ಆತ್ಮೀಯತೆ, ಗೌರವವಿದ್ದಲ್ಲಿ ದೇವರ ನೆಲೆ

shankar ashwath
ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಪೂಜಾ ಮಹೋತ್ಸವದಲ್ಲಿ ಚಲನಚಿತ್ರ ನಟ ಶಂಕರ್ ಅಶ್ವತ್ಥ ಅವರನ್ನು ಸನ್ಮಾನಿಸಲಾಯಿತು. ಮೋಹನ್‌ಕುಮಾರ್, ಭಾಸ್ಕರ್, ಚನ್ನಕೇಶವ, ಕೃಷ್ಣಮೂರ್ತಿ, ಸುಧಾಕರ್, ಜಗದೀಶ್ಚಂದ್ರ ಇದ್ದರು.
Published on

ಬಾಳೆಹೊನ್ನೂರು: ಎಲ್ಲಿ ಆತ್ಮೀಯತೆ, ಪ್ರೀತಿ, ವಿಶ್ವಾಸ, ಗೌರವ ಇರುತ್ತದೋ ಅಲ್ಲಿ ದೇವರು ಸದಾ ನೆಲೆ ನಿಲ್ಲುತ್ತಾನೆ ಎಂದು ಚಲನಚಿತ್ರ ನಟ ಶಂಕರ್ ಅಶ್ವತ್ಥ ಹೇಳಿದರು.
ಪಟ್ಟಣದ ನವರಾತ್ರಿ ಪೂಜಾ ಮಹೋತ್ಸವದ ದುರ್ಗಾಪೂಜಾ ಕಾರ್ಯಕ್ರಮಕ್ಕೆ ಭಾನುವಾರ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದೇವರ ಶಕ್ತಿ ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನು ಆಕರ್ಷಣೆ ಮಾಡಲಿದೆ. ದೇವರ ಇಚ್ಛೆ ಇದ್ದರೆ ಏನು ಬೇಕಾದರೂ ನಡೆಯಲಿದೆ ಎಂದರು.
ದೇವರನ್ನು ಎಲ್ಲಿಯೂ ಹುಡುಕುವುದು ಬೇಡ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಯೇ ದೇವರು ಅಡಗಿದ್ದಾನೆ. ನವರಾತ್ರಿ ಎನ್ನುವುದು ಶುಭ ಸಂದರ್ಭ. ಇಂತಹ ಸಂದರ್ಭದಲ್ಲಿ ಪಟ್ಟಣಕ್ಕೆ ಆಗಮಿಸಿ ದುರ್ಗಾದೇವಿಯ ಆಶೀರ್ವಾದ ಪಡೆದಿರುವುದು ನನ್ನ ಜೀವನದ ಸೌಭಾಗ್ಯ ಎಂದು ಹೇಳಿದರು.
ಬಾಳೆಹೊನ್ನೂರಿನಂತಹ ಗ್ರಾಮೀಣ ಭಾಗದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ನವರಾತ್ರಿ ಮಹೋತ್ಸವವನ್ನು ಮನೆಯ ಹಬ್ಬದಂತೆ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಸಮಿತಿ ಕಾರ್ಯಾಧ್ಯಕ್ಷ ವೈ.ಮೋಹನ್‌ಕುಮಾರ್, ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಉಪಾಧ್ಯಕ್ಷ ಚನ್ನಕೇಶವ್, ನಾಗರಾಜ್, ಸದಸ್ಯರಾದ ಎಚ್.ಎಚ್.ಕೃಷ್ಣಮೂರ್ತಿ, ದಿಡಿಗೆಮನೆ ಸುಧಾಕರ್, ಬಿ.ಜಗದೀಶ್ಚಂದ್ರ, ಕೆ.ಪ್ರಶಾಂತ್‌ಕುಮಾರ್, ಗೋವಿಂದರಾಜು, ಸುರೇಂದ್ರ, ಮಣಿಕಂಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net