

NEET PG : ನೀಟ್ ಪಿಜಿ ಪರೀಕ್ಷೆಯ ಫಲಿತಾಂಶವನ್ನು ಇನ್ನೇನು ಕೆಲವೇ ದಿನಗಳಲ್ಲಿ ಘೋಷಿಸಲಾಗುವುದು ಎಂದು ಪರೀಕ್ಷಾ ನಿರ್ವಹಣೆ ಸಂಸ್ಥೆಯು ತಿಳಿಸಿದೆ.
ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ ( NBEMS) ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಆಗಸ್ಟ್ 3, 2025 ರಂದು ನೀಟ್ ಪಿಜಿ ಪರೀಕ್ಷೆಯನ್ನು ನಡೆಸಿತು. ಈ ಪರೀಕ್ಷೆಯಲ್ಲಿ ವೈದ್ಯರಿಗೆ ಎಂಡಿ, ಎಂಎಸ್ ಮತ್ತು ಪಿಜಿ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಗೇಟ್‌ವೇ ಎಂದು ಪರಿಗಣಿಸಲಾಗಿದೆ. ಈ ಬಾರಿಯೂ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಪರೀಕ್ಷಾ ಮಂಡಳಿ ಪ್ರಕಾರ ನೀಟ್ ಪಿಜಿ ಫಲಿತಾಂಶವನ್ನು ಸೆಪ್ಟೆಂಬರ್ 3ರೊಳಗೆ nbe.edu.in/ natboard.edu. ಈ ವೆಬ್ಸೈಟ್ನಲ್ಲಿ ಬಿಡಲಾಗುವುದು ಕಳೆದ ಬಾರಿಯಂತೆ ಈ ಬಾರಿಯೂ ಪಿಡಿಎಫ್ ಮಾದರಿಯಲ್ಲಿ ಫಲಿತಾಂಶ ಬರಲಿದೆ. ಅಭ್ಯರ್ಥಿಗಳ ತಮ್ಮ ಹೆಸರು, ನೋಂದಣಿ ಸಂಖ್ಯೆ ಇನ್ನಿತರ ವಿವರಗಳನ್ನು ಒಳಗೊಂಡಿರುತ್ತದೆ.
ಇನ್ನು ಫಲಿತಾಂಶದ ಬಿಡುಗಡೆಯೊಂದಿಗೆ ಕಟ್ಆಫ್ ಮತ್ತು ಅರ್ಹತಾ ಶೇಕಡವಾರುಗಳನ್ನು ಸಹ ತಿಳಿಸಲಾಗುತ್ತದೆ. ನಂತರ ಅಖಿಲ ಭಾರತ ಹಾಗೂ ರಾಜ್ಯಮಟ್ಟದಿಂದ ಕೌನ್ಸೆಲಿಂಗ್ ಪ್ರಾರಂಭವಾಗುತ್ತದೆ ಎಂದು ತಿಳಿಸಿದೆ.
* ಫಲಿತಾಂಶವನ್ನು ಪರಿಶೀಲಿಸಲು nbe.edu.in/ natboard.edu.in ಗೆ ಭೇಟಿ ನೀಡಿ.
* ಮುಖಪುಟದಲ್ಲಿ NEET PG Result 2025 ಲಿಂಕ್ ಕ್ಲಿಕ್ ಮಾಡಿ
* ಲಾಗಿನ್ ಪುಟದಲ್ಲಿ ನಿಮ್ಮ ಬಳಕೆದಾರ ID ಮತ್ತು ಪಾಸ್ವರ್ಡ್ನಂತಹ ವಿವರಗಳನ್ನು ನಮೂದಿಸಿ
* ಫಲಿತಾಂಶದ ಪಿಡಿಎಫ್ ಡೌನ್ಲೋಡ್ ಮಾಡಿ, ನಿಮ್ಮ ರೋಲ್ ಸಂಖ್ಯೆಯನ್ನು ಹುಡುಕಿ.
ಸೂಚನೆ: ನೀವು ವೈಯಕ್ತಿಕ ಸ್ಕೋರ್ಕಾರ್ಡ್ ಅನ್ನು ಪ್ರತ್ಯೇಕವಾಗಿ ಡೌನ್ಲೋಡ್ ಮಾಡಬಹುದು.
ನೀಟ್ ಪಿಜಿ ಫಲಿತಾಂಶದೊಂದಿಗೆ ಕಟ್ಆಫ್ ಅಂಕಗಳನ್ನು ಕೂಡಾ ಬಿಡುಗಡೆ ಮಾಡುತ್ತಾರೆ. ಕಳೆದ ಬಾರಿಯ ಕಟ್ಆಫ್ಗಳನ್ನು ನೀವು ಗಮನಿಸಬಹುದು.
* ಸಾಮಾನ್ಯ ವರ್ಗ - ಶೇ. 50
* ಎಸ್ಸಿ/ ಎಸ್ಟಿ/ ಒಬಿಸಿ - ಶೇ. 40
* ಪಿಡಬ್ಯೂಡಿ - ಶೇ. 45
ಅಭ್ಯರ್ಥಿಗಳ ಕಾರ್ಯಕ್ಷಮತೆ ಮತ್ತು ಪರೀಕ್ಷೆ ತೊಂದರೆ ಅವಲಂಬಿಸಿ, ಕಟ್ಆಫ್ ಸ್ಕೋರ್ ಪ್ರತಿ ಬದಲಾಗುತ್ತದೆ.
ಅಖಿಲ ಭಾರತ ಕೋಟಾ (ಶೇ. 50) ಸೀಟುಗಳಿಗೆ ಎಂಸಿಸಿ ಕೌನ್ಸೆಲಿಂಗ್ ನಡೆಸುತ್ತದೆ
ರಾಜ್ಯ ಅಧಿಕಾರಿಗಳು ತಮ್ಮ ರಾಜ್ಯ ಕೋಟಾ (ಶೇ.50) ಸೀಟುಗಳಿಗೆ ಕೌನ್ಸೆಲಿಂಗ್ ನಡೆಸುತ್ತಾರೆ
* ನೋಂದಣಿ ಮತ್ತು ಶುಲ್ಕ ಪಾವತಿ
* ಆಯ್ಕೆ ಭರ್ತಿ ಮತ್ತು ಲಾಕಿಂಗ್ ( ಕಾಲೇಜು ಹಾಗೂ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು)
* ಸೀಟು ಹಂಚಿಕೆ ಫಲಿತಾಂಶ
* ವರದಿ ಮಾಡುವಿಕೆ ಮತ್ತು ದಾಖಲೆ ಪರಿಶೀಲನೆ
* ಮುಂದಿನ ಸುತ್ತುಗಳು – ಒಟ್ಟು 4 ಸುತ್ತುಗಳು
(ಏಜೆನ್ಸೀಸ್)