

Adult Videos : ಇಂಟರ್ನೆಟ್ ಇಂದು ನಮ್ಮ ಜಗತ್ತನ್ನು ಹೆಚ್ಚು ಸುಲಭಗೊಳಿಸಿದೆ. ಏಕೆಂದರೆ, ಅಂಗೈನಲ್ಲಿ ನಾವಿಂದು ಇಡೀ ಜಗತ್ತನ್ನು ಕಣ್ತುಂಬಿಕೊಳ್ಳಬಹುದು. ಗೂಗಲ್‌ನಲ್ಲಿ ಒಂದೇ ಒಂದು ಕ್ಲಿಕ್ ಮಾಡಿದರೆ ಸಾಕು ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದು ನಮ್ಮ ಕಣ್ಣುಗಳ ಮುಂದೆ ಬಂದು ನಿಲ್ಲುತ್ತದೆ. ಆದಾಗ್ಯೂ, ಇದರಲ್ಲಿ ಕೆಲ ಅನಾನುಕೂಲಗಳು ಸಹ ಇವೆ. ವಿಶೇಷವಾಗಿ ಯುವಕರಲ್ಲಿ ಇದರ ದುರ್ಬಳಕೆಯೇ ಹೆಚ್ಚು. ಯುವ ಜನಾಂಗ ಸಣ್ಣ ಅಗತ್ಯಗಳಿಗೂ ಇಂಟರ್ನೆಟ್ ಬಳಸುತ್ತಿದ್ದು, ಅಶ್ಲೀಲ ವಿಡಿಯೋಗಳ ವೀಕ್ಷಣೆ ಹೆಚ್ಚಾಗುತ್ತಿದೆ. ಇದರ ನಡುವೆ ಅಧ್ಯಯನವೊಂದರ ಅಂಕಿ-ಅಂಶ ಆಘಾತಕಾರಿಯಾಗಿದೆ.
ಪ್ರಸ್ತುತ, ಅಶ್ಲೀಲ ವಿಡಿಯೋಗಳ ವೆಬ್‌ಸೈಟ್‌ಗಳು ಅಂತಾರ್ಜಾಲದಲ್ಲಿ ಹೇರಳವಾಗಿವೆ. ಇಂಟರ್ನೆಟ್ ಮೂಲಕ ಪ್ರತಿಯೊಬ್ಬರನ್ನು ಸುಲಭವಾಗಿ ತಲುಪುತ್ತಿವೆ. ಒಂದು ವರದಿಯ ಪ್ರಕಾರ, 11 ರಿಂದ 16ನೇ ವಯಸ್ಸಿನ ಶೇ. 53 ರಷ್ಟು ಮಂದಿ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಭಾರತ ಕೂಡ ಹೊರತಾಗಿಲ್ಲ. ವಯಸ್ಕರ ವಿಡಿಯೋಗಳನ್ನು ವೀಕ್ಷಿಸುವ ವಿಶ್ವದ ಅಗ್ರ 30 ದೇಶಗಳಲ್ಲಿ ಭಾರತವೂ ಸೇರಿದೆ. ಪ್ರಪಂಚದಲ್ಲಿ ಯಾವ ದೇಶವು ಹೆಚ್ಚು ವಯಸ್ಕರ ವಿಡಿಯೋಗಳನ್ನು ವೀಕ್ಷಿಸುತ್ತದೆ ಎಂಬುದು ಇದೀಗ ಬಹಿರಂಗವಾಗಿದೆ. ಈ ಪಟ್ಟಿಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ ಎಂಬುದನ್ನು ತಿಳಿಯೋಣ.
ಇನ್‌ಸೈಡರ್ ಮಂಕಿ ವರದಿ ಪ್ರಕಾರ 2023ರಲ್ಲಿ ಅತಿ ಹೆಚ್ಚು ವಯಸ್ಕರ ವಿಡಿಯೋಗಳನ್ನು ವೀಕ್ಷಿಸಿದ ಅಗ್ರ 30 ದೇಶಗಳ ಪಟ್ಟಿಯಲ್ಲಿ ಫಿಲಿಪೈನ್ಸ್ ಅಗ್ರಸ್ಥಾನದಲ್ಲಿದೆ. ಇತರ ದೇಶಗಳ ಜನರಿಗೆ ಹೋಲಿಸಿದರೆ ಫಿಲಿಪೈನ್ಸ್ ಜನರು 2023ರಲ್ಲಿ ಹೆಚ್ಚು ವಯಸ್ಕರ ವಿಡಿಯೋಗಳನ್ನು ವೀಕ್ಷಿಸಿದ್ದಾರೆ. ಜಪಾನ್, ಫ್ರಾನ್ಸ್, ನೆದರ್ಲೆಂಡ್ ಮತ್ತು ಯೂಕ್ರೇನ್‌ನ ಜನರಿಗಿಂತ ಇಲ್ಲಿನ ನಾಗರಿಕರು ವಯಸ್ಕರ ವಿಡಿಯೋಗಳನ್ನು ವೀಕ್ಷಿಸಲು ಹೆಚ್ಚಿನ ಸಮಯವನ್ನು ಕಳೆದಿದ್ದಾರೆ. ಪ್ರತಿ ಬಾರಿ ಇಂಟರ್ನೆಟ್ಗೆ ಭೇಟಿ ನೀಡಿದ ಸಮಯದಲ್ಲಿ ಇಲ್ಲಿನ ಜನರು ಸರಾಸರಿ 11 ನಿಮಿಷ 31 ಸೆಕೆಂಡುಗಳ ಕಾಲ ಇಂತಹ ವಿಡಿಯೋಗಳನ್ನು ವೀಕ್ಷಿಸುತ್ತಾರೆ.
ಈ ಪಟ್ಟಿಯಲ್ಲಿ ಪೋಲೆಂಡ್ ಎರಡನೇ ಸ್ಥಾನದಲ್ಲಿದೆ. 1998ರ ಸೆಪ್ಟೆಂಬರ್ನಲ್ಲಿ ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ವಯಸ್ಕರ ವಿಡಿಯೋ ವೀಕ್ಷಣೆ ಮಾಡುವುದನ್ನು ಈ ದೇಶದಲ್ಲಿ ನಿಷೇಧಿಸಲಾಗಿದೆ. ಮಕ್ಕಳಿಗೆ ಲೈಂಗಿಕ ವಸ್ತುಗಳನ್ನು ನೀಡುವುದು ಅಥವಾ ತೋರಿಸುವುದು ಕಾನೂನುಬಾಹಿರವಾಗಿದೆ. ಹಿಂಸೆ ಮತ್ತು ಅತ್ಯಾಚಾರದ ದೃಶ್ಯಗಳನ್ನು ಒಳಗೊಂಡಿರುವ ವಯಸ್ಕರ ಸಿನಿಮಾಗಳನ್ನು ಮಾಡುವುದು ಸಹ ಕಾನೂನುಬಾಹಿರವಾಗಿದೆ. ಆದರೂ ಈ ದೇಶದಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ.
2023ರ ವರದಿ ಪ್ರಕಾರ ವಯಸ್ಕರ ವಿಡಿಯೋಗಳನ್ನು ವೀಕ್ಷಿಸುವ ವಿಶ್ವದ ಅಗ್ರ 30 ದೇಶಗಳಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ ಹೆಚ್ಚುತ್ತಿರುವ ಲೈಂಗಿಕ ಅಪರಾಧಗಳಿಗೆ ಅಶ್ಲೀಲತೆಯು ಪ್ರಮುಖ ಕಾರಣವಾಗಿದೆ ಎಂದು ಹಲವಾರು ಅಧ್ಯಯನಗಳು ಬಹಿರಂಗಪಡಿಸಿವೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅನೇಕರು ಅಶ್ಲೀಲ ವಿಡಿಯೋಗಳಿಗೆ ಅಡಿಕ್ಟ್ ಆಗಿದ್ದಾರೆ. ಭಾರತ ಸರ್ಕಾರವು ತನ್ನ ಐಟಿ ಕಾಯ್ದೆಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಅಶ್ಲೀಲತೆಯ ವಿರುದ್ಧ ಕ್ರಮಗಳನ್ನು ಕೈಗೊಂಡಿದ್ದರೂ ವೀಕ್ಷಣೆ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ.
2024ರಲ್ಲಿ ಅಮೆರಿಕದಲ್ಲಿ ನಡೆದ ಸಂಶೋಧನೆಯ ಪ್ರಕಾರ ಅಶ್ಲೀಲ ವೆಬ್ಸೈಟ್ಗೆ ಭೇಟಿ ನೀಡುವವರಲ್ಲಿ ಅಮೆರಿಕನ್ನರು ಮುಂಚೂಣಿಯಲ್ಲಿದ್ದಾರೆ. ಇಂತಹ ತಾಣಗಳಿಗೆ ಅಮೆರಿಕದ ಜನರು ಅತಿ ಹೆಚ್ಚು ಭೇಟಿ ನೀಡಿದ್ದಾರೆ ಎಂದು ಅಧ್ಯಯನ ಹೇಳಿದೆ. ಇಲ್ಲಿ ಅಶ್ಲೀಲ ವೆಬ್ಸೈಟ್ಗೆ ಭೇಟಿ ನೀಡಿದ ಜನರ ಸಂಖ್ಯೆ 3,171 ಮಿಲಿಯನ್. ಇದರ ನಂತರದಲ್ಲಿ ಇಂಡೋನೇಷ್ಯಾವಿದೆ. ಈ ದೇಶದ 765 ಮಿಲಿಯನ್ ಜನರು ಅಶ್ಲೀಲ ವೆಬ್ಸೈಟ್ಗಳಿಗೆ ಭೇಟಿ ನೀಡಿದ್ದಾರೆ. ಇಂಡೋನೇಷ್ಯಾ ನಂತರದ ಸ್ಥಾನದಲ್ಲಿ ಬ್ರೆಜಿಲ್, ಫ್ರಾನ್ಸ್, ಫಿಲಿಪೈನ್ಸ್, ಜಪಾನ್ ಮತ್ತು ಕೆನಡಾ ಇದೆ. ಈ ಪಟ್ಟಿಯಲ್ಲಿ ಭಾರತವು 9 ನೇ ಸ್ಥಾನದಲ್ಲಿದೆ. ಭಾರತದಲ್ಲಿ 284 ಮಿಲಿಯನ್ ಜನರು 2024ರಲ್ಲಿ ಅಶ್ಲೀಲ ವೆಬ್ಸೈಟ್ಗೆ ಭೇಟಿ ನೀಡಿದ್ದಾರೆ. (ಏಜೆನ್ಸೀಸ್)