ಮೂರು ಮಕ್ಕಳ ತಾಯಿ ನಟಿ ರಂಭಾ ಈಗ ಎಲ್ಲಿದ್ದಾರೆ? ಈ ಸುಂದ್ರಿಗೆ ಎಷ್ಟು ದೊಡ್ಡ ಮಗಳಿದ್ದಾಳೆ ನೋಡಿ…

rambha
Published on

ಬೆಂಗಳೂರು: 90ರ ದಶಕದಲ್ಲಿ ನಟಿ ರಂಭಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸ್ಟಾರ್ ಹೀರೋಯಿನ್. ಮದುವೆ ನಂತರ ಸಿನಿಮಾಗಳಿಂದ ದೂರ ಇರುವ ನಟಿ ಸೋಶಿಯಲ್​​ ಮೀಡಿಯಾದಲ್ಲಿ ಆಗ್ಗಾಗೆ ಕುಟುಂಬದ ಜತೆಗೆ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಒಂದು ಕಾಲದಲ್ಲಿ ಪಡ್ಡೆಹುಡುಗರ ನಿದ್ದೆ ಕೆಡಿಸಿದ್ದ ಈ ನಟಿ ಇಂದು ಎಲ್ಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ರಂಭಾ ಮೊದಲ ಚಿತ್ರದಲ್ಲೇ ನಾಯಕಿಯಾಗಿ ಕ್ರೇಜ್ ಗಳಿಸಿದರು. ಇದರೊಂದಿಗೆ ಅವರಿಗೆ ಟಾಲಿವುಡ್ ಇಂಡಸ್ಟ್ರಿಯಲ್ಲಿ ಸಾಲು ಸಾಲು ಅವಕಾಶಗಳು ಬಂದವು. ಅತಿ ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋಗಳ ಎದುರು ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್ ಕೃಷ್ಣ, ಮೆಗಾಸ್ಟಾರ್ ಚಿರಂಜೀವಿ, ವೆಂಕಟೇಶ್, ನಾಗಾರ್ಜುನ, ಬಾಲಕೃಷ್ಣ ಹೀಗೆ ಎಲ್ಲಾ ಸ್ಟಾರ್ ಹೀರೋಗಳ ಜತೆ ನಟಿಸಿ ಮೆಚ್ಚುಗೆ ಪಡೆದರು. 90ರ ದಶಕದಲ್ಲಿ ರಂಭಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳಕಿಗೆ ಬಂದಿದ್ದರು. ತೆಲುಗು ಅಲ್ಲದೆ, ತಮಿಳು, ಮಲಯಾಳಂ, ಕನ್ನಡ, ಹಿಂದಿ ಮುಂತಾದ ಭಾಷೆಗಳಲ್ಲಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬರೀ ನಾಯಕಿಯಷ್ಟೇ ಅಲ್ಲ.. ಹಲವು ಸಿನಿಮಾಗಳಲ್ಲಿ ವಿಶೇಷ ಗೀತೆಗಳಲ್ಲಿ ಹೆಜ್ಜೆ ಹಾಕಿ ರಂಜಿಸಿದ್ದರು.

ಸಿನಿಮಾದಲ್ಲಿ ಸಕ್ಸಸ್​ ಕಾಣುತ್ತೀರುವಾಗಲೇ ರಂಭಾ 2010ರಲ್ಲಿ, ಕೆನಡಾದ ಉದ್ಯಮಿ ಇಂದ್ರಕುಮಾರ್ ಅವರನ್ನು ವಿವಾಹವಾದರು.ಮದುವೆಯ ನಂತರ ರಂಭಾ ಸಿನಿಮಾದಿಂದ ಸಂಪೂರ್ಣ ದೂರ ಉಳಿದಿದ್ದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಪ್ರಸ್ತುತ ಅವರು ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಬಹಳ ದಿನಗಳಿಂದ ಸಿನಿಮಾದಿಂದ ದೂರ ಉಳಿದಿರುವ ರಂಭಾ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ.

ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ತನ್ನ ಸಿನಿಮಾಗಳಿಗೆ ಸಂಬಂಧಿಸಿದ ವಿಶೇಷ ದಿನಗಳು.. ಇಂಡಸ್ಟ್ರಿಯಲ್ಲಿರುವ ಸ್ನೇಹಿತರ ಬಗ್ಗೆಯೂ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ. ಈ ಕ್ರಮದಲ್ಲಿ ಇತ್ತೀಚೆಗಷ್ಟೇ ತಮ್ಮ ಹಿರಿಯ ಮಗಳ ಜತೆಗಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ. 'ಮೈ ಏಂಜೆಲ್' ಎಂದು ಶೀರ್ಷಿಕೆ ನೀಡಿದ್ದಾರೆ. ಸದ್ಯ ರಂಭಾ ಶೇರ್ ಮಾಡಿರುವ ಫೋಟೋಗಳು ವೈರಲ್ ಆಗುತ್ತಿವೆ.

ನೆಟ್ಟಿಗರು ರಂಭಾ ಅವರ ಮಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಾಯಿಯಂತೆ ಕಾಣುತ್ತಿದ್ದಾರೆ.. ಜೂನಿಯರ್ ರಂಭಾ, ಮುದ್ದಾದ ಪುಟ್ಟ ರಾಜಕುಮಾರಿ.. ತುಂಬಾ ಸುಂದರವಾಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net