ಮತ್ತು ಫ್ಲೇವನಾಯ್ಡ್‌ಗಳಂತಹ ಪಾಲಿಫಿನಾಲ್‌ಗಳು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತವೆ.

2. ಕಡಲೆಕಾಯಿ ಸಿಪ್ಪೆಗಳು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಅಗತ್ಯವಾದ ಆಹಾರದ ಫೈಬರ್ ಅನ್ನು ಹೊಂದಿರುತ್ತವೆ, ಇದು ಕರುಳಿನ ಆರೋಗ್ಯವನ್ನು ಬಲಪಡಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸರಿಯಾಗಿ ಇಡುತ್ತದೆ.

3. ಫೈಬರ್ ಮತ್ತು ಪಾಲಿಫಿನಾಲ್‌ಗಳಿಂದಾಗಿ, ಕಡಲೆಕಾಯಿ ಸಿಪ್ಪೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವವರಿಗೆ ಸಹಾಯ ಮಾಡುತ್ತದೆ.

ಅಲರ್ಜಿ ಇರುವವರು ಸಿಪ್ಪೆ ತಗೆದು ತಿನ್ನಿ

ಇನ್ನು ಕೆಲವರಿಗೆ ಸಿಪ್ಪೆ ಇಲ್ಲದೆ ತಿನ್ನುವುದು ಒಳಿತು. ಹೌದು, ಅದಕ್ಕೆ ಕಾರಣವೂ ಇದೆ. ಕೆಲವರಿಗೆ ಸಿಪ್ಪೆ ಕಹಿಯಾಗಿರುತ್ತದೆ. ಅದನ್ನು ತಿನ್ನಲು ಕಷ್ಟಪಡುತ್ತಾರೆ. ಅಲ್ಲದೆ, ಅಪರೂಪದ ಸಂದರ್ಭಗಳಲ್ಲಿ ಕಡಲೆಕಾಯಿ ಸಿಪ್ಪೆ ಅಲರ್ಜಿ ಮತ್ತು ಜಠರಗಳಿಗೆ ಸಮಸ್ಯೆನ್ನುಂಟು ಮಾಡುತ್ತದೆ. ನಿಮ್ಮ ಹೊಟ್ಟೆ ಸೂಕ್ಷ್ಮವಾಗಿದ್ದಾರೆ ಮತ್ತು ಅಲರ್ಜಿ ಇದ್ದರೆ ಸಿಪ್ಪೆ ತಗೆದೆ ತಿನ್ನಬೇಕು ಎಂದು ವೈದ್ಯರು ಹೇಳುತ್ತಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net