ಕಾಳಿಂಗ ಸರ್ಪವೇ, ನಾಗರಹಾವೇ ಯಾವುದು ಹೆಚ್ಚು ಅಪಾಯಕಾರಿ?; ಭಾರತೀಯ ವಿಷಕಾರಿ ಹಾವಿನ ಬಗ್ಗೆ ತಿಳಿಯಿರಿ | Python Cobra

dk - 2025-02-24T134239.160
Published on

Python Cobra: ಭೂಮಿ ಮೇಲೆ ಸಾವಿರಾರು ಜಾತಿಯ ಪ್ರಾಣಿಗಳು ಕಂಡುಬರುತ್ತದೆ. ಈ ಪ್ರಾಣಿಗಳಲ್ಲಿ ಕ್ರೂರ ಮತ್ತು ವಿಷಕಾರಕ ಜೀವಿಗಳು ಕೂಡ ಕಾಣಸಿಗುತ್ತದೆ. ಇಂತಹ ಪ್ರಾಣಿಗಳಲ್ಲಿ ಕೆಲ ವಿಷಸರ್ಪಗಳ ಬಗ್ಗೆ ತಿಳಿಯೋಣ ಬನ್ನಿ.

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಹಾವುಗಳು ಅತ್ಯಂತ ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾಗಿವೆ. ಅಲ್ಲದೆ, ಅವುಗಳು ಕಚ್ಚಿದೆರೆ ಮನುಷ್ಯ ಬದುಕುವು ಕಷ್ಟಸಾಧ್ಯವಾಗುತ್ತದೆ. ಇಂತಹುಗಳಲ್ಲಿ ಕೆಲ ಸರ್ಪಗಳ ಮಾಹಿತಿ ತಿಳಿಯಿರಿ.

ಒಂದು ಅಧ್ಯಯನದ ಪ್ರಕಾರ, ಪ್ರಪಂಚದ್ಯಾಂತ 3,789 ವಿವಿಧ ಜಾತಿಯ ಹಾವುಗಳಿವೆ. ಅದರಲ್ಲಿ ಕೆಲವಷ್ಟು ವಿಷಕಾರಿಯಾಗಿದ್ದರೆ ಮತ್ತಷ್ಟು ಸಾಮಾನ್ಯ ಸರ್ಪಗಳಾಗಿವೆ. ಅಪಾಯಕಾರಿ ಮತ್ತು ವಿಷಕಾರಿ ಹಾವುಗಳಲ್ಲಿ ಕಾಳಿಂಗ ಸರ್ಪ ಮತ್ತು ಕೊಬ್ರಾ(ಭಾರತೀಯ ನಾಗರಹಾವು)ಗಳಲ್ಲಿ ಯಾವು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ ಎಂದು ನಿಮಗೆ ತಿಳಿದಿದಿಯೇ?.

ಕಾಳಿಂಗ ಸರ್ಪವೇ ಅಪಾಯಕಾರಿ

ಕಾಳಿಂಗ ಸರ್ಪವು ತನ್ನ ಮಾರಕ ವಿಷ ಮತ್ತು ದೊಡ್ಡ ಗಾತ್ರಕ್ಕೆ ಹೆಸರುವಾಸಿಯಾಗಿದೆ. ಅದೇ ರೀತಿ, ಭಾರತದಲ್ಲಿ ಕಂಡುಬರುವ ಭಾರತೀಯ ನಾಗರಹಾವು ಕೂಡ ಅಪಾಯಕಾರಿ ಎಂದು ಪರಿಗಣಿಸಲಾಗಿದೆ, ಈ ಎರಡೂ ಹಾವುಗಳು ನಾಗರಹಾವು ಕುಟುಂಬಕ್ಕೆ ಸೇರಿವೆ. ತಜ್ಞ ಪ್ರಕಾರ, ಸಾಮಾನ್ಯ ನಾಗರಹಾವುಗಳಿಂಗಿಂತ ಕಳಿಂಗ ಸರ್ಪ ಅಧಿಕ ಅಪಾಯಕಾರಿ ಎಂದು ಹೇಳಲಾಗುತ್ತದೆ. ಅದಕ್ಕೆ ಕಾರಣ, ಕಾಳಿಂಗ ಸರ್ಪ ಬೇಗನೆ ದಾಳಿ ಮಾಡಲ್ಲ.

ಕಾಳಿಂಗ ಸರ್ಪವು ಜಗತ್ತಿನ ಅತಿ ದೊಡ್ಡ ಮತ್ತು ಅತ್ಯಂತ ವಿಷಕಾರಿ ಹಾವು. ಇಷ್ಟೇ ಅಲ್ಲ, ಕಾಳಿಂಗ ಸರ್ಪ ಯಾರನ್ನಾದರೂ ಕಚ್ಚಿದಾಗ, ಅದು ದೊಡ್ಡ ಪ್ರಮಾಣದಲ್ಲಿ ವಿಷವನ್ನು ಚುಚ್ಚುತ್ತದೆ. ಇದು ಸಾಮಾನ್ಯವಾಗಿ ಕಡಿಮೆ ಆಕ್ರಮಣಕಾರಿಯಾಗಿದ್ದರೂ ಸಹ.

ಆದರೆ ಭಾರತೀಯ ನಾಗರಹಾವಿನ(ಕೊಬ್ರಾ) ವರ್ತನೆ ಇದಕ್ಕೆ ವಿರುದ್ಧವಾಗಿದೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಭಾರತೀಯ ನಾಗರಹಾವು ಅತ್ಯಂತ ಮಾರಕವಾಗಿದೆ. ವಾಸ್ತವವಾಗಿ ಈ ಹಾವು ಮಾನವ ಜನಸಂಖ್ಯೆಗೆ ಬಹಳ ಹತ್ತಿರದಲ್ಲಿ ವಾಸಿಸುತ್ತದೆ. ಹೀಗಾಗಿ, ಇದು ಬೇಗನೆ ದಾಳಿ ಮಾಡಲು ಒಂದು ಕಾರಣವಾಗಿದೆ ಎಂದು ಹೇಳಲಾಗುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net